Advertisement

Hirekerur: ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

06:14 PM Aug 31, 2023 | Team Udayavani |

ಹಿರೇಕೆರೂರ: ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿವೆ. ಹಾಗಾಗಿ, ಪ್ರತಿಯೊಬ್ಬರು ಕ್ರೀಡೆಗಳಲ್ಲಿ
ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ|ಎಸ್‌.ಪಿ.ಗೌಡರ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಕಿ ಪಟು ಮೇಜರ್‌ ಧ್ಯಾನ್‌ ಚಂದ್‌ ಅವರ ಜನ್ಮ ದಿನಾಚರಣೆ ನಿಮಿತ್ತ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನುಷ್ಯನ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಕ್ರೀಡೆ ಪ್ರಮುಖ ಕಾರಣವಾಗುತ್ತದೆ.

ಮನುಷ್ಯ ಕ್ರೀಡಾ ಚಟುವಟಿಕೆಗಳಿಂದ ಪಡೆಯುವ ಮಾನಸಿಕ ನೆಮ್ಮದಿಯನ್ನು ಇನ್ನಾವ ಮೂಲಗಳಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಮೇಜರ್‌ ಧ್ಯಾನಚಂದ್‌ ಎಂಬ ಧ್ರುವತಾರೆ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಆಟಗಾರರಾಗಿದ್ದು, ಅವರನ್ನು ಸರಿಗಟ್ಟುವ ಯಾವ ಆಟಗಾರರು ಇರಲಿಲ್ಲ. ಅಷ್ಟೇ ಅಲ್ಲ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ ಎಂದು ಹೇಳಿದರು.

ಕ್ರೀಡಾ ವಿಭಾಗದ ದೈಹಿಕ ಶಿಕ್ಷಣ ಉಪನ್ಯಾಸಕ ಬಸವರಾಜ ಮಾಗಳದ ಮಾತನಾಡಿ, ಭಾರತದ ಕ್ರೀಡಾಲೋಕದ ನಕ್ಷತ್ರ ಮೇಜರ್‌ ಧ್ಯಾನ್‌ಚಂದ್‌ ಭಾರತಕ್ಕೆ ಹಲವು ಬಾರಿ ಸ್ವರ್ಣ ಪದಕಗಳನ್ನು ತಂದುಕೊಡುವ ಮೂಲಕ ಪ್ರಪಂಚದಲ್ಲಿ ಭಾರತದ ಕ್ರೀಡಾ ಸಾಧನೆ ಎತ್ತಿ ತೋರಿದ ಶ್ರೇಷ್ಠ ಕ್ರೀಡಾಪಟು. ಪ್ರಪಂಚದ ಗಮನವನ್ನು ಧ್ಯಾನ್‌ ಚಂದ್‌ ಸೆಳೆದರು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕಿ ಹೇಮಲತಾ ಕೆ., ಪತ್ರಾಂಕಿತ ವ್ಯವಸ್ಥಾಪಕಿ ಭಾರತಿ ಕೆ.ಎಸ್‌., ಉಪನ್ಯಾಸಕರಾದ ಜಯಕುಮಾರ ಹುಲ್ಲಿನಕೊಪ್ಪ, ಸೋಮಲಿಂಗಪ್ಪ ಚಿಕ್ಕಳ್ಳವರ, ಅಧೀಕ್ಷಕಿ ಚಿನ್ನಮ್ಮ ಬಡಿಗೇರ, ಸಿಬ್ಬಂದಿ ವಿ.ಜಿ.ಪಾಟೀಲ, ಅಂಬಿಕಾ, ನಿರ್ಮಲಾ ಬೆನಾಳ, ತನುಜಾ ಬಡಿಗೇರ, ಬಸನಗೌಡ ಗೌಡರ, ಸಂಗಪ್ಪ ಚಲವಾದಿ, ಮೌನೇಶ್‌ ಬಾತಮ್ಮನವರ ಹಾಗೂ
ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next