Advertisement

ಹಿಂಡ್ವೇರ್‌ ಕಾಲಿಸ್ಟೋ ವಾಟರ್‌ ಪ್ಯೂರಿಫ‌ಯರ್‌ ಬಿಡುಗಡೆ

11:28 AM Aug 04, 2018 | |

ನವದೆಹಲಿ: ಸಾಂಪ್ರದಾಯಿಕ ಸ್ಯಾನಿಟೆವೇರ್‌ ಬ್ರ್ಯಾಂಡ್‌ ಹಿಂಡ್ವೇರ್‌ (ಎಚ್‌ಎಸ್‌ಐಎಲ್‌ಲಿ.,) ಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ “ಹಿಂಡ್ವೇರ್‌ ಕಾಲಿಸ್ಟೋ’ ಹೆಸರಿನ ವಾಟರ್‌ ಪ್ಯೂರಿಫ‌ಯರ್‌ ಅನ್ನು ಬಿಡುಗಡೆ ಮಾಡಿದೆ.

Advertisement

ಇತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹಬಳಕೆಯ ನೂತನ ಉತ್ಪನ್ನವನ್ನು ಎಚ್‌ಎಸ್‌ಐಎಲ್‌ ಗ್ರಾಹಕ ಉತ್ಪನ್ನ ವಿಭಾಗದ ಅಧ್ಯಕ್ಷ ರಾಕೇಶ್‌ ಕೌಲ್‌ ಅನಾವರಣಗೊಳಿಸಿ ಮಾತನಾಡಿದರು. ಹಿಂಡ್ವೇರ್‌ ಗ್ರಾಹಕರ ಆಕರ್ಷಣೆಯಾಗಿರುವ ಕಾಲಿಸ್ಟೋ ಪ್ಯೂರಿಫ‌ಯರ್‌ ಆರೊ, ಯುವಿ ಮತ್ತು ಯುಎಫ್‌ ತಂತ್ರಜ್ಞಾನದಲ್ಲಿ ಆರು ಹಂತಗಳಲ್ಲಿ ನೀರನ್ನು ಶುದ್ಧೀಕರಿಸಿ ಕಲ್ಮಶರಹಿತಗೊಳಿಸುತ್ತದೆ.

7 ಲೀ. ನೀರು ಸಂಗ್ರಹ ಸಾಮರ್ಥ್ಯವುಳ್ಳ ಟ್ಯಾಂಕ್‌ ಇದಕ್ಕಿದ್ದು, ಜಾಗತಿಕ ಮಟ್ಟದ ಉಪಕರಣಗಳನ್ನು ಬಳಸಿರುವುದರಿಂದ ಎಲ್ಲ ರೀತಿ ನೀರನ್ನು ಶೀಘ್ರವಾಗಿ ಶುದ್ಧೀಕರಿಸಿ, ಸಿಹಿ ನೀರಾಗಿ ಪರಿವರ್ತಿಸುತ್ತದೆ. ಇದರ ಮಾರುಕಟ್ಟೆ ದರ 14,990 ರೂ. ಆಗಿದ್ದು, ಫ್ಲಿಟ್‌ಕಾರ್ಟ್‌ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ 8,199 ರೂ.ಗಳಲ್ಲಿ ಲಭ್ಯವಾಗಲಿದೆ.

ಆ.1ರಿಂದ ಆರಂಭವಾಗಿರುವ ಕೊಡುಗೆ ಮಾರಾಟ, ಕೆಲವೇ ದಿನ ಇರಲಿದೆ. ನಮ್ಮ ಸಂಸ್ಥೆಯಿಂದ ಮೊಟ್ಟ ಮೊದಲ ಬಾರಿಗೆ ವಾಟರ್‌ ಪ್ಯೂರಿಫ‌ಯರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್‌ ಲಾರ್ಜ್‌ ಅಪ್ಲೆಯೆನ್ಸಸ್‌ ಮುಖ್ಯಸ್ಥ ಸಂದೀಪ್‌ ಕರ್ವ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next