Advertisement

ವಿಶ್ವ ಮಹಿಳಾ ದಿನಾಚರಣೆ ವಿಶೇಷ : ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಯುವ ಪ್ರತಿಭೆ ಚಂದನ

11:14 AM Mar 08, 2022 | Team Udayavani |

ದೋಟಿಹಾಳ: ಚಿಕ್ಕವಯಸ್ಸಿನಿಂದಲೇ ಹಲವಾರು ಸಾಧನೆ ಮಾಡುತ್ತಾ ಎಲೆಮರೆಯ ಕಾಯಿಯಂತೆ ಬೆಳೆಯುತ್ತಿರುವ ಹೊಸಪೇಟೆಯ ನಗರದ ಚಂದನ ಹೆಚ್.ಎಮ್ ಅವರು ಹಿಂದುಸ್ತಾನ ಶಾಸ್ತ್ರೀಯ ಸಂಗೀತದಲ್ಲಿ ಹಲವಾರು ಸಾಧನೆಗಳನ್ನು ಮಾಡುತ್ತಿದ್ದಾರೆ.

Advertisement

ರಾಜ್ಯ ಮತ್ತು ರಾಷ್ಟ್ರೀಯ ಅನೇಕ ಸಂಗೀತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಿಗೆ ಸಂಗೀತದ ರಸದೌತಣವನ್ನು ನೀಡಿದ್ದಾಳೆ. ಈ ಯುವ ಪ್ರತಿಭೆಯನ್ನು ಸರ್ಕಾರ ಗುರುತಿಸಿ ಸೂಕ್ತ ಗೌರವ ನೀಡಬೇಕಾಗಿದೆ.

ಚಂದನ ಹೆಚ್.ಎಮ್ ಅವರು ತಂದೆ ಮೈಲಾರಪ್ಪ ತಾಯಿ ಪದ್ಮಾವತಿ ದಂಪತಿಗಳು ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿವುಳ್ಳ ಆಗಿದ್ದರಿಂದ ತಮ್ಮ ಮಗಳು ಶಾಸ್ತ್ರೀಯ ಸಂಗೀತದ ಬೆಳೆಯಲು ಪ್ರೋತ್ಸಾಹ ಸಿಕ್ಕಂತಾಯಿತು. ಬಿಎಸ್ಸಿ ಓದುತ್ತಿರುವ ಚಂದನ ಅವರು ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲವನ್ನು ಬೆಳೆಸಿಕೊಂಡು ಅನೇಕ ಕಾರ್ಯಕ್ರಮಗಳ ತಮ್ಮ ಹಿಂದುಸ್ತಾನ ಶಾಸ್ತ್ರೀಯ ಸಂಗೀತವನ್ನು ಜನರಿಗೆ ಪರಿಚಯಿಸುತ್ತಿದ್ದಾರೆ.

ಚಂದನ ಅವರು ತಮ್ಮ 10ವಯಸ್ಸಿನಲ್ಲಿ ಹಿಂದುಸ್ತಾನ ಶಾಸ್ತ್ರೀಯ ಸಂಗೀತವನ್ನು ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದ ವೀರೇಶ ಹಿಟ್ನಾಳ ಇವರ ಸಂಗೀತ ಕಲಿಯಲು ಆರಂಭಿಸಿದರು. 11ನೇ ವಯಸ್ಸಿಗೆ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ತಮ್ಮ ಹಿಂದುಸ್ತಾನ ಶಾಸ್ತ್ರೀಯ ಸಂಗೀತದ ಧಾತುಗಳನ್ನು ಇಡುತ್ತ ಮುಂದೆ ಸಾಗಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜರುಗುವ ಚಿಗುರು ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ 2013ರಲ್ಲಿ ಹಂಪಿಯಲ್ಲಿ ಪ್ರಶಸ್ತಿ ಪಡೆದು. ಕಿರ್ಲೋಸ್ಕರ್ ಫೌಂಡೇಶನ್ ಇವರು ಆಯೋಜಿಸಿದ ‘ಹಾಡು ಕೋಗಿಲೆ’ ಎಂಬ ಆಕಾಶವಾಣಿ ಕಾರ್ಯಕ್ರಮದಲ್ಲಿ 2019ರಲ್ಲಿ ಇವರಿಗೆ ಪ್ರಶಸ್ತಿ ಬಾಚಿಕೊಂಡರು. ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆಯ ಮೂಲಕ ರಾಜ್ಯ ಸುಮಾರು 70ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ‘ಸಂಚಾರಿ ಸಂಗೀತ ಪಾಠಶಾಲೆ’ಎಂಬ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಸಂಗೀತದ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ.

