ನವದೆಹಲಿ: 80, 90ರ ದಶಕಗಳಲ್ಲಿ ಸಚಿವರ ಅಧಿಕೃತ ಹಾಗೂ ಶ್ರೀಮಂತರ ಸಿರಿತನದ ದ್ಯೋತಕವೆನಿಸಿದ್ದ ಕಾಂಟೆಸ್ಸಾ ಕಾರುಗಳನ್ನು ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ.
ಈ ಕಾರನ್ನು ಆಧುನಿಕ ರೂಪದಲ್ಲಿ ಪುನಃ ಮಾರುಕಟ್ಟೆಗೆ ಬಿಡುಗಡೆ ಮಾಡಲು ಎಸ್‌ಜಿ ಕಾರ್ಪೊರೇಟ್ ಮೊಬೈಲಿಟಿ ಪ್ರೈ. ಲಿ. ಸಂಸ್ಥೆ ಆಸಕ್ತಿ ತೋರಿದೆ.
ಈ ಹಿನ್ನೆಲೆಯಲ್ಲಿ ಕಾಂಟೆಸ್ಸಾ ಬ್ರಾಂಡ್‌ನ ಒಡೆತನ ಹೊಂದಿರುವ ಹಿಂದೂಸ್ತಾನ್ ಮೋಟಾರ್ಸ್ ಸಂಸ್ಥೆಯೊಂದಿಗೆ ನಡೆಸಿದ ಮಾತುಕತೆ ಸಫಲವಾಗಿದ್ದು, ಕಾಂಟೆಸ್ಸಾ ಕಾರುಗಳ ಬ್ರಾಂಡ್ ಹಸ್ತಾಂತರ ಕಾರ್ಯ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ದುಬೈ: ಯೋಗಾದಲ್ಲಿ ಗಿನ್ನೆಸ್ ರೆಕಾರ್ಡ್ ಬರೆದ ಭಾರತೀಯ ಯೋಗ ಟೀಚರ್
ಬ್ರಾಂಡ್ ಹಸ್ತಾಂತರಿಕೆಯ ಕಾನೂನಾತ್ಮಕ ಒಪ್ಪಂದಕ್ಕೆ ಜೂ. 16ರಂದು ಎರಡೂ ಕಡೆಯ ಪ್ರತಿನಿಧಿಗಳು ಸಹಿ ಹಾಕಿದ್ದಾಗಿ ಹೇಳಲಾಗಿದೆ.