Advertisement
ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ರಾಜ್ಯದ ನದಿ ಪಾತ್ರದ ಜನರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಕೃಷ್ಣಾ ನದಿ ಸಮೀಪದ ಗ್ರಾಮಗಳಲ್ಲಿ ಈಗಾಗಲೇ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಈ ವರ್ಷವೂ ತಾಲೂಕಿನ ಜನರ ಬದುಕು ಛಿದ್ರಗೊಳ್ಳುವ ಆತಂಕ ಎದುರಾಗಿದೆ.
Related Articles
Advertisement
ಕೃಷ್ಣಾ ನದಿ ತನ್ನ ವ್ಯಾಪ್ತಿಯನ್ನು ಬಿಟ್ಟು ಅಂದಾಜು ಏಳೆಂಟು ಕಿ.ಮೀ ದೂರದಷ್ಟು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾಳೆ. ಎಲ್ಲೆಡೆ ನೀರನ್ನೇ ಕಾಣಬಹುದಾಗಿದೆ. ಸಾವಿರಾರು ಎಕರೆಯಲ್ಲಿ ಬೆಳೆಯಲಾದ ಕಬ್ಬು, ಅರಿಸಿನ, ಇನ್ನೀತರ ಬೆಳೆಗಳು ಕೃಷ್ಣೆಗೆ ಆಹುತಿಯಾಗಿವೆ.
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಸಾಂಗ್ಲಿಯಲ್ಲಿ 6 ಫೂಟನಷ್ಟು ಕಡಿಮೆಯಾಗಿದ್ದು, ಕಲ್ಲೋಳನಲ್ಲಿ ಸ್ಥಿರವಾಗಿದ್ದು, ನಮ್ಮಲ್ಲಿ ಸ್ವಲ್ಪ ಮಾತ್ರ ಜಾಸ್ತಿ ಆಗಬಹುದು ಆದರೆ ನಾಳೆ ಮಧ್ಯಾಹ್ನದ ವೇಳೆಗೆ ನಮ್ಮಲ್ಲಿಯೂ ಇಳಿಕೆ ಕಾಣಲಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತೊಂದರೆಗೆ ಸಿಲುಕುವ ಕುಟುಂಬಗಳನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರಗಳಿಗೆ ಕಳುಹಿಲಾಗುತ್ತಿದೆ. ಎಲ್ಲ ವ್ಯವಸ್ಥೆಯನ್ನು ನಮ್ಮ ನೋಡಲ ಅಧಿಕಾರಿಗಳ ತಂಡ ಮಾಡುತ್ತಿದೆ.– ಸಂಜಯ ಇಂಗಳೆ ತಹಶೀಲ್ದಾರರು, ರಬಕವಿ–ಬನಹಟ್ಟಿ
– ಕಿರಣ ಶ್ರೀಶೈಲ ಆಳಗಿ