Advertisement

ಹಿಂದೂ ಉಗ್ರವಾದ ಪದ ಬಳಕೆ : ಕಾಂಗ್ರೆಸ್‌ ವಿರುದ್ಧ ಸೇನೆ ಕಿಡಿ

11:17 AM Apr 04, 2019 | Vishnu Das |

ಮುಂಬಯಿ: ಕಾಂಗ್ರೆಸ್‌ ತನ್ನ ಆಳ್ವಿಕೆಯ ವೇಳೆ ಹಿಂದೂ ಉಗ್ರವಾದ ಎಂಬ ಪದವನ್ನು ಹರಡಿದೆ ಮತ್ತು ಪಾಕಿಸ್ತಾನಿ ಉಗ್ರರಿಗೆ ಭಾರತದಲ್ಲಿ ತಮ್ಮ ಭಯೋತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲು ಅದು ಪ್ರೋತ್ಸಾಹವನ್ನು ನೀಡಿದೆ ಎಂದು ಶಿವಸೇನೆ ಬುಧವಾರ ಆರೋಪಿಸಿದೆ.

Advertisement

ಅಲ್ಲದೆ, ಸಂವಿಧಾನದ ಆರ್ಟಿಕಲ್‌ 35-ಎ ಕುರಿತಂತೆ ಜಮ್ಮು – ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಓಮರ್‌ ಅಬ್ದುÇÉಾ ಅವರ ನಿಲುವನ್ನು ಕೂಡ ಪಕ್ಷವು ತೀವ್ರವಾಗಿ ಟೀಕಿಸಿದೆ. ಇಂತಹ ಧ್ವನಿಗಳನ್ನು ನಿರ್ಬಂಧಿಸದಿದ್ದರೆ, ಗಡಿ ರಾಜ್ಯವು ಅಶಾಂತಿ ಮತ್ತು ಅಸ್ಥಿರತೆಯ ಹಿಡಿತದಲ್ಲೇ ಉಳಿಯಲಿದೆ ಎಂದು ಅದು ಹೇಳಿದೆ.

ಶಾಂತಿ ಪ್ರಿಯ ಹಿಂದೂಗಳಿಗೆ ಉಗ್ರವಾದಿಗಳು ಎಂಬ ಹಣೆಪಟ್ಟಿಯನ್ನು ಕಟ್ಟಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸನ್ನು ಗುರಿ ಮಾಡಿ ಕೊಂಡ ಎರಡು ದಿನಗಳ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರಪಕ್ಷದಿಂದ ಇಂತಹ ಹೇಳಿಕೆಯು ಬಂದಿರುವುದಾಗಿದೆ.

ಸ್ವಾಮಿ ಅಸೀಮಾನಂದ (ಸಂಜೋತಾ ಸ್ಫೋಟ ಪ್ರಕರಣದಲ್ಲಿ) ಮತ್ತು ಸ್ವಾಧ್ವಿ ಪ್ರಜ್ಞಾ ಠಾಕುರ್‌ ಹಾಗೂ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಪುರೋಹಿತ್‌ (ಇಬ್ಬರೂ ಮಾಲೆಗಾಂವ್‌ ಪ್ರಕರಣದಲ್ಲಿ ಆರೋಪಿಗಳಾಗಿ¨ªಾರೆ) ಅವರೊಂದಿಗೆ ಘೋರ ಅನ್ಯಾಯವಾಗಿದೆ ಎಂದೂ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಹಿಂದೂ ಉಗ್ರವಾದ ಎಂಬ ಪದದ ಹರಡುವಿಕೆಯು ಪಾಕಿಸ್ಥಾನಿ ಭಯೋತ್ಪಾದಕರಿಗೆ ಪ್ರೋತ್ಸಾಹವನ್ನು ನೀಡಿದೆ. ಪಾಕಿಸ್ಥಾನಿಗಳು ಭಯೋತ್ಪಾದಕ ದಾಳಿಗಳ ಹೊಣೆಯನ್ನು ಹಿಂದೂ ಉಗ್ರಗಾಮಿಗಳ ಮೇಲೆ ಹಾಕುತ್ತಿದ್ದಾರೆ. ಈಗ ಒಂದು ನ್ಯಾಯಾಲಯವು ಸ್ವಾಮಿ ಅಸೀಮಾನಂದ ಅವರನ್ನು ಅಮಾಯಕ ಎಂದು ಕರೆದಿದೆ ಎಂದು ಮರಾಠಿ ದೈನಿಕದಲ್ಲಿ ಉಲ್ಲೇಖೀಸಲಾಗಿದೆ.

