ಚೆನ್ನೈ: ಇತ್ತೀಚೆಗಷ್ಟೇ, 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ತ್ರಿಭಾಷಾ ಸೂತ್ರದಡಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕೆಂದು ಉಲ್ಲೇಖೀಸಿದ್ದನ್ನು ವಿರೋಧಿಸಿದ್ದ ತಮಿಳುನಾಡಿನ ಪ್ರಮುಖ ವಿಪಕ್ಷ ಡಿಎಂಕೆ, ಶುಕ್ರವಾರ, ದಕ್ಷಿಣ ರೈಲ್ವೆಯ ವಿರುದ್ಧ ಇಂಥದ್ದೇ ವಿಚಾರವೊಂದಕ್ಕೆ ಪ್ರತಿಭಟನೆ ನಡೆಸಿದೆ.
ಇತ್ತೀಚೆಗೆ ಇಲಾಖೆ ಹೊರಡಿಸಿದ್ದ ಆಡಳಿತಾತ್ಮಕ ಸುತ್ತೋಲೆಯಲ್ಲಿ ಇಲಾಖೆಯ ಪ್ರಾಂತೀಯ ನಿಯಂತ್ರಣಾಧಿಕಾರಿಗಳು ಹಾಗೂ ಸ್ಟೇಷನ್ ಮಾಸ್ಟರ್‌ಗಳ ನಡುವಿನ ಆಡಳಿತಾತ್ಮಕ ವಿಚಾರ ವಿನಿಮಯವು ಹಿಂದಿ, ಇಂಗ್ಲೀಷ್‌ನಲ್ಲೇ ನಡೆಯಬೇಕೆಂದು ಸೂಚಿಸಲಾಗಿತ್ತು. ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಡಿಎಂಕೆ, ಇದು ಹಿಂದಿ ಹೇರಿಕೆಯ ಮತ್ತೂಂದು ಬಗೆ ಎಂದಿತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ದಕ್ಷಿಣ ರೈಲ್ವೆ, ತನ್ನ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.
Advertisement