Advertisement

ಹಿರಿಯಡಕ ಕ್ಷೇತ್ರ: ಇಂದು ಬ್ರಹ್ಮಕಲಶೋತ್ಸವ ಸಂಭ್ರಮ

06:15 AM Apr 22, 2018 | Team Udayavani |

ಹಿರಿಯಡಕ: 26 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ  ಸುಮಾರು  800  ವರ್ಷ ಇತಿಹಾಸ ವಿರುವ  ಶ್ರೀ ವೀರಭದ್ರ ಸ್ವಾಮಿ ದೇಗುಲದಲ್ಲಿ ಎ. 22 ರಂದು ಬ್ರಹ್ಮಕಲಶೋತ್ಸವ ಜರಗಲಿದೆ. 

Advertisement

ಆದಿ-ಆಲಡೆ ಎಂದು ಗುರುತಿಸಲ್ಪಡುವ ಈ ಕ್ಷೇತ್ರದಲ್ಲಿ ಎ. 16ರಿಂದ ಎ. 25ರ ತನಕ ವಿವಿಧ ಕಾರ್ಯಕ್ರಮ ನಡೆದಿದ್ದು ಎ. 22ರಂದು ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಹಸ್ರ ಸಂಖ್ಯೆಯ ಭಕ್ತ ಸಾಗರ ಸಾಕ್ಷಿಯಾಗಲಿದೆ.

ಆಲಡೆ ಕ್ಷೇತ್ರವಾದ ಹಿರಿಯಡಕ ಕ್ಷೇತ್ರ ಅತ್ಯಾಕರ್ಷಕ ಕೆತ್ತನೆ, ದಾರುಶಿಲ್ಪದ  ಮೂಲಕ ಭಕ್ತ ಸಮೂಹವನ್ನು ಆಕರ್ಷಿ ಸುತ್ತಿದೆ. ಉಡುಪಿ, ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಪ್ರದೇಶಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ  ಅಡಚಣೆಯಾಗದಂತೆ   ಜೀರ್ಣೋದ್ಧಾರ ಸಮಿತಿ ಸುಮಾರು 1,500 ಸ್ವಯಂ ಸೇವಕರ ಮೂಲಕ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಸುಸಜ್ಜಿತ  ಪಾರ್ಕಿಂಗ್‌ ವ್ಯವಸ್ಥೆ 
ಸುಮಾರು 3 ಸಾವಿರಕ್ಕೂ ಮಿಕ್ಕಿ ವಾಹನಗಳ ನಿಲುಗಡೆಗೆ 6 ಪ್ರದೇಶಗಳಲ್ಲಿ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು ಉಡುಪಿ, ಮಣಿಪಾಲ ದಿಂದ ಆಗಮಿಸುವ  ಭಕ್ತರಿಗೆ   ಮಾಧವ ಮಂಗಲ ಸಭಾಭವನದ ಬಳಿ, ಹೆಬ್ರಿ ಕಡೆಯಿಂದ ಆಗಮಿಸುವವರಿಗೆ ಹಿರಿಯಡಕ ಗಾಂಧಿ ಮೈದಾನ ಬಳಿ, ಕಾರ್ಕಳ ಕಡೆಯಿಂದ ಬರುವವರಿಗೆ ಕೋಟ್ನಕಟ್ಟೆ ಗಾಂಧಿ ಮೈದಾನ ಬಳಿ, ಬ್ರಹ್ಮಾವರ ಪೇತ್ರಿ ಕಡೆಯಿಂದ ಬರುವವರಿಗೆ ಬಜೆ ರಸ್ತೆಯ ಸಪ್ನಾ ರೆಸ್ಟೋರೆಂಟ್‌ ಬಳಿ, ಪುರೋಹಿತರು ಮತ್ತು ಸ್ವಯಂಸೇವಕರಿಗೆ ದೇವಸ್ಥಾನದ ಹಿಂಬದಿ ಮಾದ್ರಿ ರಸ್ತೆ ಬಳಿ ಪಾರ್ಕಿಂಗ್‌ ವ್ಯವಸ್ಥೆ  ಮಾಡಲಾಗಿದೆ.

ದೇವಸ್ಥಾನಕ್ಕೆ ಉಚಿತ ವಾಹನ 
ಪಾರ್ಕಿಂಗ್‌ ಸ್ಥಳದಿಂದ ದೇವಸ್ಥಾನಕ್ಕೆ ಸುಮಾರು 50ಕ್ಕೂ ಹೆಚ್ಚು ವಾಹನಗಳಿಂದ ಉಚಿತ ವ್ಯವಸ್ಥೆ ಮಾಡಲಾಗಿದೆ.

