Advertisement
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಈ ಬಗ್ಗೆ ಗೊತ್ತುವಳಿಯನ್ನು ಅಂಗೀಕರಿಸಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಈ ಮೂಲಕ ಅದಾನಿ ಗ್ರೂಪ್‌ನ ನಿಯಂತ್ರಕರ ತನಿಖೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಂಭಾವ್ಯ ಹಿತಾಸಕ್ತಿ ಸಂಘರ್ಷಗಳನ್ನು ಪರಿಹರಿಸಬೇಕು ಎಂದು ಒತ್ತಾ ಯಿಸಿದೆ. ಜತೆಗೆ ಹಗರಣದ ಸಂಪೂರ್ಣ ತನಿಖೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ವಹಿಸಬೇಕು ಎಂದು ಆಗ್ರಹಿಸಿದೆ.
Related Articles
ಮಂಗಳವಾರ ನಡೆದ ಸಭೆಯಲ್ಲಿ ಅದಾನಿ ಹಾಗೂ ಹಿಂಡನ್‌ಬರ್ಗ್ ವಿಷಯದ ಜತೆಗೆ ಜಾತಿಗಣತಿ, ಸಂವಿಧಾನ ಪಾಲನೆ, ಅಗ್ನಿ ಪಥ, ನಿರುದ್ಯೋಗ, ಎಂಎಸ್‌ಪಿಗೆ ಕಾನೂನು ಖಾತ್ರಿ, ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಸಹ ಚರ್ಚಿಸಲಾಯಿತು.
Advertisement
ಕೇಂದ್ರ ಸರಕಾರ ದೇಶಾದ್ಯಂತ ಜಾತಿ ಗಣತಿಯನ್ನು ನಡೆಸಬೇಕು. ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವನ್ನು ಅಣಿಗೊಳಿಸುವುದು, ಪ್ರಚಾರದ ವೇಳೆ ರಾಷ್ಟ್ರದ ಹಿತವನ್ನು ಕುರಿತ ಯಾವೆಲ್ಲ ವಿಚಾರವನ್ನು ಜನರ ಮುಂದಿಡಬೇಕು ಎಂಬುದರ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.
ಹಿಂಡನ್‌ಬರ್ಗ್ ಮುಂದೊಂದು ದಿನ ನ್ಯಾಯಾಂಗವನ್ನೂ ಪ್ರಶ್ನಿಸಬಹುದು: ಸಾಳ್ವೆಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್‌ಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿರುವ ಹಿರಿಯ ಕಾನೂನು ತಜ್ಞ ಹರೀಶ್ ಸಾಳ್ವೆ, ಇದು ಭಾರತವನ್ನು ಅಪಹಾಸ್ಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಇಂತಹವುಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು, ಇಲ್ಲದಿದ್ದರೆ ಈಗ ಸೆಬಿಯನ್ನು ಪ್ರಶ್ನಿಸುತ್ತಿರುವ ಇದು ಮುಂದೊಂದು ದಿನ ಭಾರತದ ನ್ಯಾಯಾಂಗವನ್ನು ಪ್ರಶ್ನಿಸಬಹುದು ಎಂದು ಅವರು ಹೇಳಿದ್ದಾರೆ. ತನಿಖೆ ತೀವ್ರಗೊಳಿಸಲು ಕೋರಿ ಸ್ರುಪೀಂಗೆ ಅರ್ಜಿ
ಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಬಾಕಿ ಇರುವ 2 ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸುವಂತೆ ಸೂಚಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಸೆಬಿ ಮುಖ್ಯಸ್ಥೆಗೆ ಸಂಬಂಧಿಸಿದಂತೆ ಹಿಂಡನ್‌ಬರ್ಗ್ ಬಿಡುಗಡೆ ಮಾಡಿರುವ ಹೊಸ ವರದಿಯು ದೇಶದ ಜನರಲ್ಲಿ ಅನುಮಾನ ಮೂಡಿಸಿದೆ. ಈ ಹಿಂದಿನ ವರದಿ ಬಂದಾಗ ಸೆಬಿ ಆರಂಭಿಸಿದ 2 ತನಿಖೆಗಳು ಇನ್ನೂ ಬಾಕಿ ಇವೆ. ಇವುಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೆಬಿಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವಿಶಾಲ್ ತಿವಾರಿ ಎಂಬ ವ್ಯಕ್ತಿ ಈ ಅರ್ಜಿ ಸಲ್ಲಿಕೆ ಮಾಡಿದ್ದು, ಮೊದಲ ಬಾರಿ ವರದಿ ಬಂದಾಗಲೂ ಇವರು ಅರ್ಜಿ ಸಲ್ಲಿಸಿದ್ದರು. 5 ತಿಂಗಳಲ್ಲಿ ಷೇರು ಹೂಡಿಕೆಯಿಂದ ರಾಹುಲ್‌ಗೆ 46.50 ಲಕ್ಷ ರೂ. ಲಾಭ!
ಕಳೆದ 5 ತಿಂಗಳಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಷೇರು ಮಾರುಕಟ್ಟೆ ಹೂಡಿಕೆ ಮೂಲಕ ಗಳಿ ಸಿದ ಲಾಭ ವೆಷ್ಟು ಗೊತ್ತಾ? ಬರೋ ಬ್ಬರಿ 46.5 ಲಕ್ಷ ರೂ.! ಖಾಸಗಿ ಸುದ್ದಿ ಸಂಸ್ಥೆ ಐಎಎನ್‌ಎಸ್, ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ರಾಹುಲ್ ನೀಡಿದ್ದ ಆಸ್ತಿ ವಿವರದ ಆಧರಿಸಿ ಈ ವರದಿ ಸಿದ್ಧಪಡಿಸಿದೆ. ರಾಹುಲ್ ಹೂಡಿಕೆ ಮೌಲ್ಯ 4.33 ಕೋಟಿ ರೂ.ಗಳಿಂದ 4.80 ಕೋಟಿ ರೂ.ಗಳಿಗೆ ಹೆಚ್ಚಿದೆ ಎಂದು ತಿಳಿಸಿದೆ.