Advertisement
ಉಡುಪಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ 169ಎ ಹಿರಿಯಡಕ ಮೂಲಕ ಹಾದುಹೋಗುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಉಡುಪಿ, ಕಾರ್ಕಳ, ಹೆಬ್ರಿಯಿಂದ ಬರುವ ವಾಹನಗಳು ದೇವಸ್ಥಾನ ಎದುರಿನ ಜಂಕ್ಷನ್ ಬಳಿ ಹಾದು ಹೋಗ ಬೇಕಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಬೆಳಗ್ಗೆ ಹಾಗೂ ಸಂಜೆ ಹೊತ್ತು ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿ ರಸ್ತೆ ದಾಟುವ ಪಾದಚಾರಿಗಳ ಸಮಸ್ಯೆ ಹೇಳ ತೀರದಂತಾಗಿದೆ. ಸಂಜೆ ಹೊತ್ತು ಕೆಲಸಕ್ಕೆ ಹೆಚ್ಚಲು ಕಾರಣವಾಗಿದೆ. ಜಂಕ್ಷನ್ ಭಾಗ ತೀರ ಕಿರಿದಾ ಗಿದ್ದು ಇಕ್ಕಟ್ಟಿನಿಂದ ಕೂಡಿದೆ. ಒಂದೇ ಸಮನೆ ಮೂರು ಮಾರ್ಗಗಳಿಂದ ಬಸ್ಸು ಹಾಗೂ ಇತರ ವಾಹನಗಳು ಬಂದಾಗ ವಾಹನ ದಟ್ಟಣೆ ಹೆಚ್ಚುತ್ತದೆ. ಕೆಲವೊಂದು ಬಸ್ಸುಗಳು ತಂಗುದಾಣಕ್ಕೆ ಬರದೆ ಜಂಕ್ಷನ್‌ನಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಹತ್ತಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಆದ್ದರಿಂದ ಹಿರಿಯಡಕ್ಕೆ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣವಾಗಬೇಕಾಗಿದೆ. ಹೋದ ಕಾರ್ಮಿಕರು ರಸ್ತೆ ದಾಟಲು ಬಹಳ ಹೊತ್ತು ಕಾಯುವ ಪ್ರಸಂಗಗಳಿವೆ. ಬೆಳಗ್ಗೆ ಹೊತ್ತು ಶಾಲಾ ಮಕ್ಕಳು ಭಯದ ನಡುವೆ ರಸ್ತೆ ದಾಟಬೇಕಾಗಿದೆ.
Related Articles
Advertisement
ಸರಿಯಾದ ತಂಗುದಾಣ ಹಾಗೂ ಟ್ರಾಫಿಕ್ ಸಮಸ್ಯೆ ನಿಭಾಯಿಸುವ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಆಗಿದೆ. ಇನ್ನಾದರೂ ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಿದಲ್ಲಿ ವಾಹನ ಸವಾರರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. – ಶಕ್ತಿ ಪ್ರಸಾದ್ ಶೆಣೈ, ಸ್ಥಳೀಯರು, ಹಿರಿಯಡಕ
-ಹೆಬ್ರಿ ಉದಯಕುಮಾರ್ ಶೆಟ್ಟಿ