ಇವರಿಗೆ ಸುಮಾರು 25ಕ್ಕೂ ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ಮತ್ತು ಗೌರವ ಸನ್ಮಾನ ನೀಡಲಾಗಿದೆ. ಕೊಪ್ಪಳದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುಷ್ಟಗಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರಿಗೆ2020-21ರಲ್ಲಿ ಯುವ ಸೌರಭ ಪ್ರಶಸ್ತಿ ನೀಡಿಲಾಗಿದೆ. ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಂಪಿ ಹಾಗೂ ಹೊಸಪೇಟೆ ನಗರಗಳಲ್ಲಿ ರಾಜ್ಯಮಟ್ಟದ ಯುವಜನ ಮೇಳ 2019-20ರಲ್ಲಿ ಭಜನೆ ಮತ್ತು ಭಾವಗೀತೆಗೆ ಪ್ರಶಸ್ತಿ ಹಾಗೂ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಗುರುರಾಜ್ ಹೊಸಪೇಟೆ ಅವರಿಂದ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಇದೇ ರೀತಿ ಜಿಲ್ಲಾ ಯುವ ಜನೋತ್ಸವದಲ್ಲಿ ಪ್ರಶಸ್ತಿಗಳು ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳು ಇವರಿಗೆ ದೊರೆತಿವೆ. ಆದರೆ ರಾಜ್ಯ ಸರಕಾರದಿಂದ ಮಾತ್ರ ಇಂತಹ ಯುವ ಪ್ರತಿಭೆಗೆ ಪ್ರಶಸ್ತಿ ಸಿಗದೇ ಇರುವುದು ಬೇಸರದ ಸಂಗತಿಯಾಗಿದೆ.

ಸಂಗೀತ ಕೇವಲ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿಲ್ಲ. ನಾನು ಈ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ಹಂಬಲದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯೆಗೆ ಪಾದಾರ್ಪಣೆ ಮಾಡಿದೆ. ನನ್ನ ಈ ಹಂಬಲಕ್ಕೆ ತಂದೆ-ತಾಯಿಯವರ ಪ್ರೋತ್ಸಾಹ ನೀಡಿದರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯಲು ಅನುಕೂಲವಾಯಿತು.-ಚಂದನ ಹೆಚ್.ಎಮ್ಹಿಂದುಸ್ತಾನಿ ಶಾಸ್ತ್ರೀಯ ಯುವ ಗಾಯಕಿ

ಚಂದನವರು ತಮ್ಮ ಒತ್ತಡದ ಜೀವನದಲ್ಲಿ ಶಾಸ್ತ್ರೀಯ ಸಂಗಿತ ಕಲಿತಿದ್ದಾಳೆ. ಅಲ್ಪ ಅವಧಿಯಲ್ಲಿ ಉತ್ತಮ ಸಂಗೀತಳಾಗಿ ಬೆಳೆದ್ದಿದಾಳೆ. ಇಂತಹ ಯುವ ಪ್ರತಿಭೆ ಸೂಕ್ತ ಗೌರವ ಸಿಗಬೇಕು. –ವೀರೇಶ ಹಿಟ್ನಾಳ,ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಶಿಕ್ಷಕರು.

 

ವರದಿ: ಮಲ್ಲಿಕಾರ್ಜುನ ಮೆದಿಕೇರಿ.

ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next