Advertisement
ಹೌದು, ಇಂದು ನಾವು ಬೆಳ್ಳೊಳ್ಳಿ ಹಾಗೂ ಉಳ್ಳಾಗಡ್ಡಿ ಬಳಸದೆಯೇ ಹಿರೇಕಾಯಿಯ ಎಣ್ಣೆಗಾಯಿ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
Related Articles
Advertisement
ಮೊದಲಿಗೆ ಹಿರೇಕಾಯಿ ನೀರಿನಲ್ಲಿ ತೊಳೆದು, ಕಾಟನ್ ಬಟ್ಟೆಯಿಂದ ಒರೆಸಿಕೊಂಡು ಅರ್ಧಗಂಟೆವರೆಗೆ ಇಡಬೇಕು.
ನಂತರ ಹಿರೇಕಾಯಿಯನ್ನು ತುಂಡುಗಳನ್ನಾಗಿ ಕತ್ತರಿಸಿ, ಪ್ರತಿ ತುಂಡುಗಳ ಮಧ್ಯೆ ಮಸಾಲೆ ತುಂಬಲು ಅನುಕೂಲವಾಗುವಂತೆ ಕಟ್ ಮಾಡಬೇಕು.
ಒಂದು ಪಾತ್ರೆಯಲ್ಲಿ ಶೇಂಗಾ ಪುಡಿ, ಗುರೆಳ್ಳು ಪುಡಿ ಹಾಗೂ ಮಸಾಲೆ ಪುಡಿ, ಉಪ್ಪು, ಖಾರದ ಪುಡಿ, ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. (ವಿ.ಸೂ : ಶೇಂಗಾ ಹಾಗೂ ಗುರೆಳ್ಳು ಪಡಿಯನ್ನು ಸಮಪ್ರಮಾಣದಲ್ಲಿ ಬೆರೆಸಬೇಕು. ರುಚಿಗೆ ತಕ್ಕಷ್ಟು ಖಾರ ಹಾಗೂ ಉಪ್ಪು ಹಾಕಿಕೊಳ್ಳಬೇಕು.)
ಮೇಲಿನ ಎಲ್ಲಾ ಡ್ರೈ ಪದಾರ್ಥಗಳನ್ನು ಚನ್ನಾಗಿ ಮಿಕ್ಸ್ ಮಾಡಿದ ನಂತರ ಎರಡು ಚಮಚ ಅಡುಗೆ ಎಣ್ಣೆ ಹಾಕಿ, ಕೈಯಿಂದ ಚನ್ನಾಗಿ ಕಲಿಸಿಕೊಳ್ಳಬೇಕು. ನಂತರ ಮಸಾಲೆಯನ್ನು ಹಿರೇಕಾಯಿಯಲ್ಲಿ ತುಂಬಬೇಕು.
ಗ್ಯಾಸ್ ಸ್ಟೋವ್ ಮೇಲೆ ಕಡಾಯಿ ಇಟ್ಟು, ಅದರಲ್ಲಿ ಎರಡು ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಬಳಿಕ ಒಂದು ಚಮಚ ಸಾಸಿವೆ ಕಾಳು ಹಾಕಿ. ಸಾಸಿವೆ ಚಟಪಡ ಸಿಡಿದ ಮೇಲೆ ಒಂದು ಚಮಚ ಜೀರಿಗೆ, ಇಂಗು, ಕರಿಬೇವು ಹಾಗೂ ಕಟ್ ಮಾಡಿದ ಕೊತ್ತಂಬರಿ ಸೊಪ್ಪು ಹಾಕಿ. ಚನ್ನಾಗಿ ಹುರಿದ ನಂತರ ಹುಣಸೆ ರಸ ಬೆರೆಸಿ. ಆಮೇಲೆ ಸ್ವಲ್ಪ ನೀರು, ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಧ್ಯಮ ಬೆಂಕಿಯಲ್ಲಿ ಎರಡು ನಿಮಿಷಗಳ ವರೆಗೆ ಚನ್ನಾಗಿ ಕುದಿಸಬೇಕು.
ಹುಣಸೆ ಹುಳಿ ಕುದಿಯೊಕೆ ಪ್ರಾರಂಭಿಸಿದಾಗ ಮಸಾಲೆ ತುಂಬಿದ ಹಿರೇಕಾಯಿ ತುಂಡುಗಳನ್ನು ಅದರಲ್ಲಿ ಹಾಕಬೇಕು. ನಂತರ ಐದು ನಿಮಿಷ ಬೇಯಿಸಬೇಕು. ಈ ಹಿರೇಕಾಯಿ ಎಣ್ಣೆಗಾಯಿಗೆ ಜಾಸ್ತಿ ನೀರು ಹಾಕಬಾರದು. ಕೇವಲ ಎಣ್ಣೆ ಹಾಗೂ ಹುಣಸೆ ಹುಳಿಯಲ್ಲಿ ಹಿರೇಕಾಯಿ ಬೇಯಬೇಕು.