Advertisement

ಸಂಸ್ಕಾರ, ಸಂಸ್ಕೃತಿಯಿಂದ ಹಿಂದೂ ಧರ್ಮ ಸಮೃದ್ಧಿ

12:24 AM Nov 22, 2021 | Team Udayavani |

ಮಂಗಳೂರು: ಮತಾಂತರ, ಧಾರ್ಮಿಕ ಸ್ಥಳಗಳಿಗೆ ಹಾನಿ ಸೇರಿದಂತೆ ಹಿಂದೂ ಧರ್ಮಕ್ಕೆ ಎದುರಾಗುವ ಎಲ್ಲ ರೀತಿಯ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಶಕ್ತಿ ಸಮಾಜಕ್ಕಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು.

Advertisement

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವ ರಿಗೆ ಮಂಗಳೂರಿನ ಶ್ರೀ ಷಷ್ಟಬ್ದ ಸಮಿತಿ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ರವಿವಾರ ನಡೆದ ಶ್ರೀ ಗುರುವಂದನ ಪೌರ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತನ್ನನ್ನು ತಾನು ಅರಿತುಕೊಳ್ಳದಿದ್ದರೆ ಆವಾಂತರಕ್ಕೆ ಕಾರಣವಾಗುತ್ತದೆ. ಸ್ವಧರ್ಮದಿಂದ ಬದುಕಿದರೆ ಶ್ರೇಯಸ್ಸು. ಸಂಸ್ಕಾರ, ಸಂಸ್ಕೃತಿಯಿಂದ ಹಿಂದೂ ಧರ್ಮ ಸಮೃದ್ಧಿ ಎಂದರು.

ಸಂಸ್ಕೃತಿ, ಸಂಸ್ಕಾರಕ್ಕೆ ಶ್ರೀಗಳ ಕೊಡುಗೆ
ಮೂಡಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮಿ ಗಳು ಮಾತನಾಡಿ, ತುಳು ನಾಡಿನಲ್ಲಿ ಸಂಸ್ಕೃತಿ, ಸಂಸ್ಕಾರ ಮುನ್ನಡೆ ಸುವ ಕಾರ್ಯವನ್ನು ಒಡಿಯೂರು ಶ್ರೀಗಳು ಅತ್ಯಂತ ಶ್ರೇಷ್ಠವಾಗಿ ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.

ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಒಡಿಯೂರಿನ ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವಚನವಿತ್ತರು. ಒಡಿಯೂರು ಶ್ರೀಗಳ ಷಷ್ಟ éಬ್ದ ಕಾರ್ಯಕ್ರಮದ ಮಂಗಳೂರು ಸಮಿತಿ ಅಧ್ಯಕ್ಷ ಪುಷ್ಪ ರಾಜ್‌ ಜೈನ್‌ ಅಧ್ಯಕ್ಷತೆ ವಹಿಸಿದ್ದರು.
ಸಂಸದ ನಳಿನ್‌ ಕುಮಾರ್‌ ಕಟೀಲು, ಮೇಯರ್‌ ಪ್ರೇಮಾನಂದ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್‌ ಕಲ್ಕೂರ, ಒಡಿಯೂರು ಶ್ರೀಗಳ ಷಷ್ಟಬ್ದ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಮಂಗಳೂರು ಸಮಿತಿ ಪ್ರಧಾನ ಕಾರ್ಯದರ್ಶಿ ತಾರಾನಾಥ ಶೆಟ್ಟಿ ಬೋಳಾರ, ಕೋಶಾಧಿಕಾರಿ ಎಂ.ಪಿ. ದಿನೇಶ್‌, ಸಂಚಾಲಕ ನಾಗರಾಜ ಆಚಾರ್ಯ, ಸಂಯೋಜಕ ಪ್ರದೀಪ್‌ ಆಳ್ವ ಕದ್ರಿ, ಸುರೇಶ್‌ ರೈ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ:ಭಾರತದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆಯ ಅವಶ್ಯಕತೆಯಿಲ್ಲ : ಐಸಿಎಂಆರ್‌

ಸಮಿತಿಯ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ನಿರೂಪಿಸಿದರು. ಬೆಳಗ್ಗೆ 9 ರಿಂದ ಆಯ್ದ 60 ಭಜನಾ ತಂಡಗಳಿಂದ ಶ್ರೀ ಆಂಜನೇಯ, ಶ್ರೀ ದತ್ತಾತ್ರೇಯ, ಶ್ರೀ ಗುರು ಹಾಗೂ ಹನುಮಾನ್‌ ಚಾಲೀಸ ಸಾಹಿತ್ಯ ಗಳನ್ನೊಳಗೊಂಡ ಭಜನೆ/ಸಂಕೀರ್ತನೆ ಸ್ಪರ್ಧೆ ನಡೆಯಿತು.

ಸಾಧಕರಿಗೆ ಸಮ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಾಸುದೇವ್‌ ಆರ್‌. ಕೊಟ್ಟಾರಿ (ಧಾರ್ಮಿಕ), ಡಾ| ಜಗದೀಶ್‌ ಶೆಟ್ಟಿ ಬಿಜೈ (ಯೋಗ ಪ್ರಸಾರ), ಸುಧಾಕರ ರಾವ್‌ ಪೇಜಾವರ (ಸಂಘಟನೆ), ಸಿಎ ರಾಮ ಮೋಹನ ರೈ (ಶಿಕ್ಷಣ), ಗಣೇಶ್‌ ಕುಲಾಲ್‌ ಉರ್ವ (ಸಮಾಜ ಸೇವೆ) ಮತ್ತು ಸುಮತಿ ಶೆಣೈ (ಸಮಾಜ ಸೇವೆ) ಅವರಿಗೆ ಶ್ರೀ ಗುರುದೇವಾನಂದಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next