ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿನ ಐತಿಹಾಸಿಕ ಶ್ರೀ ಶಿವ-ವಿಷ್ಣು ದೇಗುಲವನ್ನು ಖಲಿಸ್ತಾನಿ ಪರ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಒಂದೇ ವಾರದಲ್ಲಿ ಧ್ವಂಸಗೊಳಿಸಿರುವ 2ನೇ ದೇಗುಲ ಇದಾಗಿದೆ.
ಸ್ಥಳೀಯ ಹಿಂದೂ ಸಮುದಾಯದಿಂದ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಿಲ್ ಪಾರ್ಕ್ ಬಳಿಯ ಸ್ವಾಮಿ ನಾರಾಯಣ ದೇಗುಲವನ್ನು ಜ.12ರಂದು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.
ಈ ಬೆನ್ನಲ್ಲೇ, ಕೇವಲ 4 ದಿನದ ಅಂತರದಲ್ಲಿ ಮೆಲ್ಬೋರ್ನ್ ನಲ್ಲಿ ಮತ್ತೊಂದು ದೇಗುಲವನ್ನು ಧ್ವಂಸಗೊಳಿಸಿದ್ದಾರೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆ ದೇಗುಲಕ್ಕೆ ತೆರಳಿದಾಗ ಧ್ವಂಸಗೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಮೆಲ್ಬರ್ನ್ ಹಿಂದೂ ಸಮುದಾಯದ ಮುಖಂಡರಾದ ಮಕರಂದ್ ಭಾಗವತ್ ಈ ಕುರಿತು ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿದ್ದಾರೆ.