Advertisement
ಅವರು ಮುಡಿಪುವಿನಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ದೀಪಕ್ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮುಖಂಡ ಟಿ.ಜಿ.ರಾಜಾರಾಂ ಭಟ್ ಮಾತನಾಡಿ, ವಿದ್ವಂಸಕ ಕೃತ್ಯಗಳ ವಿರುದ್ದ ಸೆಟೆದು ನಿಲ್ಲಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡರಾದ ಮೋಹನ್ ರಾಜ್, ಮೋಹನ್‌ದಾಸ್ ಶೆಟ್ಟಿ, ದೇವಪ್ಪ, ಮಹೇಶ್ ಚೌಟ, ನವೀನ್ ಪಾದಲ್ಪಾಡಿ,ಹೇಮಂತ್ ಶೆಟ್ಟಿ, ಶರೀಫ್ ಬೋಳಿಯಾರ್, ವಿಕಾಸ್ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.