ಮೆವಾತ್: ಕಳವಳಕಾರಿ ವಿಚಾರವೊಂದರಲ್ಲಿ ಹರಿಯಾಣದ ಶಾಲೆಯೊಂದರ ಹಿಂದೂ ವಿದ್ಯಾರ್ಥಿಗಳು ಶಿಕ್ಷಕರು ತಮಗೆ ಕುರಾನ್ ಓದುವಂತೆ ,ನಮಾಜ್ ಮಾಡುವಂತೆ ಬಲವಂತ ಮಾಡಿ ಹಿಂಸೆ ನೀಡಿರುವುದಾಗಿ ಆರೋಪಿಸಿದ್ದು , ಆತಂಕಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳು ಈ ಬಗ್ಗೆ ಮಾಧ್ಯಮಗಳ ಮುಂದೆ ನೋವು ತೋಡಿ ಕೊಂಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮೇವಾತ್ ಮಾಡೆಲ್ ಪಬ್ಲಿಕ್ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳಿಗೆ ಕುರಾನ್ ಓದುವಂತೆ, ನಮಾಜ್ ಮಾಡುವಂತೆ ಬಲವಂತ ಮಾಡಿದ್ದು, ಥಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮೂವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಇಸ್ಲಾಂ ಬೋಧನೆಗೆ ಮುಂದಾಗಿದ್ದು ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು ಇನ್ನೋರ್ವ ಶಿಕ್ಷಕನನ್ನು ವರ್ಗಾವಣೆ ಮಾಡಲಾಗಿದೆ.
ಹರ್ಯಾಣ ಸರಕಾರ ಈ ಬಗ್ಗೆ ಆಡಳಿತಾತ್ಮಕ ತನಿಖೆ ನಡೆಸಲು ಆದೇಶ ನೀಡಿದೆ.