Advertisement

ಶೀಘ್ರ ದೇವರ ದರ್ಶನ 
ಅಪಾರ ಭಕ್ತರು ದೇವರ ದರ್ಶನಕ್ಕೆ ಬರುವುದರಿಂದ ಯಾವುದೇ ನೂಕು ನುಗ್ಗಲು ಆಗದಂತೆ ಕೇವಲ 15 ನಿಮಿಷಗಳ‌ ಒಳಗೆ ದೇವರ ದರ್ಶನ ಮಾಡಿ ಬರುವಂತೆ  ವ್ಯವಸ್ಥೆ ಕಲ್ಪಿಸಲಾಗಿದೆ.60 ಸಾವಿರಕ್ಕೂ  ಅಧಿಕ ಮಂದಿಗೆ ಅನ್ನಸಂತರ್ಪಣೆ ಎ. 16ರಿಂದ ನಿರಂತರ ಉಪಾಹಾರ, ಅನ್ನಸಂತರ್ಪಣೆ   ನಡೆಯುತ್ತಿದ್ದು ಎ. 22ರಂದು ನಡೆಯುವ ಬ್ರಹ್ಮ ಕಲಶೋತ್ಸವಕ್ಕೆ ಸುಮಾರು 60 ಸಾವಿರಕ್ಕೂ ಮಿಕ್ಕಿ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.  ನೂಕುನುಗ್ಗಲು   ತಡೆ ಯಲು ಏಕಕಾಲದಲ್ಲಿ 3 ಸಾವಿರ ಮಂದಿ  ಕುಳಿತು ಊಟ ಮಾಡುವ ಟೇಬಲ್‌ ವ್ಯವಸ್ಥೆ,  6 ಸಾವಿರ ಜನರಿಗಾಗುವಷ್ಟು  ಬಫೆ  ಕೌಂಟರ್‌  ವ್ಯವಸ್ಥೆ  ಮಾಡಲಾಗಿದೆ.

ಸುಧರ್ಮ ಸಭೆ
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸುಧರ್ಮ ಸಭೆ  ಶ್ರೀ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನ್ಯಾ| ಮೂ|  ಶ್ರೀ ವಿಶ್ವನಾಥ ಶೆಟ್ಟಿ, ಡಾ| ಬಿ.ಎಂ. ಹೆಗ್ಡೆ, ಎಸ್‌.ಎನ್‌. ಹೆಗ್ಡೆ, ಡಾ| ರತನ್‌ ಕೇಳ್ಕರ್‌, ಮುನಿಯಂಗಳ ಪ್ರಸಾದ್‌ ಭಟ್‌, ನಾಡೋಜ ಜಿ. ಶಂಕರ್‌, ಡಾ| ಎಂ. ಮೋಹನ್‌ ಆಳ್ವ,  ಸದನಂ ನಾರಾಯಣ ಪುದುವಾಳ್‌, ಬಿ. ಜಗನ್ನಾಥ ಶೆಟ್ಟಿ, ಡಾ| ಶಶಿಕಿರಣ್‌ ಶೆಟ್ಟಿ, ಎನ್‌.ಬಿ. ಶೆಟ್ಟಿ, ಪ್ರಕಾಶ್‌ ಶೆಟ್ಟಿ  ಪರೀಕ, ಪಿ.ಎ. ಕಿಣಿ, ಬಸ್ತಿ ಸರ್ವೋತ್ತಮ ಪೈ, ಕೊಡಿಬೈಲು ನಾರಾಯಣ ಹೆಗ್ಡೆ, ಅರುಣಾಕರ ಡಿ. ಶೆಟ್ಟಿ ಭಾಗವಹಿಸಲಿದ್ದಾರೆ. 

ಸಾಂಸ್ಕೃತಿಕ ವೈವಿಧ್ಯ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ  ರಾಷ್ಟ್ರ ಮಟ್ಟದ  ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಎ. 22ರಂದು ಸಂಜೆ 7ರಿಂದ ಪಂ| ಪ್ರವೀಣ್‌ ಗೋಡಿRಂಡಿ ಮತ್ತು ಬಳಗ ಬೆಂಗಳೂರು ಅವರಿಂದ ಕೊಳಲು ವಾದನ, ರಾತ್ರಿ 9ಕ್ಕೆ ಸನಾತನ ನಾಟ್ಯಾಲಯ ಮಂಗಳೂರು, ನೃತ್ಯ ನಿಕೇತನ ಕೊಡವೂರು, ವಸಂತ ನಾಟ್ಯಾಲಯ ಕುಂದಾಪುರ ಅವರಿಂದ ನೃತ್ಯ ಸಿಂಚನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next