Advertisement

ಅಯೋಧ್ಯೆ ತೀರ್ಪು ಸ್ವಾಗತಿಸಿದ ಹಿಂದೂ-ಮುಸ್ಲಿಮರು

08:56 PM Nov 09, 2019 | Team Udayavani |

ನೆಲಮಂಗಲ: ಅಯೋಧ್ಯೆತೀರ್ಪು ಹಿನ್ನಲೆ ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದಲೇ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.ಹಿಂದೂ ಹಾಗೂ ಮುಸಲ್ಮಾನ ಸಂಘಟನೆ ಮುಖಂಡರಿಗೆ ಯಾವುದೇ ಸಂಭ್ರಮಾಚಾರಣೆ ಹಾಗೂ ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು,ಇದರಿಂದ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.

Advertisement

ಅಯೋಧ್ಯೆಯ ಐತಿಹಾಸಿಕ ತೀರ್ಪನ್ನು ತಾಲೂಕಿನ ಸ್ವಾಮೀಜಿಗಳು, ಮುಖಂಡರು, ಮುಸ್ಲಿಂ ಮುಖಂಡರು, ಸಾರ್ವಜನಿಕರು ಸ್ವಾಗತಿಸುವ ಮೂಲಕಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ, ದೇಶದ ಸರ್ವೋತ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ದೇಶದ ಎಲ್ಲಾ ಜನರು ಒಪ್ಪಿಕೊಳ್ಳಬೇಕು.ಭಾರತದ ಏಕತೆಗಾಗಿ ಶಾಂತಿ ಕಾಪಾಡುವ ಮೂಲಕ ಸಾಮರಸ್ಯದಿಂದ ಬಾಳಬೇಕು ಎನ್ನುವ ಸಂದೇಶ ತಾಲೂಕಿನಾದ್ಯಂತ ಪ್ರಸರಿಸಿದೆ.

ಪೊಲೀಸರ ಕಟ್ಟೆಚ್ಚರ: ತಾಲೂಕಿನ ಇಸ್ಲಾಂಪುರ, ಪಟ್ಟಣದ ಮಸೀದಿಗಳು, ದೇವಸ್ಥಾನ, ಸಾರ್ವಜನಿಕಸ್ಥಳ,ತ್ಯಾಮಗೊಂಡ್ಲು, ಸೋಂಪುರ ಸೇರಿದಂತೆ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚು ಪೊಲೀಸರ ನಿಯೋಜನೆ ಮಾಡುವ ಮೂಲಕ ತಾಲೂಕಿನಾದ್ಯಂತ 200ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿದೆ. ಸೋಮವಾರದವರೆಗೂ ಪೊಲೀಸರ ಬಿಗಿ ಭದ್ರತೆ ಇರಲಿದ್ದು , ನಾಳೆ ಈದ್‌ ಮಿಲಾದ್‌ ಇರುವ ಕಾರಣ ಹೆಚ್ಚಿನ ಭದ್ರತೆ ಮಾಡಲಾಗಿದೆ ಎಂದು ಡಿವೈಎಸ್‌ಪಿ ತಿಳಿಸಿದರು.

ಪ್ರತಿಕ್ರಿಯಿಸಿ ಭಾರತದಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಸಂತೋಷದಿಂದ ಸ್ವಾಗತಿಸುತ್ತೇವೆ, ದೇಶದಲ್ಲಿ ಹಿಂಧೂ ಮುಸ್ಲಿಮರ ಗಲಾಟೆಗೆ ಮುಕ್ತಿ ಸಿಕ್ಕಿದೆ, ಪ್ರತಿಯೊಬ್ಬರು ಸಾಮರಸ್ಯದಿಂದ ಜೀವನಸಾಗಿಸಬೇಕು, ಎಲ್ಲರೂ ಶಾಂತಿಯಿಂದ ಕಾನೂನು ಪಾಲಿಸಬೇಕು.
-ಪವಾಡ ಶ್ರೀಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ‌ಸ್ವಾಮೀಜಿ

ಸುಪ್ರೀಂಕೋರ್ಟ್‌ ತೀರ್ಪನ್ನು ಎಲ್ಲರೂ ಗೌರವಿಸಬೇಕು, ಹಿಂದೂಗಳ ಜಾಗ ಹಿಂದುಗಳಿಗೆ ಸಿಕ್ಕಿದೆ, ಇದರಿಂದ ಸಂಭ್ರಮ ಪಡುವ ಅಗತ್ಯವಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ಭೂಮಿ ನೀಡಿದ್ದಾರೆ. ಅವರು ಬೇಸರ ಮಾಡಿಕೊಳ್ಳುವಂತಿಲ್ಲ. ಸಮಾಜದಲ್ಲಿ ಶಾಂತಿ ಕಾಪಾಡುವ ಮೂಲಕ ದೇಶದ ಏಕತೆ ಕಾಪಾಡಬೇಕು.
-ಶ್ರೀ ಹೊನ್ನಮ್ಮಗವಿ ಮಠದ ಶ್ರೀರುದ್ರಮುನಿ ಶಿವಾಚಾರ್ಯಸ್ವಾಮೀಜಿ

