Advertisement

ಎಲ್‌ಸಿಎ ಉತ್ಪಾದನೆ ಖಾಸಗಿಗೆ? ; ಯೋಜನೆಯ ಶೇ.35 ಭಾಗ ಜಾರಿ ಹೊರಗುತ್ತಿಗೆ

09:23 AM Feb 06, 2020 | Hari Prasad |

ಹೊಸದಿಲ್ಲಿ: ಹಗುರ ಯುದ್ಧ ವಿಮಾನ (ಎಲ್‌ಸಿಎ) ನಿರ್ಮಾಣ ಯೋಜನೆಯ ಶೇ.35ರಷ್ಟು ಭಾಗವನ್ನು ಖಾಸಗಿಯವರಿಗೆ ವಹಿಸಲು ಎಚ್‌ಎಎಲ್‌ ಮುಂದಾಗಿದೆ. 38 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆಗೆ ಶೀಘ್ರದಲ್ಲಿಯೇ ಅತ್ಯಾಧುನಿಕ ರೇಡಾರ್‌, ಸೆನ್ಸರ್‌, ಸ್ವದೇಶಿಯ ವಾಗಿ ನಿರ್ಮಿಸಲಾಗಿರುವ ಶಸ್ತ್ರಾಸ್ತ್ರಗಳನ್ನು ಹೊಂದಿರುವ 83 ಎಲ್‌ಸಿಎಗಳ ನಿರ್ಮಾಣದ ಗುತ್ತಿಗೆಯನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳಲಿದೆ.

Advertisement

‘ಮೊದಲ ಹಂತದ ಸುಧಾರಿತ ಯುದ್ಧ ವಿಮಾನಗಳನ್ನು ಮೂರು ವರ್ಷಗಳ ಅವಧಿಯಲ್ಲಿ ಉತ್ಪಾದಿಸಿ ನೀಡಲು ಸಾಧ್ಯವಿದೆ. ಅದರ ಬಹುಹಂತವನ್ನು ಎಲ್‌ಆ್ಯಂಡ್‌ಟಿ, ಡೈನಮ್ಯಾಟಿಕ್ಸ್‌, ವಿಇಎಂ ಟೆಕ್ನಾಲಜೀಸ್‌ ಮತ್ತು ಆಲ್ಫಾ ಡಿಸೈನ್‌ ಕಂಪೆನಿಗಳಿಗೆ ನೀಡಲಾಗುತ್ತದೆ. ನಾಲ್ಕು ಕಂಪೆನಿಗಳು ಯುದ್ಧ ವಿಮಾನಗಳಿಗೆ ಅಗತ್ಯವಾಗಿರುವ ಬಿಡಿ ಭಾಗಗಗಳನ್ನು ಪೂರೈಸುವ ನಿಟ್ಟಿನಲ್ಲಿ ಅಂತಿಮಗೊಳಿಸಿದ್ದೇವೆ’ ಎಂದು ಎಚ್‌ಎಎಲ್‌ ಅಧ್ಯಕ್ಷ ಆರ್‌.ಮಾಧವನ್‌ “ದ ಇಕನಾಮಿಕ್‌ ಟೈಮ್ಸ್‌’ಗೆ ತಿಳಿಸಿದ್ದಾರೆ.

ಉತ್ಪಾದನೆಯ ಶೇ.35ರಷ್ಟು ಭಾಗ ಖಾಸಗಿಯವರಿಗೆ ವಹಿಸಲಾಗುತ್ತದೆ ಎಂದವರು ಹೇಳಿದ್ದಾರೆ. ಈ ಕಂಪೆನಿಗಳ ಜತೆಗೆ ಇನ್ನೂ ಹಲವು ಭಾರತೀಯ ಕಂಪೆನಿಗಳು ಎಲ್‌ಸಿಎ ಉತ್ಪಾದನೆ ಯಲ್ಲಿ ತೊಡಗಿಸಿಕೊಳ್ಳಲಿವೆ ಎಂದಿದ್ದಾರೆ ಮಾಧವನ್‌. ಎಚ್‌ಎಎಲ್‌ನಲ್ಲಿ ಯುದ್ಧ ವಿಮಾನಗಳ ಉತ್ಪಾದನೆಗಾಗಿ ಎರಡನೇ ಘಟಕ ಸಿದ್ಧಪಡಿಸಲಾಗಿದೆ. ಇದರಿಂದಾಗಿ ಪ್ರತಿ ವರ್ಷ 16 ವಿಮಾನಗಳನ್ನು ತಯಾರಿಸಲು ಸಾಧ್ಯವಿದೆ. ಉತ್ಪಾದನೆಗೆ ಸಂಬಂಧಿಸಿದ ಮಾತುಕತೆಗಳು ಅಂತಿಮ ಹಂತದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next