ಚಾಮರಾಜನಗರ: ಹಿಂದೂ ಧರ್ಮ ಬೇರೆ, ಹಿಂದುತ್ವವೇ ಬೇರೆ. ಹಿಂದುತ್ವವನ್ನು ಟೀಕೆ ಮಾಡಿದರೆ ಹಿಂದೂ ವಿರೋಧಿಗಳಲ್ಲ. ಹಿಂದುತ್ವ ಎನ್ನುವುದು ರಾಜಕೀಯ ಸಿದ್ಧಾಂತ. ಅಡಿಯಾಳಾಗಿ ಬದುಕಬೇಕೆಂಬು ಹಿಂದುತ್ವ. ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವುದು ಹಿಂದೂ ಧರ್ಮ. ಹೀಗಾಗಿ ಹಿಂದೂ ಬೇರೆ ಹಿಂದುತ್ವ ಬೇರೆ, ಇದನ್ನ ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಇದನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ:ಮೈಸೂರು ಮೇಯರ್ ಸ್ಥಾನ ‘ಕೈ’ತಪ್ಪಲು ನಮ್ಮ ಪಕ್ಷದವರ ಹುನ್ನಾರವೇ ಕಾರಣ: ಯತೀಂದ್ರ ಆರೋಪ
ಆರ್ ಎಸ್ಎಸ್ ನವರು ಪ್ರತಿ ಮನೆಗೆ ಭೇಟಿ ನೀಡಿ ಜನರ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿಂದುತ್ವದ ವಿರೋಧಿ ಎಂದು ಹೇಳುತ್ತಿದ್ದಾರೆ. ಹಿಂದುತ್ವ, ಹಿಂದು ಎರಡು ಒಂದೇ ಅಲ್ಲ ಎಂದು ಆರ್ ಎಸ್ಎಸ್ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋಮುವಾದ ಭಾವನೆ ಹೆಚ್ಚಾಗಿದೆ. ನಮ್ಮ ದೇಶ ಜ್ಯಾತ್ಯಾತೀತ ದೇಶವಾಗಿದೆ. ನಮ್ಮ ರಾಷ್ಟ್ರಕ್ಕೆ ಒಳ್ಳೆದಾಗುವುದನ್ನೇ ಸಂವಿದಾನದಲ್ಲಿ ಸೇರಿಸಿದ್ದಾರೆ. ಹೀಗಾಗಿ ನಮ್ಮ ದೇಶ ಜ್ಯಾತ್ಯಾತೀತ ದೇಶವಾಗಿದೆ. ಭಾರತ ದೇಶ ಒಂದು ಧರ್ಮಕ್ಕೆ ಸೇರಿದ ದೇಶವಲ್ಲ ಎಂದರು.
ಇದನ್ನೂ ಓದಿ: ಒಡೆದ ಮನೆಯಾಗಿ ಮೂರು ಗುಂಪಾದ ಕಾಂಗ್ರೆಸ್: ಕಾರಜೋಳ
ಚುನಾವಣೆಗೆ ಇನ್ನು ಎರಡು ವರ್ಷ ಮಾತ್ರ ಇದೆ. ಕಾರ್ಯಕರ್ತರು ಟೊಂಕಕಟ್ಟಿ ನಿಲ್ಲಬೇಕು. ನಮ್ಮ ಪಕ್ಷವನ್ನ ಕಾರ್ಯಕರ್ತರು ಅಧಿಕಾರಕ್ಕೆ ತರಬೇಕು. ಇದರಿಂದ ನಮ್ಮ ದೇಶವನ್ನು ಸುಭಿಕ್ಷೆಯ ಕಡೆಗೆ ತೆಗೆದುಕೊಂಡು ಹೋಗಲು ಸಾಧ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.