ಢಾಕಾ: “ಹಿಂದೂ ಧರ್ಮ ಗ್ರಂಥಗಳು ಯಾವುದೇ ನೈತಿಕ ಬೋಧನೆಗಳನ್ನು ಮಾಡುವುದಿಲ್ಲ. ಅವು ಅಶ್ಲೀಲ ಬರಹಗಳು,’ ಎಂದು ಬಾಂಗ್ಲಾದೇಶದ ವಿರೋಧ ಪಕ್ಷ ಬಾಂಗ್ಲಾದೇಶ್ ಗೊನೊ ಓಧಿಕಾರ್ ಪರಿಷತ್ ಜಂಟಿ ಸಂಚಾಲಕ ನೂರುಲ್ ಹಕ್ ನೂರ್ ನಾಲಿಗೆ ಹರಿಬಿಟ್ಟಿದ್ದಾನೆ.
ಕೆಲವೇ ತಿಂಗಳಲ್ಲಿ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಹುಸಂಖ್ಯಾತ ಮುಸ್ಲಿಮರ ಓಲೈಕೆಗಾಗಿ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಅವರ ಧರ್ಮದ ವಿರುದ್ಧ ನೂರುಲ್ ಟೀಕಾ ಪ್ರಹಾರ ಮುಂದುವರಿಸಿದ್ದಾನೆ.
ಉಗ್ರ ಸಂಘಟನೆ ಜಮತೆ ಇಸ್ಲಾಮಿ ಬೆಂಬಲ ಹೊಂದಿರುವ ನುರೂಲ್, ಬುಧವಾರ ಫೇಸ್‌ಬುಕ್ ಲೈವ್ ವಿಡಿಯೋ ಮಾಡಿದ್ದು, ಇದರಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡಿದ್ದಾನೆ.
ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವನ್ನು ಕಿತ್ತೂಗೆಯುವ ನಿಟ್ಟಿನಲ್ಲಿ ಉಗ್ರ ಸಂಘಟನೆ ಜಮತೆ ಇಸ್ಲಾಮಿ ಪ್ರತಿಪಕ್ಷಕ್ಕೆ ಬೆಂಬಲ ಸೂಚಿಸಿದೆ. ಪ್ರತಿಪಕ್ಷ ನಾಯಕರು ಅಲ್ಪಸಂಖ್ಯಾತ ಹಿಂದೂಗಳು ಮತ್ತು ಭಾರತದ ವಿರುದ್ಧ ಹರಿಹಾಯುತ್ತಿದ್ದಾರೆ.