Advertisement

ಸೋಮವಾರ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ತನ್ನ ರ್ಯಾಲಿಯಲ್ಲಿ ಮೋದಿ ಅವರು ಕಾಂಗ್ರೆಸ್‌ ಮೇಲೆ ವಿಶ್ವ ಮಟ್ಟದಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿ ರುವ ಆರೋಪವನ್ನು ಹೊರೆಸಿದ್ದಾರೆ ಮತ್ತು ದೇಶದ 5,000 ವರ್ಷ ಹಳೆಯ ಸಂಸ್ಕೃತಿಗೆ ಉಗ್ರವಾದದ ಹಣೆಪಟ್ಟಿಯನ್ನು ಕಟ್ಟಿದ್ದಕ್ಕಾಗಿ ಅದರ ವಿರುದ್ಧ ಆಕ್ರೋಶದ ಕಿಡಿಕಾರಿದ್ದಾರೆ ಎಂದು ಅದು ತಿಳಿಸಿದೆ.

2019ರ ಯುದ್ಧಭೂಮಿಯಲ್ಲಿ ಮೋದಿ ಅವರು ಭರ್ಜರಿಯಾಗಿ ಹಿಂದುತ್ವದ ಕಾರ್ಡ್‌ ಅನ್ನು ಆಡಿ¨ªಾರೆ. ವಾರ್ಧಾದಲ್ಲಿ ಮೋದಿಯವರ ಭಾಷಣದ ವೇಳೆ ಶೇ.40ರಷ್ಟು ಮೈದಾನ ಖಾಲಿ ಇತ್ತು ಎಂದು ಕೆಲವರು ಹೇಳುತ್ತಾರೆ. ಆದರೆ, ಅಷ್ಟೊಂದು ಬಿಸಿಲಿನ ಹೊರತಾ ಗಿಯೂ ಮೈದಾನವು ಶೇಕಡಾ 60 ರಷ್ಟು ಜನರಿಂದ ತುಂಬಿರುವುದು ಮುಖ್ಯ ವಿಷಯವಾಗಿದೆ ಎಂದು ಶಿವಸೇನೆ ತನ್ನ ಸಂಪಾದಕೀಯದಲ್ಲಿ ನುಡಿದಿದೆ.

ಸಂವಿಧಾನದ ಆರ್ಟಿಕಲ್‌ 370 ಮತ್ತು ಆರ್ಟಿಕಲ್‌ 35-ಎ ಸಂಬಂಧ ಮುಫ್ತಿ ಮತ್ತು ಅಬ್ದುಲ್ಲಾರ ಧೋರಣೆಯನ್ನು ಕೂಡ ಶಿವಸೇನೆ ಪಕ್ಷವು ತೀವ್ರವಾಗಿ ಟೀಕಿಸಿದೆ.

ಹಿಂದೂಗಳ ವಿರುದ್ಧ ಸುಳ್ಳು ಪ್ರಕರಣ
ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಕೇಸರಿ ಉಗ್ರವಾದ ಅಥವಾ ಹಿಂದೂ ಉಗ್ರವಾದ ಎಂಬ ಪದವು ಹರಡಿತು. ಇದರ ಹೊರತಾಗಿ, ಸಂಜೋತಾ ರೈಲು ಸ್ಫೋಟ ಮತ್ತು ಮಾಲೆಗಾಂವ್‌ ಬಾಂಬ್‌ ಸ್ಫೋಟದಲ್ಲಿ ಹಿಂದೂಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next