ಹಿರೇಬಾಗೇವಾಡಿ: ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯಲ್ಲಿ ತಮ್ಮನ್ನು ಕಡೆಗಣಿಸಿ ಹಲಗಾ ಗ್ರಾಮದ ಕಾರ್ಮಿಕರನ್ನು ಬಳಸಿಕೊಂಡು ಹಿರೇಬಾಗೇವಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಕಾರಿ ನಿರ್ವಹಿಸುತ್ತಿರುವ ತಾಪಂ ಅಧಿ ಕಾರಿಗಳ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿ ಗ್ರಾಪಂಗೆ ಮುತ್ತಿಗೆ ಹಾಕಿರುವ ಘಟನೆ ಗುರುವಾರ ನಡೆದಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಿರೇಬಾಗೇವಾಡಿಗೆ ಸ್ಥಳಂತರಿಸುವ ಹಿನ್ನೆಲೆಯಲ್ಲಿ ಅದಕ್ಕೆ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳಲಾಗಿದ್ದು, ಅದಕ್ಕೆ ಬೇರೆ ಗ್ರಾಮಗಳ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ಹಿರೇಬಾಗೇವಾಡಿಯಲ್ಲಿನ ಆಸಕ್ತರಿಗೆ ಕೂಡಲೆ ಜಾಬ್ ಕಾರ್ಡ್ ಮಾಡಿಸಿಕೊಡುವುದು ಹಾಗೂ ಸ್ಥಳೀಯರಿಗೆ ಆದ್ಯತೆ ಮೇರೆಗೆ ನರೆಗಾ ಯೋಜನೆಯಲ್ಲಿ ಕೆಲಸ ನೀಡಬೇಕೆಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
ಇದಕ್ಕೆ ಸ್ಪಂದಿಸಿದ ಪಿಡಿಓ ಉಷಾ ಎಸ್., ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ ಹಾಗೂ ಗ್ರಾಪಂ ಸದಸ್ಯರು ಪ್ರತಿಭಟನಾಕಾರ ರೊಂದಿಗೆ ಸಮಾಲೋಚಿಸಿ, ಕೂಡಲೆ ಸ್ಥಳಿಯರ ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿ ಪ್ರತಿಭಟನಾಕಾರರ ಮನವೊಲಿಸಿದರು.
ಇದನ್ನೂ ಓದಿ :ಮಧ್ವನವಮಿ ಉತ್ಸವ ಆಚರಣೆ
ಯುವ ಧುರೀಣ ಉಮೇಶ ನಂದಿ, ಬಸನಗೌಡ ಹಾದಿಮನಿ, ಚಂದ್ರಪ್ಪ ಹಾದಿಮನಿ, ದೊಡ್ಡಪ್ಪ ನಾಯ್ಕರ, ರುದ್ರಪ್ಪ ವಾಲಿಕಾರ, ಬಸವರಾಜ ಅಳ್ಳಾವಾಡ, ಬಸ್ಸಪ್ಪ ಸುತಗಟ್ಟಿ, ಆನಂದ ಪಾಟೀಲ, ಚನ್ನಮ್ಮ ನಾಯ್ಕರ, ಬಸ್ಸವ್ವ ಅಳ್ಳಾವಾಡ, ಗಂಗವ್ವ ಪಾಟೀಲ, ಕಾಶವ್ವ ರೊಟ್ಟಿ, ಗಂಗವ್ವ ಹಾದಿಮನಿ, ಶಂತವ್ವ ರೊಟ್ಟಿ, ಶೋಭಾ ಹಾದಿಮನಿ, ಆನಂದ ಪಾರಿಶ್ವಾಡ, ಶಿವಪ್ಪ ಘೋಡಗೇರಿ, ಚಂದ್ರು ಕುರುಬರ, ನಾಗಪ್ಪ ಅಂಬಲಿ, ಬಸವರಾಜ ಅರಳೀಕಟ್ಟಿ, ಸದೆಪ್ಪ ಹಾದಿಮನಿ, ಚಂದ್ರಗೌಡ ಹಾದಿಮನಿ, ಮಹಾದೇವಿ ಹಾದಿಮನಿ, ಶಿವಲೀಲಾ ಅರಳೀಕಟ್ಟಿ, ನಿರ್ಮಲಾ ಹಾದಿಮನಿ, ಸುವರ್ಣಾ ಅಂಬಲಿ, ಕಸ್ತೂರಿ ಹಾದಿಮನಿ ಸೇರಿದಂತೆ ಇತರರು ಇದ್ದರು.