Advertisement

ಹಿಂದುಜಾ ಗ್ರೂಪ್ ಅಧ್ಯಕ್ಷ ಎಸ್.ಪಿ. ಹಿಂದುಜಾ ವಿಧಿವಶ

09:16 PM May 17, 2023 | Team Udayavani |

ಲಂಡನ್ : ಹಿಂದುಜಾ ಗ್ರೂಪ್ ಅಧ್ಯಕ್ಷ ಶ್ರೀಚಂದ್ ಪರ್ಮಾನಂದ ಹಿಂದುಜಾ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಬುಧವಾರ ಲಂಡನ್‌ನಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

1964ರಲ್ಲಿ ಬಾಲಿವುಡ್‌ ಬ್ಲಾಕ್‌ಬಸ್ಟರ್‌ ಚಲನಚಿತ್ರ ‘ಸಂಗಮ್‌’ನ ಅಂತಾರಾಷ್ಟ್ರೀಯ ವಿತರಣಾ ಹಕ್ಕುಗಳೊಂದಿಗೆ ಪ್ರಾರಂಭವಾದ ಅವರ ವ್ಯಾಪಾರ ಯಶಸ್ಸುಗಳು ಅವರನ್ನು ಬ್ರಿಟನ್‌ನ ಅತ್ಯಂತ ಶ್ರೀಮಂತರಲ್ಲಿ ಒಬ್ಬರನ್ನಾಗಿ ಮಾಡಿತು. ಬೋಫೋರ್ಸ್ ಹಗರಣ ಶ್ರೀಚಂದ್ ಪರ್ಮಾನಂದ ಹಿಂದುಜಾ ಅವರನ್ನು ಪ್ರಸಿದ್ಧಿ ಬದಲಿಗೆ ಅಪಖ್ಯಾತಿಯನ್ನು ತಂದು ನೀಡಿತು.

ಬ್ರಿಟಿಷ್ ಇಂಡಿಯಾದ ಕರಾಚಿಯ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಶ್ರೀಚಂದ್ ಪರ್ಮಾನಂದ ಮತ್ತು ಅವರ ಇಬ್ಬರು ಕಿರಿಯ ಸಹೋದರರು ಸ್ವೀಡಿಷ್ ಬಂದೂಕು ತಯಾರಕ ಎಬಿ ಬೋಫೋರ್ಸ್‌ಗೆ ಭಾರತ ಸರ್ಕಾರದ ಗುತ್ತಿಗೆಯನ್ನು ಪಡೆಯಲು ಸಹಾಯ ಮಾಡಲು ಅಕ್ರಮ ಕಮಿಷನ್‌ಗಳಲ್ಲಿ ಒಟ್ಟು 64 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಮೂವರೂ – ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದುಜಾ, ಆದಾಗ್ಯೂ 2005 ರಲ್ಲಿ ದೆಹಲಿ ಹೈಕೋರ್ಟ್‌ನಿಂದ ಖುಲಾಸೆಗೊಂಡಿತ್ತು.

ನಾಲ್ವರು ಸಹೋದರರಲ್ಲಿ ಹಿರಿಯ ಮತ್ತು ಹಿಂದುಜಾ ಗ್ರೂಪ್‌ನ ಅಧ್ಯಕ್ಷರಾದ ಎಸ್‌ಪಿ ಹಿಂದುಜಾ ಅವರು ಈ ವರ್ಷದ ಜನವರಿಯಲ್ಲಿ ತಮ್ಮ ಪತ್ನಿ ಮಧು ಅವರನ್ನು ಕಳೆದುಕೊಂಡಿದ್ದರು. ಪುತ್ರಿಯರಾದ ಶಾನು ಮತ್ತು ವಿನೂ ಅವರನ್ನು ಅಗಲಿದ್ದಾರೆ.

1919 ರಲ್ಲಿ ಇರಾನ್‌ಗೆ ತೆರಳುವ ಮೊದಲು ಭಾರತದ ಈಗ ಪಾಕಿಸ್ಥಾನದ ಸಿಂಧ್ ಪ್ರದೇಶದಲ್ಲಿ ಸರಕುಗಳನ್ನು ವ್ಯಾಪಾರ ಮಾಡುತ್ತಿದ್ದ ಪರ್ಮಾನಂದ್ ದೀಪ್‌ಚಂದ್ ಅವರು ಹಿಂದುಜಾ ಸಾಮ್ರಾಜ್ಯವನ್ನು ಪ್ರಾರಂಭಿಸಿದರು. 1964 ರಲ್ಲಿ ಎಸ್‌ಪಿ ಹಿಂದುಜಾ ಅವರು ರಾಜ್ ಕಪೂರ್ ಅಭಿನಯದ ‘ಸಂಗಮ್’ ಚಲನಚಿತ್ರವನ್ನು ಮಧ್ಯಪ್ರಾಚ್ಯ ಮಾರುಕಟ್ಟೆಗಳ ಮೂಲಕ ವಿತರಿಸಿದರು. ಇದು ಅವಲ ಮೊದಲ ಮಿಲಿಯನ್ ಡಾಲರ್ ಗಳಿಸಲು ಸಹಾಯ ಮಾಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next