Advertisement

ಚುನಾವಣೆ ಬಂದಾಗ ಸಿಎಂಗೆ ಹಿಂದುತ್ವ ನೆನಪು

06:30 AM Jan 08, 2018 | |

ಹುಬ್ಬಳ್ಳಿ: ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾವೂ ಒಬ್ಬ ಹಿಂದೂ ಎಂದು ಹೇಳಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕೂವರೆ ವರ್ಷಗಳಿಂದ ಮುಸಲ್ಮಾನರ ತುಷ್ಟೀಕರಣ ಮಾಡಿದ ಸಿದ್ದರಾಮಯ್ಯಗೆ ಈಗ ತಾವೊಬ್ಬ ಹಿಂದೂ ಎನ್ನುವುದು ನೆನಪಾಗಿದೆ.

ಹಿಂದೂಗಳ ಮತಗಳಿಗಾಗಿ ಅವರು ತಾವೂ ಹಿಂದೂ ಎಂದು ಹೇಳಿಕೊಳ್ಳುವಂಥ ಸ್ಥಿತಿ ಬಂದಿದೆ. ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡದಲ್ಲಿ 21 ಜನರ ಕೊಲೆಗಳು ನಡೆದಿವೆ. ಅವುಗಳಲ್ಲಿ 12 ಜನರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು. ಸಿದ್ದರಾಮಯ್ಯ ಮುಸಲ್ಮಾನರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಮನಸ್ಸಿದ್ದರೆ ಕೂಡಲೇ ಮುಖ್ಯಮಂತ್ರಿ ಕೋಮು ಗಲಭೆ ಮಾಡುವಲ್ಲಿ ನಿರತವಾಗಿರುವ ಇಂಥ ಸಂಘಟನೆಗಳನ್ನು ನಿಷೇಧಿಸು ವಂತೆ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next