Advertisement

ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಧರಣಿ

10:42 AM Oct 21, 2021 | Team Udayavani |

ಬೆಂಗಳೂರು: ಬಾಂಗ್ಲಾ ದೇಶದಲ್ಲಿ ವ್ಯವಸ್ಥಿತ ರೀತಿಯಲ್ಲಿ ಹಿಂದೂಗಳ ಮೇಲೆ ಆಕ್ರಮಣ ನಡೆಯು ತ್ತಿದ್ದು, ಅಲ್ಲಿನ ಸರ್ಕಾರ ಇದನ್ನು ತಡೆಯಬೇಕು ಮತ್ತು ಅಲ್ಲಿರುವ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಹಿಂದು ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್‌ ಗೌಡ ಆಗ್ರಹಿಸಿದರು.

Advertisement

ಬಾಂಗ್ಲ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಸ್ತ ಹಿಂದೂ ಸಂಘಟನೆಗಳಿಂದ ಬುಧವಾರ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಹಮ್ಮಿ ಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ನವರಾತ್ರಿ ವೇಳೆ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ 315 ದೇವಸ್ಥಾನಗಳ ಮೇಲೆ ಮುಸ್ಲಿಮರು ಆಕ್ರಮಣ ಮಾಡಿದ್ದರು. 1500 ಹಿಂದೂ ಮನೆಗಳ ಧ್ವಂಸ ಮಾಡಿದ್ದೂ ಅಲ್ಲದೆ, 23 ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಹಾಗೂ 13 ಹಿಂದುಗಳ ಹತ್ಯೆ ಮಾಡಿದ್ದಾರೆ. 17 ಹಿಂದೂಗಳು ಕಾಣೆಯಾಗಿದ್ದಾರೆ. ಇಷ್ಟಾದರೂ ಅಲ್ಲಿನ ಸರ್ಕಾರ ಹಿಂದುಗಳ ರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಭಾರತ ಸರ್ಕಾರವು ಕೂಡಲೇ ಬಾಂಗ್ಲಾದೇಶದ ಸರ್ಕಾರದ ಜತೆಗೆ ಮಾತುಕತೆ ನಡೆಸಿ ಹಿಂದೂಗಳ ರಕ್ಷಣೆಗೆ ಕ್ರಮ ವಹಿಸಬೇಕು.

ಅಲ್ಲಿನ ಹಿಂದೂಗಳ ರಕ್ಷಣೆಗೆ ಬೇಕಾದ ಎಲ್ಲ ಪ್ರಯತ್ನ ಮಾಡಬೇಕು. ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಆಗದವರೆಗೆ ಬಾಂಗ್ಲಾದೇಶದ ಜತೆಗೆ ಎಲ್ಲ ವ್ಯಾಪಾರ ವಹಿವಾಟು ನಿಲ್ಲಿಸಬೇಕು. ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಬೇಕು.

ಇದನ್ನೂ ಓದಿ:- ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಪರಿಕಲ್ಪನೆಗೆ ಒತ್ತು

Advertisement

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಕ್ರಮಣ ಮಾಡಿದ ಮತಾಂದರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದರು. ಬಾಂಗ್ಲಾದೇಶದಲ್ಲಿ ಮುಸ್ಲಿಮರು ಬೆಳಗ್ಗಿನ ಜಾವದಲ್ಲಿ ದುರ್ಗಾ ಮಂದಿರದ ಭದ್ರತಾ ಸಿಬ್ಬಂದಿ ಮಲಗಿರುವಾಗ ಹನುಮಾನ್‌ ಮೂರ್ತಿಯ ಕಾಲಿನ ಮೇಲೆ ಕುರಾನ್‌ ಇಟ್ಟು ಅದರ ಪೋಟೋ ತೆಗೆದು ಇಸ್ಲಾಂಗೆ ಅಪಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ, ಸಾವಿರಾರು ದುರ್ಗಾದೇವಿಯ ಪೆಂಡಾಲ್‌ಗ‌ಳ ಮೇಲೆ, ನವರಾತ್ರಿಯ ಮಂಟಪದ ಮೇಲೆ ಆಕ್ರಮಣ ಮಾಡಿದ್ದರು.

ಇದು 1947ರಲ್ಲಿ ನಡೆದ ಡೈರೆಕ್ಟ್ ಅಕ್ಸನ್‌(ನೇರ ಆಕ್ರಮಣದ) ಹತ್ಯೆಯಂತೆ ವ್ಯವವಸ್ಥಿತ ರೀತಿಯಲ್ಲಿ ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗಿದೆ ಎಂದು ಆರೋಪಿಸಿದರು. ಶ್ರೀರಾಮ ಸೇನೆಯ ಚಂದ್ರಶೇಖರ್‌, ಅಖೀಲ ಭಾರತ ಹಿಂದೂ ಮಹಾಸಭಾದ ಸುರೇಶ ಜೈನ್‌, ಬಜರಂಗದಳದ ಎಂ.ಎಲ್‌.ಶಿವಕುಮಾರ್‌, ವಿಜಯ ವಿವೇಕ ಪ್ರತಿಷ್ಠಾನದ ಶಕೀಲಾ ಶೆಟ್ಟಿ, ಅಯ್ಯಪ್ಪ ಸೇವಾ ಸಮಾಜಮ್‌ನ ಜಯರಾಮ, ಹಿಂದು ಮಹಾಸಭಾದ ಕಂಗನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next