Advertisement

ರೆಡ್‌ಕ್ರಾಸ್‌ ಪಕ್ಷಾತೀತ-ಜಾತ್ಯತೀತ ಸಂಸ್ಥೆ: ನಾಗಣ್ಣ

04:50 PM Jul 14, 2019 | Naveen |

ಹಿರಿಯೂರು: ರೆಡ್‌ಕ್ರಾಸ್‌ ಹೆಸರನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಹೆಚ್ಚಿಸುವ ಕೆಲಸವನ್ನು ಹಿರಿಯೂರು ರೆಡ್‌ಕ್ರಾಸ್‌ ಸಂಸ್ಥೆ ಮಾಡುತ್ತಿದೆ ಎಂದು ರಾಜ್ಯ ರೆಡ್‌ಕ್ರಾಸ್‌ ಚೇರ್‌ಮನ್‌ ಎಸ್‌. ನಾಗಣ್ಣ ಹೇಳಿದರು.

Advertisement

ಹಿರಿಯೂರು ರೆಡ್‌ಕ್ರಾಸ್‌ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಉಚಿತ ವ್ಹೀಲ್ಚೇರ್‌, ತ್ರಿಚಕ್ರ ಸೈಕಲ್ ಮತ್ತು ಪರಿಕರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸಂವಿಧಾನದ ಅಡಿಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಸಂಸ್ಥೆ ಪಕ್ಷಾತೀತ ಹಾಗೂ ಜಾತ್ಯತೀತ ಸಂಸ್ಥೆಯಾಗಿದೆ. ಸಮಾಜಮುಖೀ ಹಾಗೂ ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದಲ್ಲಿನ ಬಡವರ, ದೀನದಲಿತರ, ನೊಂದವರ, ವಿಕಲಚೇತನರ ಪಾಲಿನ ಆಶಾಕಿರಣವಾಗಿದೆ ಎಂದು ಬಣ್ಣಿಸಿದರು.

ಬೆಂಗಳೂರಿನ ಸಾಲ್ವೆ ರೆಜಿನ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಡಾ| ರೆಜಿನ ಸೀಲನ್‌ ಮಾತನಾಡಿ, ವಿಕಲಚೇತನರೂ ಸಹ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬದುಕುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಈ ಉದ್ದೇಶದಿಂದ ನಮ್ಮ ಟ್ರಸ್ಟ್‌ ವತಿಯಿಂದ ಅಗತ್ಯ ಪರಿಕರಗಳನ್ನು ನೀಡಲಾಗುತ್ತಿದೆ ಎಮದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ 10 ವ್ಹೀಲ್ಚೇರ್‌, 10 ತ್ರಿಚಕ್ರ ಸೈಕಲ್ ಹಾಗೂ ಕೂಲಿ ಕಾರ್ಮಿಕರಿಗೆ 210 ರೆಡಿಮೇಡ್‌ ಶರ್ಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಮಾಜಿ ಚೇರ್‌ಮನ್‌ ಬಸ್ರೂರು ರಾಜೇಶ್‌ ಶೆಟ್ಟಿ, ರೆಡ್‌ಕ್ರಾಸ್‌ ಚೇರ್‌ಮನ್‌ ಎಚ್.ಎಸ್‌. ಸುಂದರ್‌ ರಾಜ್‌, ಉಪಾಧ್ಯಕ್ಷ ಬಿ.ಎಸ್‌. ನವಾಬ್‌ ಸಾಬ್‌, ಜಿಲ್ಲಾ ವಿಕಲ ಚೇತನರ ನೋಡಲ್

Advertisement

ಅಧಿಕಾರಿ ಮಂಜುನಾಥ ನಾಡರ್‌, ಜಿಲ್ಲಾ ಯೂತ್‌ ರೆಡ್‌ಕ್ರಾಸ್‌ ನೋಡಲ್ ಅಧಿಕಾರಿ ಎಚ್.ತಿಪ್ಪೇಸ್ವಾಮಿ, ಕೆ.ಆರ್‌. ವೆಂಕಟೇಶ್‌, ಎಂ.ಎಸ್‌. ರಾಘವೇಂದ್ರ, ಎಂ.ಎನ್‌. ಸೌಭಾಗ್ಯವತಿದೇವರು, ಬಾಲಕೃಷ್ಣ ಶೆಟ್ಟಿ, ಮಹೇಂದ್ರನಾಥ್‌, ಅರುಣ್‌ ಕುಮಾರ್‌, ಶಶಿಕಲಾ ರವಿಶಂಕರ್‌, ಎಚ್.ಪಿ. ರವೀಂದ್ರನಾಥ್‌, ಬಿ.ಕೆ. ನಾಗಣ್ಣ, ಮಹಾಬಲೇಶ್ವರ ಶೆಟ್ಟಿ, ವೈ.ಎಸ್‌. ಉಮಾಶಂಕರ್‌, ಪರಮೇಶ್ವರ ಭಟ್, ಬಸವರಾಜ್‌, ಆಲೂರು ಹನುಮಂತರಾಯಪ್ಪ, ಸತೀಶ್‌ಬಾಬು ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next