Advertisement

ಹಿಂದೂ ಮಹಾಸಭಾ ಕಾರ್ಯಕರ್ತರ ಪ್ರತಿಭಟನೆ

03:18 PM Aug 07, 2017 | |

ದಾವಣಗೆರೆ: ಬಂಟ್ವಾಳದ ಬಿ.ಸಿ. ರೋಡ್‌ನ‌ಲ್ಲಿ ಈಚೆಗೆ ನಡೆದ ಶರತ್‌ ಮಡಿವಾಳ ಹತ್ಯೆ ಒಳಗೊಂಡಂತೆ ಹಿಂದೂ ಸಮಾಜದ ಮುಖಂಡರ ನಾಯಕರ ಹತ್ಯೆಗಳ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಿಂದೂ ಮಹಾಸಭಾ ಕಾರ್ಯಕರ್ತರು ಭಾನುವಾರ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 

Advertisement

ಬಂಟ್ವಾಳದ ಬಿಸಿ ರೋಡ್‌ನ‌ಲ್ಲಿ ಈಚೆಗೆ ನಡೆದ ಶರತ್‌ ಮಡಿವಾಳ ಹತ್ಯೆ ಒಳಗೊಂಡಂತೆ ರಾಜ್ಯದಲ್ಲಿ ಹಿಂದೂ ಸಮಾಜದ ಮುಖಂಡರ ನಾಯಕರ ಹತ್ಯೆಗಳು ನಡೆದಿವೆ. ಘಟನೆಗೆ ಸಂಬಂಧಿಸಿದಂತೆ ಯಾರ ಬಂಧನವೂ ಆಗಿಲ್ಲ. ರಾಜ್ಯ ಸರ್ಕಾರ ಯಾವುದೇ ಹತ್ಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಿಂದೂ ಸಮಾಜದ ಮುಖಂಡರ ಹತ್ಯೆಯ ಹಿಂದಿನ ಕಾರಣ, ತಪ್ಪಿತಸ್ಥರ ಬಗ್ಗೆ ಗೊತ್ತಾಗಬೇಕಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಎಲ್ಲ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ  ವಹಿಸಬೇಕು. ಎಲ್ಲ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ವಿಶೇಷ ನ್ಯಾಯಾಲಯ ಪ್ರಾರಂಭಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹಿಂದೂ ಸಮಾಜ ಬಾಂಧವರು ನಡೆಸುವ ಪವಿತ್ರ ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಇಬ್ಬರನ್ನು ಹತ್ಯೆಗೈದಿದ್ದು ಅತ್ಯಂತ ಖಂಡನೀಯ. ಸರ್ಕಾರ ಅಮರನಾಥ ಯಾತ್ರಾರ್ಥಿ ಗಳಿಗೆ ಇನ್ನೂ ಹೆಚ್ಚಿನ ಗರಿಷ್ಟ ಮಟ್ಟದ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಹುಸಿ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿರುವ ಸಾಧ್ವಿ ಪ್ರಜ್ಞಾಸಿಂಗ್‌ ಅವರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ವಿರುದ್ಧ ಅತ್ಯಂತ ಕಠಿಣಾತಿಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪದೆ ಪದೇ ಭಾರತದೊಂದಿಗೆ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು. ಎಲ್ಲ ಭಾರತೀಯರು ಚೀನಾ ಉತ್ಪನ್ನಗಳ ನಿಷೇಧಿಸುವ ಮೂಲಕ ಆರ್ಥಿಕವಾಗಿ ದೊಡ್ಡ ಹೊಡೆತ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಅಧ್ಯಕ್ಷ ಜೆ. ಅರುಣ್‌ಕುಮಾರ್‌, ಎಸ್‌.ಪ್ರಕಾಶ್‌, ಕೆ.ಎಚ್‌. ಮಂಜುನಾಥ್‌, ಕೆ.ಎಸ್‌. ಶ್ರೀಧರ್‌, ಅಣ್ಣಪ್ಪ, ಸೋಮಶೇಖರ್‌, ಶೇಖರ್‌, ಅಭಿಷೇಕ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next