Advertisement

ಉಡುವಳ್ಳಿ ಕೆರೆಗೆ ಮಾಜಿ ಸಚಿವ ಸುಧಾಕರ್‌ ಬಾಗಿನ ಅರ್ಪಣೆ

07:19 PM Nov 25, 2021 | Team Udayavani |

ಹಿರಿಯೂರು: ಮಳೆಯಿಂದಾಗಿ ಕೋಡಿಬಿದ್ದಿರುವ ತಾಲೂಕಿನ ಉಡುವಳ್ಳಿ ಕೆರೆಗೆಮಾಜಿ ಸಚಿವ ಡಿ. ಸುಧಾಕರ್‌ ಬಾಗಿನ ಅರ್ಪಿಸಿದರು.

Advertisement

ನಂತರ ಮಾತನಾಡಿದ ಅವರು,ಕಳೆದ 10 ವರ್ಷಗಳ ನನ್ನ ಅ ಧಿಕಾರದಅವ ಧಿಯಲ್ಲಿ ತಾಲೂಕಿನ ನೀರಾವರಿಯೋಜನೆಗಳಿಗೆ ಹೆಚ್ಚು ಅನುದಾನನೀಡಿದ್ದೆ. ಉಡುವಳ್ಳಿ μàಡರ್‌ನಾಲೆ ಯೋಜನೆ ಕಾಮಗಾರಿಗೆಮರುಚಾಲನೆ ನೀಡಿ ಕಾಲಮಿತಿಯಲ್ಲಿಪೂರ್ಣಗೊಳಿಸಲಾಗಿತ್ತು. ಇದರಫಲವಾಗಿ ವ್ಯರ್ಥವಾಗಿ ಹರಿಯುತ್ತಿದ್ದಕತ್ತೆಹೊಳೆ ನೀರು ಉಡುವಳ್ಳಿ ಕೆರೆಗೆ ಹರಿದಿದೆ. ವರುಣನ ಕೃಪೆಯಿಂದಕೋಡಿ ಬಿದ್ದಿದೆ ಎಂದರು.

ನೀರಾವರಿ ವಿಚಾರದಲ್ಲಿ ಸುಧಾಕರ್‌ಏನು ಮಾಡಿದ್ದಾರೆ ಎಂದು ಕೆಲವರುಟೀಕಿಸುತ್ತಾರೆ. ವೇದಾವತಿ ನದಿಪಾತ್ರದಲ್ಲಿ ಸರಣಿ ಚೆಕ್‌ಡ್ಯಾಂನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿಹೋರಾಟ ಮಾಡಿ ವಿಶೇಷ ಅನುದಾನತರಲಾಗಿತ್ತು. ಮಾಜಿ ಸಚಿವ ಟಿ.ಬಿ.ಜಯಚಂದ್ರ ಇದಕ್ಕೆ ಸಾಕ್ಷಿಯಾಗಿದ್ದು,ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ ಆತ್ಮತƒಪ್ತಿ ನನಗಿದೆಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಆರ್‌.ನಾಗೇಂದ್ರ ನಾಯ್ಕ ಮಾತನಾಡಿ,ಡಿ.ಟಿ. ಶ್ರೀನಿವಾಸ್‌ರವರು ತಾಲೂಕುಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.ಅವರು ಜನಪ್ರತಿನಿ ಧಿ ಅಲ್ಲದಿದ್ದರೂ ಕೆರೆ,ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿದ್ದಾರೆ.ಬಿಜೆಪಿ ಇದನ್ನು ಟೀಕಿಸಲಿ ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿಸದಸ್ಯರಾದ ಸುರೇಶ್‌ಬಾಬು,ಅಮೃತೇಶ್ವರಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ಖಾದಿ ಜೆ. ರಮೇಶ್‌,ರಂಗನಾಥ್‌, ಶಶಿಕಲಾ, ಪೂಜಣ್ಣ,ಲೋಕೇಶ್‌, ದಿಂಡಾವರ ಮಹೇಶ್‌,ಸೋಮಶೇಖರ್‌, ಪಿ.ಎಸ್‌. ಸಾದತ್‌ವುಲ್ಲಾ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next