Advertisement

ಹಿಂದುತ್ವ ಪ್ರತಿಪಾದಕರನ್ನು ಉಗ್ರರು ಎಂದಿದ್ದೇನೆ

06:20 AM Jan 12, 2018 | Team Udayavani |

ಮೈಸೂರು/ಹನೂರು: “ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಭಜರಂಗದಳದವರನ್ನು ನಾನು ಉಗ್ರಗಾಮಿಗಳು ಎಂದು
ಕರೆದಿಲ್ಲ. ಹಿಂದುತ್ವ ಪ್ರತಿಪಾದಕರನ್ನು ಉಗ್ರವಾದಿಗಳು ಎಂದು ಹೇಳಿದ್ದೇನೆ’ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Advertisement

ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚಾಮರಾಜನಗರದಲ್ಲಿ ಬುಧವಾರಮಾತನಾಡಿದ್ದ ಅವರು, ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಭಜರಂಗ ದಳದವರು ಒಂದು ರೀತಿಯಲ್ಲಿ ಉಗ್ರಸಂಘಟನೆಗಳಿದ್ದಂತೆ ಎಂದಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಗುರುವಾರ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಭಜರಂಗ ದಳದವರನ್ನು ನಾನು ಉಗ್ರಗಾಮಿಗಳು ಎಂದು ಕರೆದಿಲ್ಲ.
ಹಿಂದುತ್ವ ಪ್ರತಿಪಾದಕರನ್ನು ಉಗ್ರವಾದಿಗಳು ಎಂದು ಹೇಳಿದ್ದೇನೆ’ ಎನ್ನುವ ಮೂಲಕ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದರು.

ಜತೆಗೆ, “ಹೆಣದ ಮೇಲೆ ರಾಜಕೀಯ ಮಾಡುವವರನ್ನು ಏನೆಂದು ಕರೆಯಬೇಕು? ಸಾವಿನ ಮನೆಯಲ್ಲಿ ರಾಜಕಾರಣ
ಮಾಡುತ್ತಿರುವವರು ಯಾರು? ಅವರನ್ನು ಉಗ್ರಗಾಮಿಗಳು ಎನ್ನದೆ ಮತ್ತೇನೆಂದು ಹೇಳಬೇಕು? ಯಾರು ಉಗ್ರ ಚಟುವಟಿಕೆಯಲ್ಲಿ ತೊಡಗಿರುತ್ತಾರೋ ಅವರು ಉಗ್ರರಲ್ಲದೇ ಬೇರೇನು?’ ಎಂದು ಪ್ರಶ್ನಿಸುವ ಮೂಲಕ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು. ರಾಜ್ಯದಲ್ಲಿ ಪಿಎಫ್ಐ, ಎಸ್‌ಡಿಪಿಐ ಮಾತ್ರವಲ್ಲದೆ ಕೋಮು ಸಾಮರಸ್ಯವನ್ನು ಹಾಳು ಮಾಡುವ ಪ್ರತಿಯೊಂದು ಸಂಘಟನೆಗಳ ವಿರುದಟಛಿವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಾವೂ ಹಿಂದುಗಳು: “ನಾವೂ ಕೂಡ ಹಿಂದುಗಳೆ. ನಾವು ಮನುಷ್ಯತ್ವ ಇರುವ ಹಿಂದುಗಳು, ಅವರು ಮನುಷ್ಯತ್ವ ಇಲ್ಲದಿರುವ ಹಿಂದುಗಳು. ಬಿಜೆಪಿಯವರು ಕೋಮು ಭಾವನೆ ಕೆರಳಿಸುವ ಮೂಲಕ ಮತಗಳ ಧೃವೀಕರಣಕ್ಕೆ ಮುಂದಾಗಿದ್ದು, ಇದರಿಂದ ಅವರಿಗೆ ಲಾಭವಾಗಲಿದೆ ಎಂದು ಭಾವಿಸಿದ್ದಾರೆ. ಆದರೆ, ಇದರಿಂದ ಅವರಿಗೆ ಯಾವುದೇ ಲಾಭವಾಗುವುದಿಲ್ಲ. ಬದಲಿಗೆ ಅವರಿಗೆ ಅದು ಮುಳುವಾಗಲಿದೆ’ ಎಂದರು. ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿಯವರು ದೇವಾಲಯಗಳಿಗೆ ಹೆಚ್ಚು ಸುತ್ತಾಡುತ್ತಿದ್ದಾರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿ, “ನಾನು ದೇಗುಲಗಳಿಗೆ ತೆರಳುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ದೇವಾಲಯಗಳಿಗೆ ತೆರಳುತ್ತೇನೆ. ಆದರೆ ಕಡಿಮೆ. ಪ್ರವಾಸದ ಸಂದರ್ಭಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡುತ್ತೇನೆ’ ಎಂದರು.

ಮಾದಪ್ಪನಿಗೆ ಸಿಎಂ
ವಿಶೇಷ ಪೂಜೆ ಪ್ರಸಿದಟಛಿ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಪಟ್ಟಣದಲ್ಲಿ ನಡೆದ ಸಾಧನಾ ಸಮಾವೇಶದ ಬಳಿಕ ಬುಧವಾರ ತಡರಾತ್ರಿಯೇ ಶ್ರೀಕ್ಷೇತ್ರಕ್ಕೆ ಬಂದು ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ, ಗುರುವಾರ ಬೆಳಗ್ಗೆ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಬಳಿಕ, ಬೆಂಗಳೂರಿನ ಚಾಮರಾಜಪೇಟೆಯ ಮಲೆ ಮಹದೇಶ್ವರ ಟ್ರಸ್ಟ್‌ ನಿರ್ಮಿಸಿದ್ದ ಕನಕ ಭವನ ಮತ್ತು ಕನಕದಾಸರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಕಂಸಾಳೆ ಬಾರಿಸಿ ಹರ್ಷ ವ್ಯಕ್ತಪಡಿಸಿದರು.

ಬೆಳ್ಳಿರಥಕ್ಕೆ ಗದೆ,
ಕಿರೀಟ ಕೊಡ್ತೇನೆ

ಇದೇ ವೇಳೆ, ಮಲೆ ಮಹದೇಶ್ವರ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಕ್ಷೇತ್ರದಲ್ಲಿ ಬೆಳ್ಳಿರಥ ನಿರ್ಮಿಸಲು ಒಪ್ಪಿಗೆ ಸೂಚಿಸಿದರು. ರಥ ನಿರ್ಮಾಣಕ್ಕಾಗಿ ಸುಮಾರು 400 ಕೆ.ಜಿ.ಬೆಳ್ಳಿಯ ಅವಶ್ಯಕತೆ ಇದೆ. ಈಗಾಗಲೇ 800 ಕೆ.ಜಿ.ಬೆಳ್ಳಿ ಪ್ರಾಧಿಕಾರದಲ್ಲಿ ಇದೆ. ದಾನಿಗಳು ಬೆಳ್ಳಿ ನೀಡಲು ಮುಂದಾದಲ್ಲಿ ಅದನ್ನೂ ಸ್ವೀಕರಿಸಿ. ತಮಗೆ ಉಡುಗೊರೆಯಾಗಿ ಬಂದಿರುವ ಬೆಳ್ಳಿಗದೆ, ಕಿರೀಟ, ಇನ್ನಿತರ ಬೆಳ್ಳಿ ಪದಾರ್ಥಗಳನ್ನು ನೀಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next