Advertisement
ಹೌದು, ಕೃತಕ ಬುದ್ಧಿಮತ್ತೆ ಚಾಲಿತ, ಸುಧಾರಿತ ಮತ್ತು ದೀರ್ಘಾವಧಿಗೆ ಸಂಚರಿಸಬಲ್ಲ, ವ್ಯೂಹಾತ್ಮಕ ಕಾರ್ಯಯೋಜನೆಗಳಿಗೆ ತಕ್ಕುದಾದ ಡ್ರೋನ್‌ಗಳನ್ನು ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಅಭಿವೃದ್ಧಿಪಡಿಸುತ್ತಿದೆ.
ಕ್ಷಿಪಣಿಗಳು, ಸೆನ್ಸರ್‌ಗಳು ಸೇರಿದಂತೆ 40 ಕೆ.ಜಿ. ತೂಕದ ಲೋಡ್ ಹೊರುವ ಸಾಮರ್ಥ್ಯ ಈ ರೋಟರಿ-ವಿಂಗ್ ಡ್ರೋನ್‌ಗಿದೆ. ಕೃತಕ ಬುದ್ಧಿಮತ್ತೆ ಚಾಲಿತ ಆಪರೇಟಿಂಗ್ ಸಿಸ್ಟಂ ಈ ಡ್ರೋನ್‌ಗಳಲ್ಲಿ ಇರಲಿವೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಈ ಡ್ರೋನ್‌ನ ಪ್ರಾಯೋಗಿಕ ಹಾರಾಟ ನಡೆಸಲು ಎಚ್‌ಎಎಲ್ ನಿರ್ಧರಿಸಿದ್ದು, ಇಂತಹ 60 ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಕ್ಷಿಪಣಿಗಳು, ಸೆನ್ಸರ್‌ಗಳು ಮತ್ತಿತರ ಅಗತ್ಯ ವಸ್ತುಗಳ ಸಾಗಣೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಸೇನೆಯು ಈ ಡ್ರೋನ್‌ಗಳನ್ನು ಬಳಸಬಹುದಾಗಿದೆ.
Related Articles
Advertisement
ಸೇನೆಗೆ ಆಗುವ ಅನುಕೂಲತೆಗಳು– ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡಲು
– ಅವಶ್ಯಕ ಸಾಮಗ್ರಿಗಳ ಸಾಗಾಟ ಮಾಡಲು
– ಸೆನ್ಸರ್‌ಗಳು, ಕ್ಷಿಪಣಿಗಳು, ಇತರೆ ಶಸ್ತ್ರಾಸ್ತ್ರ ಸೇರಿ ಸೇನಾ ಸಂಬಂಧಿ ವ್ಯವಸ್ಥೆಗಳ ಹೊತ್ತೂಯ್ಯಲು ಚೊಚ್ಚಲ ಪರೀಕ್ಷಾರ್ಥ ಹಾರಾಟ ಯಾವಾಗ?- 2023ರಲ್ಲಿ
ಎಷ್ಟು ಲೋಡ್ ಹೊರಬಲ್ಲದು?- 40 ಕೆ.ಜಿ.
ಮೊದಲ ಹಂತದಲ್ಲಿ ಒಟ್ಟು ಎಷ್ಟು ಡ್ರೋನ್‌ಗಳ ಅಭಿವೃದ್ಧಿ? – 60 ಹೆರಾನ್ ತಯಾರಿಕೆಯ ಗುರಿ
ಇದಷ್ಟೇ ಅಲ್ಲದೆ, ಇಸ್ರೇಲಿ ಹೆರಾನ್ ಟಿಪಿ ಡ್ರೋನ್‌ಗಳನ್ನು ತಯಾರಿಸುವ ಮತ್ತೂಂದು ಮಹತ್ವಾಕಾಂಕ್ಷಿ ಯೋಜನೆಯನ್ನೂ ಎಚ್‌ಎಎಲ್ ಹಾಕಿಕೊಂಡಿದೆ. ಹೆರಾನ್ ಡ್ರೋನ್‌ಗಳು 35 ಸಾವಿರ ಅಡಿ ಎತ್ತರದಲ್ಲಿ ಸುಮಾರು 45 ಗಂಟೆಗಳ ಕಾಲ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತವೆ. ಅವುಗಳಲ್ಲಿ ಸ್ವಯಂಚಾಲಿತ ಟ್ಯಾಕ್ಸಿ ಟೇಕಾಫ್ ಮತ್ತು ಲ್ಯಾಂಡಿಂಗ್ ವ್ಯವಸ್ಥೆ, ಉಪಗ್ರಹ ಸಂವಹನ ವ್ಯವಸ್ಥೆಯನ್ನೂ ಅಳವಡಿಸಿರಲಾಗಿರುತ್ತದೆ.