ಹೊಸದಿಲ್ಲಿ: “ದಿ ಲಾರ್ಡ್ ಆಫ್ ರಿಂಗ್ಸ್ ‘ ಹಾಲಿವುಡ್ ಸಿರೀಸ್ ವೀಕ್ಷಿಸಿದವರಿಗೆ “ಗಿಮ್ಲಿ ‘ ಎಂಬ ಪಾತ್ರದ ಬಗ್ಗೆ ಖಂಡಿತ ತಿಳಿದಿರುತ್ತದೆ. ನೀವು ಆ ಸಿರೀಸ್ ಅನ್ನು ನೋಡಿಲ್ಲ ಅಥವಾ ಆ ಪಾತ್ರದ ಬಗ್ಗೆ ತಿಳಿದಿಲ್ಲ ಎಂದಾದರೆ ಅದರ ಕುರಿತು ನಾವಿಲ್ಲಿ ತಿಳಿಸಿದ್ದಿವೆ. ಸಾಹಸ ಆಧಾರಿತ ಫ್ಯಾಂಟಸಿ ಸಿನೆಮಾ ಸಿರೀಸ್ ಇದಾಗಿದೆ. ಇದರಲ್ಲಿ ಬರುವಂತ ಒಂದು ಪ್ರಮುಖ ಮತ್ತು ಕುಬ್ಜ ಯೋಧನ ಪಾತ್ರವೇ ಗಿಮ್ಲಿ. ಆದರೆ ನಾವು ಹೇಳುತ್ತಿರುವುದ ಆ ಪಾತ್ರದ ಕುರಿತಾಗಿ ಅಲ್ಲ. ಆ ಕುಬ್ಜ ಯೋಧನ ಫೋಟೋ ಒಂದರ ಕುರಿತಾಗಿ. ಈಗ ಸಾಮಾಜಿಕ ಜಾಲತಾಣದಲ್ಲಿ ಗಿಮ್ಲಿ ಪಾತ್ರದ ಚಿತ್ರವೊಂದು ಸಂಚಲನ ಮೂಡಿಸಿದ್ದು, ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಈ ಚಿತ್ರದಲ್ಲಿ ಅಂಥಹದ್ದೇನಿದೆ! ಎಂದು ನಿಮಗನಿಸಬಹುದು. ಅದರಲ್ಲಿರುವ ವಿಶೇಷತೆಯನ್ನು ತಿಳಿಯಬೇಕಾದರೆ ಫೋಟೋವನ್ನೊಮ್ಮೆ ಝೂಮ್ ಮಾಡಿ ನೋಡಬೇಕು.
ಮೇಲ್ನೋಟಕ್ಕೆ ಸಾಮಾನ್ಯ ಚಿತ್ರದಂತೆ ಕಾಣುವ ಇದನ್ನು ಝೂಮ್ ಮಾಡಿದಾಗ “ದಿ ಲಾರ್ಡ್ ಆಫ್ ರಿಂಗ್ಸ್ ‘ ಚಿತ್ರದ ಹಲವಾರು ಸ್ಕ್ರೀನ್ ಶಾಟ್‌ಗಳನ್ನು ನೀವು ಅಲ್ಲಿ ಕಾಣಬಹುದು. ಒಟ್ಟು ಹತ್ತು ಸಾವಿರ ಸ್ಕ್ರೀನ್‌ಶಾಟ್‌ಗಳನ್ನು ಈ ಚಿತ್ರದಲ್ಲಿ ಸೇರಿಸಲಾಗಿದೆ. ಆದರೂ ಮೇಲ್ನೋಟಕ್ಕೆ ಇದು ಒಂದೇ ಚಿತ್ರದಂತೆ ಕಾಣುವುದು ಇದರ ವಿಶೇಷ. ಚಿತ್ರದ ಮೇಲೆ ಬರೆದಿರುವ “ದೆಟ್ ಸ್ಟಿಲ್ ಕೌಂಟ್ಸ್ ಆ್ಯಸ್ ಒನ್’ ಎಂಬ ಬರಹ ಆ ಸಿರೀಸ್‌ನಲ್ಲಿ ಯುದ್ದದ ಸಂದರ್ಭ ಗಿಮ್ಲಿ ಹೇಳುವ ಪ್ರಸಿದ್ದ ಡೈಲಾಗ್ ಆಗಿದೆ. ಈ ವೈರಲ್ ಚಿತ್ರವನ್ನು ಆ ಡೈಲಾಗ್ ಪುಷ್ಠಿàಕರಿಸುವಂತಿದೆ.
ಮೂಲ ಚಿತ್ರಕ್ಕೆ ಸಿನೆಮಾದ ದೃಶ್ಯಗಳ ಸ್ಕ್ರೀನ್‌ಶಾಟ್‌ಗಳನ್ನು ಸೇರಿಸಿ ಈ ಚಿತ್ರವನ್ನು ಎಡಿಟ್ ಮಾಡಾಲಾಗಿದೆ. ಈ ಚಿತ್ರ ಶೇರ್ ಆದಾಗಿನಿಂದ 25 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಹಲವಾರು ಜನ ಪ್ರತಿಕ್ರಿಯೆ ನಿಡಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.