Advertisement

ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣ

01:18 PM Jun 22, 2020 | Naveen |

ಹಿರಿಯೂರು: ಮಾನವೀಯ ನಡೆ, ನುಡಿ, ಸಂಸ್ಕಾರ, ಜೀವನ ಸಾಕ್ಷಾತ್ಕಾರಕ್ಕೆ ಎಲ್ಲರೂ ಯೋಗ ಮತ್ತು ಪ್ರಾಣಾಯಾಮವನ್ನು ರೂಢಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಯೋಗ ಪಟು ಸ್ಫೂರ್ತಿ ಯೋಗ ಕೇಂದ್ರದ ಎಸ್‌.ಟಿ. ರಾಘವೇಂದ್ರ ಹೇಳಿದರು.

Advertisement

ನಗರದ ಸ್ಫೂರ್ತಿ ಯೋಗ ಕೇಂದ್ರದದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗದ ಮಹತ್ವವನ್ನು ಸರಿಯಾಗಿ ತಿಳಿದುಕೊಂಡರೆ ರೋಗ ಮುಕ್ತ ಸಮಾಜವನ್ನು ನಿರ್ಮಿಸಬಹುದು. ಪ್ರತಿಯೊಬ್ಬರ ಬದುಕು ಹಸನಾಗಲು ಯೋಗ ವರದಾನವಾಗಿದೆ. ಯೋಗವನ್ನು ಪತಂಜಲಿ ಮಹರ್ಷಿಗಳು ಜಗತ್ತಿಗೆ ಪರಿಚಯಿಸಿದ್ದಾರೆ. ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜೂ. 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಂತೆ ಮಾಡಿದ್ದಾರೆ ಎಂದರು.

ವಿಶ್ವದ ಬಹುತೇಕ ರಾಷ್ಟ್ರಗಳು ಯೋಗದ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಂಡು ಯೋಗಾಭ್ಯಾಸವನ್ನು ರೂಢಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ಯೋಗವನ್ನು ಭಾರತೀಯರೇ ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ ಎಂದು ವಿಷಾದಿಸಿದರು. ರೋಟರಿ ಕ್ಲಬ್‌ ಅಧ್ಯಕ್ಷ ಪ್ರಶಾಂತ ಕಂದೂರ್‌, ನಾಗಭೂಷಣ್‌, ರಾಮಕೃಷ್ಣ, ಶಿವಪ್ರಸಾದ್‌, ರಾಜಶೇಖರ್‌, ಭುವನೇಶ್ವರಿ, ಶುಭಾ ನಾಗಭೂಷಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next