Advertisement

ಸಾಮರಸ್ಯ ನಡಿಗೆಗೆ ಹಿಂದೂ ಸಂಘಟನೆಗಳಿಗೆ ಅವಕಾಶವಿಲ್ಲ: ರಮಾನಾಥ ರೈ

07:05 AM Dec 07, 2017 | Team Udayavani |

ಬೆಂಗಳೂರು: ಮಂಗಳೂರಿನಲ್ಲಿ ಡಿಸೆಂಬರ್‌ 12 ರಂದು ನಡೆಯಲಿರುವ ಸಾಮರಸ್ಯ ಯಾತ್ರೆಗೆ ಹಿಂದೂ ಸಂಘಟನೆಗಳು ಹಾಗೂ ಪಿಎಫ್ಐ ಸಂಘಟನೆ ಕಾರ್ಯಕರ್ತರಿಗೆ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ. 

Advertisement

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜದ ಸಾಮರಸ್ಯ ಹಾಳು ಮಾಡುವುದೇ ಬಿಜೆಪಿಯವರ ಉದ್ದೇಶವಾಗಿದೆ. ಕೋಮು ಗಲಭೆ ಸೃಷ್ಠಿ ಮಾಡುವ ಮೂಲಕ ಮತ ಪಡೆಯುವ ಬಿಜೆಪಿಯವರ ತಂತ್ರ ಈ ಬಾರಿ ವಕೌìಟ್‌ ಆಗುವುದಿಲ್ಲ ಎಂದು ಹೇಳಿದರು.

ಸಾಮರಸ್ಯ ಯಾತ್ರೆಯಲ್ಲಿ ಎಲ್ಲ ಸಂಘಟನೆಗಳಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಹಿಂದೂ ಪರ ಸಂಘಟನೆಗಳು ಹಾಗೂ ಪಿಎಫ್ಐ ಸಂಘಟನೆಗಳಿಗೆ ಮಾತ್ರ ಅವಕಾಶವಿಲ್ಲ ಎಂದು ಹೇಳಿದರು. ಇದೇ ವೇಳೆ ಸಂಸದ ಪ್ರತಾಪ್‌ ಸಿಂಹ ಅವರ ವಿರುದ್ಧ ಹರಿಹಾಯ್ದ ಅವರು, ಸರ್ಕಾರ ವಾಹನ ನೀಡಿ ಚಾಲನೆಗೆ ಚಾಲಕರನ್ನೂ ನೀಡಿದೆ. ಅವರನ್ನು ಬಿಟ್ಟು ಪ್ರತಾಪ್‌ ಸಿಂಹ ಅವರೇ ವಾಹನ ಚಾಲನೆ ಮಾಡಿ, ಪೋಲಿಸರ ಮೇಲೆ ಹತ್ತಿಸಲು ಹೋಗಿದ್ದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next