Advertisement

ಗಂಗೊಳ್ಳಿ ಪಂಚಾಯತ್‌ಗೆ ಹಿಂಜಾವೇ ಮುತ್ತಿಗೆ, ಪ್ರತಿಭಟನೆ

11:26 PM Feb 22, 2021 | Team Udayavani |

ಗಂಗೊಳ್ಳಿ: ಅನಧಿಕೃತ ಕಟ್ಟಡ ತೆರವಿಗೆ ಯಾವುದೇ ಸಂಕೋಚ ಬೇಡ. ಕಾನೂನಿಗೆ ವಿರುದ್ಧವಾಗಿ ಯಾವುದೇ ಧರ್ಮಕೇಂದ್ರಗಳ ಕಟ್ಟಡ ರಚನೆ ನಿಷಿದ್ಧ. ಆದ್ದರಿಂದ ಅಕ್ರಮ ಕಟ್ಟಡ ತೆರವುಗೊಳಿಸುವಾಗ ಹಿಂಜಾವೇ ಸ್ಥಳೀಯಾಡಳಿತದ ಜತೆಗೆ ಇರುತ್ತದೆ. ಆದರೆ ಹಿಂದೂ ವಿರೋಧಿ ಧೋರಣೆ ತಾಳಿದವರ ವಿರುದ್ಧ ನಮ್ಮ ಪ್ರತಿಭಟನೆ ಇದ್ದೇ ಇದೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಮಾತೃ ಸುರಕ್ಷಾ ಪ್ರಮುಖ್‌ ಗಣರಾಜ ಭಟ್‌ ಕೆದಿಲ ಹೇಳಿದರು.

Advertisement

ಅವರು ಸೋಮವಾರ ಅಕ್ರಮ ಕಟ್ಟಡ ತೆರವಿಗೆ ಆಗ್ರ ಹಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಇಲ್ಲಿನ ಪಂಚಾಯತ್‌ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹಿಂದುತ್ವದ ಹೆಸರಿನಲ್ಲಿ ಓಟು ಕೇಳಿ, ಹಿಂದೂ ಯುವಕರ ಬೆವರ ಹನಿಯ ಶ್ರಮದಲ್ಲಿ ಗೆದ್ದು ಅನಂತರ ಮರೆತರೆ ಹೇಗೆ. 2-3 ವರ್ಷಗಳ ಸತತ ಪ್ರಯತ್ನದಲ್ಲೂ ನಿರ್ಣಯಗಳನ್ನು ಮಾಡಿಯೂ ನೋಟಿಸ್‌ ನೀಡಿಯೂ ಅನ್ಯಧರ್ಮೀಯರ ಅಕ್ರಮ ಕಟ್ಟಡವನ್ನು ತೆಗೆಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ. ಗಂಗೊಳ್ಳಿ ಯಾವುದೇ ಸಂಘಟನೆಗೆ ಸೀಮಿತವಾದ ಪ್ರದೇಶ ಅಲ್ಲ. ಇಲ್ಲಿ ಎಲ್ಲರೂ ಬದುಕುಳಿಯಲು ಅರ್ಹರು. ಆದ್ದರಿಂದ ಒಂದೇ ಧರ್ಮದವರ ಮುಲಾಜಿಗೆ ಒಳಗಾಗಬೇಡಿ. ಹಿಂದೂಗಳು ಕಾನೂನಿಗೆ ತಲೆಬಾಗುತ್ತೇವೆ. ನಮ್ಮಿಂದ ಯಾವುದಾದರೂ ಧಾರ್ಮಿಕ ಕ್ಷೇತ್ರ ಹೀಗೆ ಅಕ್ರಮವಾಗಿ ರಚನೆಯಾಗಿದ್ದರೆ ಹೇಳಿ ಎಂದು ಪ್ರಶ್ನಿಸಿದರು.

ಮನೆ ನಿರ್ಮಾಣ, ಶೌಚಾಲಯ ನಿರ್ಮಾಣದಲ್ಲೂ ಲಂಚ ಸ್ವೀಕ ರಿಸುವವರನ್ನು ಪಂಚಾಯತ್‌ನಲ್ಲಿ ಉಳಿಸಿಕೊಳ್ಳಬಾರದು. ಗಂಗೊಳ್ಳಿ ಎನ್ನು ವುದು ದುಷ್ಟರ, ದೇಶದ್ರೋಹಿಗಳ ತಂಗುದಾಣವಾಗಬಾರದು. ಗ್ರಾ.ಪಂ. ಹಿಂದೂ ವಿರೋಧಿ ಚಟುವಟಿಕೆಗೆ ಬೆಂಬಲ ನೀಡಬಾರದು. ಹಿಂದೂಗಳು ಸೋದರರು ಎಂದು ಒಪ್ಪುವ ತಾಯಿ ಭಾರತಿಯ ಮಕ್ಕಳಾದ ಎಲ್ಲರ ಮೇಲೂ ಸಮಾನ
ಗೌರವ ಇದೆ. ರಾಷ್ಟ್ರವಿರೋಧ ಮಾಡುವವರಿಗೆ ಮಾತ್ರ ನಮ್ಮ ವಿರೋಧ ಇರುವುದು. ಅಕ್ರಮ ಕಟ್ಟಡ ತೆಗೆಯುವವರೆಗೆ ವಿಶ್ರಾಂತಿ ಇಲ್ಲ. ನಿತ್ಯ ಪ್ರತಿಭಟಿಸುತ್ತೇವೆ. ಬೃಹತ್‌ ಪ್ರತಿಭಟನೆ ನಡೆಸುತ್ತೇವೆ ಎಂದರು.

