Advertisement

ಸರಕು ಸಾಗಣೆ ವಾಹನದಲ್ಲಿ ಸಂಚಾರ ಬೇಡ

03:18 PM May 12, 2019 | Naveen |

ಹಿರಿಯೂರು: ಸರುಕು ಸಾಗಾಣಿಕ ವಾಹನದಲ್ಲಿ ಶಾಲಾ ಮಕ್ಕಳನ್ನು ಮತ್ತು ಜನರನ್ನು ಸಾಗಿಸುವುದು ಕಾನೂನು ಬಾಹಿರ ಎಂದು ಅಪರ ಸಿವಿಲ್ ನ್ಯಾಯಾಧೀಶೆ ಫರ್ಹಾ ಬೇಗಂ ಸೈಯ್ಯದ್‌ ಹೇಳಿದರು.

Advertisement

ತಾಲೂಕಿನ ಜೆ.ಜೆ. ಹಳ್ಳಿ ಗ್ರಾಮದ ಬಳಿ ಇರುವ ಆಕ್ಸ್‌ಸರಿಸ್‌ ಪ್ರೈವೇಟ್ ಲಿಮಿಟೆಡ್‌ ಗಾರ್ಮೆಂಟ್ಸ್‌ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರಿಗೆ ಇಲಾಖೆ ಚಿತ್ರದುರ್ಗ, ಗ್ಲೋಬಲ್ ಮೋಡ್‌ ಮತ್ತು ಆಕ್ಸಸರಿಸ್‌ ಪ್ರೈವೇಟ್ ಲಿಮಿಟೆಡ್‌ ಸಂಯುಕ್ತಾಶ್ರಯದಲ್ಲಿ ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕು ವಾಹನದಲ್ಲಿ ಜಾನುವಾರುಗಳನ್ನು ಮಾತ್ರ ಸಾಗಿಸಲು ಪರವಾನಗಿ ನೀಡಲಾಗಿದೆ. ಪ್ರಯಾಣಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಸಾಗಿಸಲು ಅನುಮತಿ ಇಲ್ಲ. ಸರಕು ಸಾಗಾಣಿಕೆ ವಾಹನಗಳಿಗೆ ಆಕಸ್ಮಿಕವಾಗಿ ಅಪಘಾತ ಸಂಭವಿಸಿದಲ್ಲಿ ಅದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ವಿಮಾ ಸೌಲಭ್ಯಗಳು ಸಿಗುವುದಿಲ್ಲ. ಇದರಿಂದ ಪ್ರಾಣಕ್ಕೆ ಅಪಾಯ ಎದುರಾಗುತ್ತದೆ. ಆದ್ದರಿಂದ ಈ ಬಗ್ಗೆ ಕಾರ್ಮಿಕರು ಹಾಗೂ ಸಾರ್ವಜನಿಕರು ಜಾಗೃತರಾಗಿ ಸರಕು ಸಾಗಾಣಿಕ ವಾಹನಗಳಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ನ್ಯಾಯವಾದಿಗಳಾದ ಮಹಾಬಲೇಶ್‌ ಮತ್ತು ಟಿ. ಜಗದೀಶ್‌ ಉಪನ್ಯಾಸ ನೀಡಿದರು. ಕಾರ್ಮಿಕ ಇಲಾಖೆ ಅಧಿಕಾರಿ ಎಚ್.ಎನ್‌. ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಕೆಎಸ್‌ ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಕೃಷ್ಣಪ್ರಸಾದ್‌, ಕಾರ್ಮಿಕ ಇಲಾಖೆ ನಿರೀಕ್ಷಕ‌ರಾದ ರಾಜಣ್ಣ, ದಿವಾಕರ್‌, ಗಾರ್ಮೆಂರ್ಟ್ಸ್ ಸೀನಿಯರ್‌ ಮೆನೇಜರ್‌ ರಾಬರ್ಟ್‌ ಡಿಸೋಜ, ವಕೀಲರುಗಳಾದ ಧ್ರುವಕುಮಾರ್‌, ಬಿ. ಜಗದೀಶ್‌ ಭಾಗವಹಿಸಿದ್ದರು.

ಸರಕು ಸಾಗಾಣಿಕೆ ವಾಹನಗಳಿಗೆ ಆಕಸ್ಮಿಕವಾಗಿ ಅಪಘಾತ ಸಂಭವಿಸಿದಲ್ಲಿ ಅದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ವಿಮಾ ಸೌಲಭ್ಯಗಳು ಸಿಗುವುದಿಲ್ಲ. ಇದರಿಂದ ಪ್ರಾಣಕ್ಕೆ ಅಪಾಯ ಎದುರಾಗುತ್ತದೆ. ಆದ್ದರಿಂದ ಈ ಬಗ್ಗೆ ಕಾರ್ಮಿಕರು ಹಾಗೂ ಸಾರ್ವಜನಿಕರು ಜಾಗೃತರಾಗಿರಬೇಕು.
ಫರ್ಹಾಬೇಗಂ ಸೈಯ್ಯದ್‌,
ಅಪರ ಸಿವಿಲ್ ನ್ಯಾಯಾಧೀಶರು.

Advertisement

Udayavani is now on Telegram. Click here to join our channel and stay updated with the latest news.

Next