Advertisement

ಹಿಂದೂ ಧರ್ಮ ಭಕ್ತಿ ಕೇಂದ್ರಿತ

01:03 PM Oct 14, 2018 | |

ಕಲಬುರಗಿ: ಹಿಂದೂ ಧರ್ಮ ಶಕ್ತಿ ಕೇಂದ್ರಿತ ಧರ್ಮವಲ್ಲ. ಅದೊಂದು ಭಕ್ತಿ ಕೇಂದ್ರಿತ ಧರ್ಮವಾಗಿದೆ. ನಮ್ಮಂತಹ
ಸಾಮಾನ್ಯರು ಬಿಂದುವಿನಿಂದ ಸಿಂಧುವಾಗಬಹುದು ಎಂದು ವಿವೇಕಾನಂದರ ಮೂಲಕ ಹಿಂದೂ ಧರ್ಮ ನಮಗೆ ತೋರಿಸಿದೆ. ಧರ್ಮದಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡವರು ಮಾತ್ರ ದೊಡ್ಡವರಾಗಲು ಸಾಧ್ಯ. ಸಮರ್ಪಣೆಯಲ್ಲಿ ಫಲ ಇರುತ್ತದೆ ಎಂದು ಲೇಖಕಿ, ಚಿಂತಕಿ ವೀಣಾ ಬನ್ನಂಜೆ ದೂರಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಯುವ ಬ್ರಿಗೇಡ್‌, ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣಕ್ಕೆ 125ನೇ ವರ್ಷಾಚರಣೆ ಅಂಗವಾಗಿ “ಮತ್ತೂಮ್ಮೆ ದಿಗ್ವಿಜಯ’ ರಥಯಾತ್ರೆಯ ಬಹಿರಂಗ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಗುರು-ಶಿಷ್ಯರ ಸಂಬಂಧದಲ್ಲೂ ಆಕರ್ಷಣೆ ಇರುತ್ತದೆ ಎನ್ನುವುದಕ್ಕೆ ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರೇ ಸಾಕ್ಷಿ. ದೇವ ಸಮಯದಲ್ಲಿ ಗುರು-ಶಿಷ್ಯರ ಸಂಬಂಧ ಸಂಭವಿಸುವಂತಾಗಿದ್ದು, ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಲ್ಲಿ ಆಕರ್ಷಣೆಗೊಂಡು ತಮ್ಮ ಉತ್ತರಾಧಿಕಾರಿಯಾಗಿ ಬೆಳೆಸಿದರು ಎಂದು ಹೇಳಿದರು.

ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧಿಸಲು
ಏಕಾಗ್ರತೆ ಮತ್ತು ಶ್ರದ್ಧೆಯಿಂದ ಮಾತ್ರ ಸಾಧ್ಯ. ಸ್ವಾಮಿ ವಿವೇಕಾನಂದರಾಗಿ ಬೆಳೆದ ನರೇಂದ್ರನ ಬದುಕು ನಮಗೆ
ಆದರ್ಶವಾಗಬೇಕು ಎಂದರು. ವಿವೇಕಾನಂದರು ಪರಿಪಾಲಿ ಸಿಕೊಂಡು ಬರುತ್ತಿದ್ದ ಜ್ಞಾನ, ಬುದ್ಧಿ ಹಾಗೂ ಬಲಗಳ
ತತ್ವವು ಯುವಕರಿಗೆ ಪ್ರೇರಣೆಯಾಗಬೇಕು. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಜ್ಞಾನ, ಬುದ್ಧಿ, ಬಲದಿಂದ
ಎದುರಿಸಬೇಕು. ಮನೋಬಲವನ್ನು ಯಾವುದೇ ಕಾರಣಕ್ಕೂ ಕುಗ್ಗಿಸಿಕೊಳ್ಳಬಾರದು. ವಿವೇಕಾನಂದರ ಸಾಹಿತ್ಯವನ್ನು ಮನೆ, ಮನಗಳಲ್ಲಿ ತುಂಬಿಸಿಕೊಳ್ಳಬೇಕೆಂದು ತಿಳಿಸಿದರು.

ಉದ್ಘಾಟನಾ ಭಾಷಣ ಮಾಡಿದ ನಿತ್ಯಾನಂದ ವಿವೇಕವಂಶಿ, ಇಂದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ
ದೊರೆಯುತ್ತಿಲ್ಲ. ಹೀಗಾಗಿ ಧರ್ಮದ ದಾರಿಯಲ್ಲಿ ಸಾಗಲು ಸ್ವಾಮಿ ವಿವೇಕಾನಂದರು ಆದರ್ಶಪ್ರಾಯರಾಗಬೇಕು.
ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ರಾಮಕೃಷ್ಣ ವಿವೇಕಾನಂದ
ಆಶ್ರಮದ ಮಹೇಶ್ವರಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ
ಬೆಳಗ್ಗೆ 9 ಗಂಟೆಗೆ ಶರಣಬಸವೇಶ್ವರ ದೇವಸ್ಥಾನದಲ್ಲಿ ಶೋಭಾಯಾತ್ರೆಗೆ ಶರಣಬಸವೇಶ್ವರ ಸಂಸ್ಥಾನದ
ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಚಾಲನೆ ನೀಡಿದರು.

Advertisement

ಗೋವಾ ಹೋಟೆಲ್‌, ಆನಂದ ಹೋಟೆಲ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಮೂಲಕ ಡಾ| ಎಸ್‌. ಎಂ. ಪಂಡಿತ ರಂಗಮಂದಿರದ ವರೆಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಸ್ವಾಮಿ ವಿವೇಕಾನಂದರ
ವೇಷಧಾರಿಯಾಗಿ ಸುಮಾರು 650 ವಿದ್ಯಾರ್ಥಿಗಳು ಗಮನ ಸೆಳೆದರು. 

Advertisement

Udayavani is now on Telegram. Click here to join our channel and stay updated with the latest news.

Next