ಭೇಟಿ
ಘಟನ ಸ್ಥಳಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್‌, ತಹಶೀಲ್ದಾರ್‌ ಆನಂದಪ್ಪ ನಾಯ್ಕ, ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂತೋಷ್‌ ಕಾಯ್ಕಿಣಿ, ತಾ.ಪಂ. ಮ್ಯಾನೇಜರ್‌ ರಾಮಚಂದ್ರ ಮಯ್ಯ ಮೊದಲಾದವರು ಆಗಮಿಸಿದರು. ಪ್ರತಿಭಟನಕಾರರಿಗೆ ಭರವಸೆ ನೀಡಲಾಯಿತು. 1 ವಾರದ ಒಳಗೆ ಅಕ್ರಮ ಕಟ್ಟಡ ತೆಗೆಸುವ ಕುರಿತು ಸೂಚನೆ ನೀಡಿದರು. ಆಗ ಪ್ರತಿಭಟನಕಾರರ ಜತೆ ಮಾತಿನ ಚಕಮಕಿ ನಡೆಯಿತು. ಗಂಗೊಳ್ಳಿ, ಅಮಾಸೆಬೈಲು, ಶಂಕರನಾರಾಯಣ, ಬೈಂದೂರು, ಕೊಲ್ಲೂರು ಠಾಣೆಗಳ ಎಸ್‌ಐ, ರಿಸರ್ವ್‌ ವ್ಯಾನ್‌ ಸಹಿತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

ಆಗ್ರಹ
2 ವರ್ಷಗಳಿಂದ ಒತ್ತಾಯ ಮಾಡಲಾಗುತ್ತಿದೆ. ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ. ಪಂಚಾಯತ್‌ ನಿರ್ಣಯ ಮಾಡಿದೆ. ತುರ್ತು ಸಭೆಯ ನಿರ್ಣಯ ಇದೆ. 3 ನೋಟಿಸ್‌ಗೆ ಉತ್ತರ ನೀಡಿಲ್ಲ. ಅಕ್ರಮ ಕಟ್ಟಡಕ್ಕೆ ಕ್ರಮ ಕೈಗೊಳ್ಳದ ಕಾರಣ ಆವರಣ ಗೋಡೆಯೂ ಅಕ್ರಮವಾಗಿ ನಿರ್ಮಾಣವಾಗುತ್ತಿದೆ.

ಹೆಸರು ಕೊಟ್ಟವರು ಯಾರು
ಅಕ್ರಮ ಕಟ್ಟಡ ತೆರವಿಗೆ ಮನವಿ ನೀಡಲು ಹೋದಾಗ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಎಂದು ವಿಹಿಂಪ ಕಾರ್ಯಕರ್ತರ ಮೇಲೆ ದೂರು ನೀಡಲಾಗಿದೆ.

ಡಿಸಿ ಬರಲಿ
ನಿಮ್ಮಿಂದ ಸಾಧ್ಯವಾಗದೇ ಇದ್ದರೆ ಹೇಳಿ, ನಾವು ತಲೆ ಕೊಡಲೂ ಸಿದ್ಧ. ಅಕ್ರಮ ಕಟ್ಟಡ ತೆರವು ಸಂದರ್ಭ ಕರಸೇವೆ ಮಾಡಲೂ ಸಿದ್ಧ ಎಂದು ಪ್ರತಿಭಟನಕಾರರು ಹೇಳಿದರು. 24 ಗಂಟೆ ಒಳಗೆ ತೆಗೆಸಲಾಗದಿದ್ದರೆ ಹೇಳಿ, ನಾವು ನಿಮ್ಮ ಬಳಿಯೇ ನಿರ್ಣಯ ಮಾಡಿಸುತ್ತೇವೆ. ತಹಶೀಲ್ದಾರ್‌, ಇಒ ವಿಳಂಬ ಮಾಡುತ್ತಿದ್ದಾರೆ ಆದ್ದರಿಂದ ಡಿಸಿ ಬರಲಿ ಎಂದು ಜನ ಆಗ್ರ ಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next