ಹಿರಿಯೂರು: ನಗರದ ಜಯನಗರ ಬಡಾವಣೆ ನಿವಾಸಿಗಳಾದ ಡಾ.ಬಸವರಾಜ್ ಮತ್ತು ಡಾ.ವಿದ್ಯಾಶ್ರೀ ವೈದ್ಯ ದಂಪತಿ ಮಗನಾದ ಅರ್ಜುನ್ ಸಂಕದಾಳ (ಎರಡು ವರ್ಷ 10 ತಿಂಗಳು) ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರನ್ನು ದಾಖಲಿಸಿದ್ದಾನೆ. 195 ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಹೆಸರನ್ನು 27 ನಿಮಿಷಗಳಲ್ಲಿ
ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿ ಅಚ್ಚರಿ ಮೂಡಿಸಿದ್ದಾನೆ. 100 ದೇಶಗಳ ಹೆಸರನ್ನು ಹೇಳಿ ಗ್ಲೋಬ್ ನಲ್ಲಿ ಅವುಗಳನ್ನು ಗುರುತಿಸಿ ಎಲ್ಲರನ್ನು ತಬ್ಬಿಬ್ಬುಗೊಳಿಸುತ್ತಾನೆ. ಮಗನ ಅದ್ಭುತ ಶಕ್ತಿಯನ್ನು ಗಮನಿಸಿದ ತಂದೆ, ತಾಯಿಗಳು ಅವನ ವಿಶೇಷ ಚಟುವಟಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಿ, 2020 ಡಿ. 11 ಹರ್ಯಾಣ ರಾಜ್ಯದ ಫರೀದಾಬಾದ್‌ನಲ್ಲಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಕಳುಹಿಸಿದ್ದಾರೆ. ಅಲ್ಲಿ ಅವನ ಸಾಧನೆ ದಾಖಲಾಗಿದ್ದು, ಅಂಚೆ ಮೂಲಕ ಪ್ರಶಸ್ತಿ ಕಳುಹಿಸಿಕೊಟ್ಟಿದ್ದಾರೆ. ನಂತರ ಫೆ 2. 2021 ರಂದು ವರ್ಲ್ಡ್ ಬುಕ್ ಆಫ್
ರೆಕಾರ್ಡ್‌ನಲ್ಲಿ ಅರ್ಜುನ್ ಹೆಸರು ದಾಖಲಾಗಿ ಅವನಿಗೆ ವಿಶ್ವ ಮಟ್ಟದ ಪ್ರಶಸ್ತಿ ಪತ್ರ ದೊರೆತಿದೆ. ಮಗನ ಈ ಅದ್ಬುತ ಸಾಧನೆ ಬಗ್ಗೆ ವೈದ್ಯ ದಂಪತಿ ಹೆಮ್ಮ ಪಡುತ್ತಾರೆ. ಪೋರನ ಚಟುವಟಿಕೆ ಕುರಿತು ಮಾತನಾಡಿದ ಪೋಷಕರು, ಒಂದು ವರ್ಷ ಮಗುವಾಗಿದ್ದಾಗಲೇ ಅವನಲ್ಲಿ ವಿಶೇಷವಾದಂತಹ ಗುಣಗಳ ಕಂಡು ಬಂದವು. ಮನೆಯ ಸುತ್ತಮುತ್ತ ಮತ್ತು ವಾಕಿಂಗ್ ಸಮಯದಲ್ಲಿ ಮತ್ತು ಊಟ ಮಾಡಿಸುವ ಸಮಯದಲ್ಲಿ ತಾಯಿ ವಿದ್ಯಾಶ್ರೀ ಮನೆಯ ಮುಂದೆ ಬರುವಂತಹ ಪ್ರಾಣಿಗಳನ್ನು ತೋರಿಸುವುದು ಅವುಗಳ ಹೆಸರು ಹೇಳುವುದು ಮಾಡುತಿದ್ದರಂತೆ.
ಅಲ್ಲಿ ಕೇಳಿ ಬರುವಂತಹ ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಆಲಿಸುವುದು ಮತ್ತೂಮ್ಮೆ ಅವುಗಳನ್ನು ಅನುಕರಣೆ ಮಾಡುವುದು ಕಂಡು ಬಂತು. ಇವುಗಳನ್ನು ಗಮನಿಸಿ ನಾವು ಅವನಿಗೆ ವಿವಿಧ ಪ್ರಾಣಿ ಪಕ್ಷಿಗಳ ಚಾರ್ಟ್ ಬುಕ್‌ನ್ನು ನೀಡಿದೆವು. ಬೋರ್ಡ್ ಮೇಲೆ ಪ್ರಾಣಿಗಳ ಚಿತ್ರ ಬರೆದು ಕೇಳಿದರೆ ಅವುಗಳ ಹೆಸರನ್ನು ಹೇಳುತ್ತಿದ್ದ. ಚಿಕ್ಕ ಚಿಕ್ಕ ಕಥೆಗಳನ್ನು ಹೇಳಿ ಮತ್ತೆ ಕೇಳಿದರೆ ಹೇಳುತ್ತಿದ್ದ. ಇವೆಲ್ಲವು ಅವನಲ್ಲಿ ಕಂಡ ಬಂದ ವಿಶೇಷ ಗುಣಗಳಾಗಿದ್ದವು ಎಂದು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ವೇಳೆ ತಾಯಿ ಡಾ.ವಿದ್ಯಾಶ್ರೀ ಮನೆಯಲ್ಲೆ ಹಲವು ರೀತಿಯ ಚಟುವಟಿಕಗಳ ಕುರಿತು ತಿಳಿಸಿದ್ದಾರೆ. ನಂತರದಲ್ಲಿ ಇವುಗಳನ್ನು ನಾವು ಗ್ಲೋಬ್ ತಂದು ಅವನಿಗೆ ಗ್ಲೋಬ್ ನಲ್ಲಿರುವ ದೇಶಗಳ ಹೆಸರು, ರಾಜಧಾನಿಗಳು ಹೇಳಿ ಅವುಗಳ ಚಿತ್ರ ತೋರಿಸುವುದನ್ನು ಅಭ್ಯಾಸ ಮಾಡಿಸಿದೇವು. ಅದು ಯಶಸ್ವಿಯಾಗಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸುತ್ತಾರೆ.