Advertisement

ಭಾರತದ ಸಂವಿಧಾನದ ಅಡಿಯಲ್ಲಿ ನೀಡಿರುವ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ, ಎಲ್ಲರನ್ನು ಒಟ್ಟುಗೂಡಿಸುವ ಸಹಬಾಳ್ವೆಯಿಂದ ಕರೆದುಕೊಂಡು ಹೋಗುವ ಚಮತ್ಕಾರದ ತೀರ್ಪನ್ನು ನ್ಯಾಯಾಲಯ ನೀಡಿದೆ,ನ್ಯಾಯಾಲಯದ ತೀರ್ಪುಗೌರವಿಸಿ ಸಮಾಜದಲ್ಲಿ ಶಾಂತಿ ಮೂಡಿಸಲು ಪ್ರತಿಯೊಬ್ಬರು ಮುಂದಾಗಬೇಕು, ಇದು ಸುವರ್ಣಾಕ್ಷರಗಳಲ್ಲಿ ಬರೆಯ ಬೇಕಾದ ತೀರ್ಪುಎಂದರು.
-ಶ್ರೀ ವನಕಲ್ಲು ಮಲ್ಲೇಶ್ವರ ಮಠದ ಶ್ರೀಬಸವ ರಮಾನಂದ ಸ್ವಾಮೀಜಿ

ಮೇಲಾಣಗವಿಮಠದಶ್ರೀಮಲಯಶಾಂತಮುನಿ ದೇಶಿಕೇಂದ್ರಸ್ವಾಮೀಜಿ ಪ್ರತಿಕ್ರಿಯಿಸಿ ನಾವುಜಾತಿಧರ್ಮಕ್ಕಿಂತಮೊದಲು ನಾವೆಲ್ಲರೂ ಭಾರತೀಯರೆಂದು ನೆನಪಿಸಿಕೊಳ್ಳಬೇಕು, ನ್ಯಾಯಾಲಯದ ತೀರ್ಪನ್ನು ಗೌರವದಿಂದ ಸ್ವಾಗತಿಸಿದ್ದೇವೆ, ದೇಶದ ಜನರು ಭಾವೈಕ್ಯತೆಹಾಗೂ ಸಾಮರಸ್ಯದಿಂದ ಜೀವನ ಸಾಗಿಸಬೇಕು, ಅಯೋಧ್ಯವಿವಾಧಿತ ಸ್ಥಳವಾಗದೇ ಸಾಮರಸ್ಯದ ಕ್ಷೇತ್ರವಾಗಿ ವಿಶ್ವ ಪ್ರಸಿದ್ದವಾಗಲಿ.
-ಮೇಲಾಣಗವಿ ಮಠದ ಶ್ರೀಮಲಯ ಶಾಂತಮುನಿ ದೇಶಿ ಕೇಂದ್ರ ಸ್ವಾಮೀಜಿ

ಅಯೋಧ್ಯೆ ವಿವಾದದಲ್ಲಿ ಐತಿಹಾಸಿಕ ತೀರ್ಪು ನೀಡಲಾಗಿದ್ದು, ಗೌರವದಿಂದ ಸ್ವಾಗತಿಸುತ್ತೇವೆ, ನ.9 ಭಾರತೀಯರಾದ ನಮಗೆಲ್ಲ ಸಮಾನತೆಯ ಸಂಕೇತವಾಗಿದೆ, ಇಡೀ ದೇಶತನ್ನ ಸೌಹಾರ್ದತೆ, ಪ್ರೀತಿ, ವಿಶ್ವಾಸ, ತ್ಯಾಗ, ನಂಬಿಕೆಯನ್ನು ಪ್ರದರ್ಶನ ಮಾಡುವ ಮೂಲಕ ಜಾತ್ಯತೀತ ಸಂವಿಧಾನಕ್ಕೆ ಕಾನೂನಿಗೆ, ಸಮಾಜದ ಏಳಿಗೆಗೆ ಶ್ರಮಿಸಬೇಕು.
-ಸೈಯದ್‌ ಖಲೀಮುಲ್ಲಾ, ಕೆಪಿಸಿಸಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next