Advertisement

US Election; ಕ್ರೈಸ್ತ ತತ್ವ ಪಾಲನೆಗೆ ಹಿಂದು ಪತ್ನಿ ಸ್ಫೂರ್ತಿ: ವೆನ್ಸ್‌

12:17 AM Jul 17, 2024 | Team Udayavani |

ಮಿಲ್ವಾಕೀ: ಮಾಜಿ ಅಧ್ಯಕ್ಷ, ರಿಪಬ್ಲಿಕ್‌ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಜತೆಗೆ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿರುವ ಜೆ.ಡಿ.ವೆನ್ಸ್‌ಗೂ ಭಾರತದ ನಂಟಿದೆ. ವೆನ್ಸ್‌ ಅವರ ಪತ್ನಿ ಉಷಾ ಚಿಲುಕುರಿ ಅವರು ಭಾರತೀಯ ಮೂಲದವರಾಗಿದ್ದಾರೆ! ಉಷಾ ಪೋಷಕರು ಆಂಧ್ರದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

Advertisement

38 ವರ್ಷದ ಉಷಾ ವೃತ್ತಿಯಲ್ಲಿ ವಕೀಲೆಯಾಗಿದ್ದು,ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಹೊಂದಿದ್ದಾರೆ. ಸ್ಯಾನ್‌ ಡಿಯಾಗೋದದಲ್ಲಿ ಬೆಳೆದಿರುವ ಉಷಾ ಯಾಲೆ ಕಾನೂನು ಶಾಲೆಯಿಂದ ಪದವಿ ಪಡೆದಿದ್ದಾರೆ. ಕಲಿಕೆಯ ವೇಳೆ ವೆನ್ಸ್‌ ಜತೆಗೆ ಪರಿಚಯವಾಗಿತ್ತು. ಮುಂದೆ ಇವರಿಬ್ಬರು 2014ರಲ್ಲಿ ಮದುವೆಯದಾರು. ದಂಪತಿಗೆ ಇವಾನ್‌, ವಿವೇಕ್‌ ಮತ್ತು ಮಿರಾಬೆಲ್‌ ಮಕ್ಕಳಿದ್ದಾರೆ.

ತಮ್ಮ ಪತ್ನಿ ಹಿಂದೂ ಆದರೂ ನನ್ನ ಕೆಥೋಲಿಕ್‌ ನಂಬಿಕೆಗಳನ್ನು ಬಲಪಡಿಸಿದರು ಮತ್ತು ಸವಾಲುಗಳನ್ನು ಬಗೆಹರಿಸಲು ನೆರವಾದರು ಎಂದು ಜೆ.ಡಿ.ವೆನ್ಸ್‌ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ನಾನು ಕ್ರಿಶ್ಚಿಯನ್‌ ಆಗಿದ್ದರೂ ಚರ್ಚಿನ ಸದಸ್ಯನಾಗಿರಲಿಲ್ಲ. ನನ್ನ ಹೆಂಡತಿ ಹಿಂದೂವಾದರೂ ನನ್ನ ಕ್ರಿಶ್ಚಿಯನ್‌ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಿ­ದರು ಎಂದು ಹೇಳಿಕೊಂಡಿದ್ದಾರೆ.

ಟ್ರಂಪ್‌ ಜತೆಗೆ ವೆನ್ಸ್‌ ಗೆದ್ದರೆ, ಅಮೆರಿಕದ ಮೊದಲ ಭಾರತೀಯ ಮೂಲದ ಸೆಕೆಂಡ್‌ ಲೇಡಿ ಎಂಬ ಕೀರ್ತಿಗೆ ಉಷಾ ಪಾತ್ರರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next