Advertisement
ಇದು ರಾಜಸ್ಥಾನದ ಕೋಟಾ ನಗರ ನಿವಾಸಿ, 56ರ ಹರೆಯದ ಬದ್ರಿಲಾಲ್ ಮೀನಾ ಅವರ ವ್ಯಥೆ. ಮಧುಮೇಹಿಯಾಗಿರುವ ಮೀನಾ ಅವರಿಗೆ ಮೊದಲು ಹಿಮ್ಮಡಿ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಹೋದಾಗ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮೀನಾ ದೇಹದಿಂದ 75 ಪಿನ್‌ಗಳನ್ನು ಹೊರತೆಗೆದಿದ್ದರು. ಆ ನಂತರವೂ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಂಡಾಗ ಮೀನಾ ಮತ್ತೆ ಸರ್ಜರಿ ಮಾಡಿಸಿಕೊಳ್ಳಲು ಐದು ಆಸ್ಪತ್ರೆ ಸುತ್ತಿದರು. ಕಡೆಗೆ ಫರೀದಾ ಬಾದ್‌ನ ಏಷ್ಯನ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೀನಾರ ಕುತ್ತಿಗೆ, ಕೈ, ಹಿಮ್ಮಡಿ ಮತ್ತು ಕಾಲುಗಳಿಂದ ಮತ್ತೆ 75 ಪಿನ್‌ಗಳನ್ನು ಹೊರತೆಗೆದರು. ಕೆಲ ಪಿನ್‌ಗಳು ಅವರ ಶ್ವಾಸನಾಳ, ಅನ್ನನಾಳ, ಅಪಧಮನಿಯಲ್ಲಿ ಸಿಲುಕಿದ್ದವು ಎಂದು ಡಾ| ಲಲಿತ್ ಮೋಹನ್ ಪರಾಶರ್ ಹೇಳಿದ್ದಾರೆ. ಇದೇ ವೇಳೆ, ಆತನನ್ನು ಮಾನಸಿಕ ಚಿಕಿತ್ಸೆಗೆ ಒಳಪಡಿಸಬೇಕೆಂದೂ ಸೂಚಿಸಿದ್ದಾರೆ. ಏಕೆಂದರೆ, ಕೆಲ ಮಾನಸಿಕ ರೋಗಿಗಳು ತಾವಾಗಿಯೇ ಸೂಜಿಯಂಥ ವಸ್ತುಗಳನ್ನು ತಮ್ಮ ದೇಹದೊಳಕ್ಕೆ ಸೇರಿಸಿರುತ್ತಾರೆ. ಆದರೆ, ತಾವು ಅಂಥದ್ದನ್ನು ಮಾಡಿಲ್ಲ ಎನ್ನುತ್ತಾರೆ ಎಂದೂ ವೈದ್ಯರು ಹೇಳಿದ್ದಾರೆ. Advertisement
ಸೂಜಿ ಶರೀರ…ಈತನ ದೇಹದಲ್ಲಿತ್ತು 150 ಪಿನ್!
10:27 AM Jul 11, 2017 | |
Advertisement
Udayavani is now on Telegram. Click here to join our channel and stay updated with the latest news.