Advertisement

Hiriydaka: ಹಿರಿಯಡಕ ನಿವಾಸಿ, ಬೆಂಗಳೂರು ಉದ್ಯಮಿ ತೀರ್ಥಳ್ಳಿಯಲ್ಲಿ ಆತ್ಮಹತ್ಯೆ

07:52 PM Oct 12, 2024 | Team Udayavani |

ಹಿರಿಯಡಕ: ಇಲ್ಲಿನ ಕೊಂಡಾಡಿ ಮೂಲದ ಪ್ರಸನ್ನ ಶೆಟ್ಟಿ (45) ತೀರ್ಥಹಳ್ಳಿಯ ವಸತಿ ಗೃಹದಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಅವರು 3 ದಿನಗಳ ಹಿಂದೆ ತೀರ್ಥಳ್ಳಿಗೆ ಆಗಮಿಸಿ ವಸತಿಗೃಹದಲ್ಲಿ ವಾಸ್ತವಾವಿದ್ದರು. ನಿನ್ನೆ ಕೊಠಡಿಯಿಂದ ಯಾವುದೇ ಶಬ್ದ ಕೇಳಿಸದ್ದರಿಂದ ಅನುಮಾನ ಗೊಂಡ ಸಿಬಂದಿ ಬಾಗಿಲು ತೆರೆದು ನೋಡಿದಾಗ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತು.

ಬರುವಾಗಲೇ ತಂದಿದ್ದ ಸೀರೆ:

ಪ್ರಸನ್ನ ಬೆಂಗಳೂರಿನಿಂದ ಮಡದಿಯ ಸೀರೆಯೊಂದನ್ನು ತಂದಿದ್ದು ಹೊರಡುವ ಮೊದಲೇ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದರು.ಸುಮಾರು ಆರು ಪುಟಗಳ ಡೆತ್‌ ನೋಟ್‌ ಬರೆದಿಟ್ಟು ಸಾವಿನ ಕಾರಣ ವಿವರಿಸಿದ್ದಾರೆ. ಕೆಲವೊಂದು ಹೆಸರುಗಳನ್ನು ಬರೆದಿದ್ದು ಮತ್ತೆ ಕೆಲವು ತನ್ನ ವ್ಯವಹಾರದ ವಿಷಯಗಳನ್ನು ಬರೆದಿಟ್ಟಿದ್ದರು ಎಂದು ಪೊಲೀಸ್‌ ಮೂಲದಿಂದ ತಿಳಿದು ಬಂದಿದೆ. ಪ್ರಸನ್ನ ಶೆಟ್ಟಿ, ಬೆಂಗಳೂರಿನಲ್ಲಿ ರೆಸ್ಟೋರೆಂಟ್‌, ಬೇಕರಿ ಮತ್ತು ಹಣದ ವ್ಯವಹಾರವನ್ನು ನಡೆಸುತ್ತಿದ್ದರು.

ಅಂತ್ಯಕ್ರಿಯೆಯನ್ನು ಇಂದು ಅವರ ಹಿರಿಯರ ಮನೆಯಾದ ಕೊಂಡಾಡಿಯಲ್ಲಿ ನೆರವೇರಿಸಲಾಯಿತು. ಮೃತರು ಪತ್ನಿ, ಎರಡು ವರ್ಷದ ಪುತ್ರಿ, ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next