ಮಸ್ಕಿ: ಶಿವಮೊಗ್ಗದ ಹಿಂದೂ ಹರ್ಷ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನೆ ವಾಲ್ಮೀಕಿ ವೃತ್ತ, ಕನಕವೃತ್ತದ ಮೂಲಕ ಸಾಗಿ ಹಳೆ ಬಸ್ ನಿಲ್ದಾಣಕ್ಕೆ ಆಗಮಿಸಿತು.
ಹರ್ಷ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಹರ್ಷ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಪ್ರತಿಭಟನಕಾರರು ಘೋಷಣೆ ಹಾಕಿದರು.
ಸಂಘಟನೆ ಮುಖಂಡರಾದ ವಸಂತಕುಮಾರ, ರವಿಕುಮಾರ್ ಪಾಟೀಲ್, ಪ್ರಸನ್ನ ಪಾಟೀಲ್, ಚೇತನ ಪಾಟೀಲ್, ಸುರೇಶ ರಾಕೇಶ ಪಾಟೀಲ್, ಸುರೇಶ ಹರಸೂರು, ಅಭಿಷೇಕ್ ಮಾಲಿ ಪಾಟೀಲ್, ಅಮರೇಶ ಮಾಟೂರು, ಅಮರೇಶ ಬ್ಯಾಳಿ, ನಾಗರಾಜ ಯಂಬಲದ, ವಿಜಯ ಹೂವಿನಭಾವಿ, ಮೌನೇಶ ನಾಯಕ, ಮಲ್ಲಯ್ಯ ಅಂಬಾಡಿ, ಕಿರಣ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಹತ್ಯೆ ಖಂಡಿಸಿ ತಹಶೀಲ್ದಾರ್ ಕವಿತಾ. ಆರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.