Advertisement

ಸೊಂಟ, ಕಾಲು ಸುಭದ್ರ

04:54 AM Jun 02, 2020 | Lakshmi GovindaRaj |

ಯೋಗದಲ್ಲಿ, ಪಶ್ಚಿಮೋತ್ತಾಸನ ಬಹಳ ಮುಖ್ಯ. ಏಕಕಾಲಕ್ಕೆ ಸೊಂಟ, ಬೆನ್ನು ಹಾಗೂ ಶಿರದ ಭಾಗವನ್ನು ಕ್ರಿಯಾಶೀಲವಾಗಿಡುವ ಆಸನವಿದು. ಈ ಆಸನ ಹಾಕುವಾಗ ಉಸಿರನ್ನು ಎಳೆದುಕೊಳ್ಳುವ, ನಂತರ ಬಿಡುವ ಕ್ರಮವನ್ನು  ಸರಿಯಾಗಿ ಹೃದಯರಾಗ ತಿಳಿದುಕೊಳ್ಳಬೇಕು. 

Advertisement

ಮೊದಲು ಕೈಯನ್ನು ಭುಜದ ಭಾಗಕ್ಕಿಂತ ಸ್ವಲ್ಪ ಮೇಲೆತ್ತಿ. ನಂತರ ಸೊಂಟವನ್ನು ಮುಂದಕ್ಕೆ ಬಾಗಿಸಿ, ಕಾಲಿನ ಬೆರಳು, ಪಾದವನ್ನು ಹಿಡಿದುಕೊಳ್ಳಬೇಕು. ಮುಂದಕ್ಕೆ ಬಾಗುವಾಗ ಉಸಿರನ್ನು ಬಿಡುತ್ತಾ ಹೊಟ್ಟೆ ಖಾಲಿ ಮಾಡಿಕೊಳ್ಳಬೇಕು.  ಪಾದವನ್ನು ಮುಟ್ಟುವ ಪ್ರಕ್ರಿಯೆ ಇದೆಯಲ್ಲ, ಇದು ಬಹಳ ಕಷ್ಟದ್ದು. ಹಾಗಾಗಿ, ಆರಂಭದಲ್ಲಿ ಪಾದ ಮುಟ್ಟಲು ಆಗದೇ ಇದ್ದರೆ, ಮಂಡಿಯನ್ನು ಎರಡೂ ಕೈಯಲ್ಲಿ ಹಿಡಿಯಬಹುದು. ಈ ರೀತಿ ಮಾಡುವಾಗ ಮೊಣಕೈ ನೇರವಾಗಿರಬೇಕು.  ಬೆನ್ನು, ಸೊಂಟ ನೋವು ಇರುವಾಗ ಈ ಆಸನ ಮಾಡಬಾರದು.

ಇದೇ ರೀತಿ ವಕ್ರಾಸನ ಮಾಡುವುದರಿಂದ, ಸೊಂಟ ಹಾಗೂ ಬೆನ್ನು ನೋವಿನಿಂದ ಪಾರಾಗಬಹುದು. ಮೊದಲು ಪದ್ಮಾಸನದಲ್ಲಿ ಕುಳಿತು ಉಸಿರನ್ನು ಎಳೆದು, ಬಿಡುವ ಕ್ರಿಯೆ ಮಾಡಿ. ಆನಂತರ, ಎರಡೂ ಕಾಲುಗಳನ್ನು ಮುಂದೆ ಚಾಚಿ ಬಲಗೈಯನ್ನು ಬೆನ್ನಹಿಂದೆ ಇಡಿ. ಬಲಗಾಲನ್ನು ಎಡಗಾಲ ತೊಡೆಯ ಪಕ್ಕದಲ್ಲಿ ತಂದು ನಿಲ್ಲಿಸಿ. ಕತ್ತನ್ನು ಬಲಭಾಗಕ್ಕೆ ತಿರುಗಿಸಿ. ನಂತರ ಎಡಗೈಯನ್ನು ಬಲಗಾಲಿನ ಪಕ್ಕದಲ್ಲಿ ಊರಿ. ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಹೀಗೇ ಕುಳಿತಿರಿ. ಹೀಗೆ ಮಾಡಿದರೆ, ಕೈ, ಕಾಲು, ಸೊಂಟದ ಭಾಗದಲ್ಲಿ ರಕ್ತದ ಚಲನೆ ಚೆನ್ನಾಗಿ ಆಗುತ್ತದೆ. ಬೆನ್ನಹುರಿ ಬಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next