Advertisement

8ನೇ ತರಗತಿಯವರೆಗೆ ಹಿಂದಿ ಕಡ್ಡಾಯ ?

12:30 AM Jan 11, 2019 | |

ಹೊಸದಿಲ್ಲಿ: ದೇಶಾದ್ಯಂತ ತ್ರಿಭಾಷಾ ಸೂತ್ರವನ್ನು ಶಿಕ್ಷಣದಲ್ಲಿ ಅಳವಡಿಸಲು ಮುಂದಾಗಿರುವ ಕೇಂದ್ರ ಸರಕಾರ 8ನೇ ತರಗತಿಯವರೆಗೆ ಹಿಂದಿ ಭಾಷೆ ಕಡ್ಡಾಯವಾಗಿರಬೇಕು. ಜತೆಗೆ ದೇಶವ್ಯಾಪಿಯಾಗಿ ವಿಜ್ಞಾನ ಮತ್ತು ಗಣಿತದ ಪಠ್ಯಕ್ರಮ ಏಕರೂಪವಾಗಿರಬೇಕು ಎಂದು ಪ್ರತಿಪಾದಿಸಿದೆ.

Advertisement

ಹೊಸ ಶಿಕ್ಷಣ ನೀತಿ ಸಿದ್ಧಪಡಿಸುವ ಬಗ್ಗೆ ಕೆ. ಕಸ್ತೂರಿ ರಂಗನ್‌ ನೇತೃತ್ವದ ಒಂಬತ್ತು ಮಂದಿ ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ 2018ರ ಡಿ. 31ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನು ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ವರದಿಯ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಜತೆಗೆ ಸಮಯಾವಕಾಶ ಕೇಳಿದ್ದೇವೆ ಎಂದು ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ, ಹಿಂದಿ ಕಡ್ಡಾಯ ಮಾಡುವುದು ಚುನಾವಣ ಗಿಮಿಕ್‌ ಆಗಿದ್ದು, ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next