ನವದೆಹಲಿ: ಒಡಿಶಾ ಮೈನಿಂಗ್ ಕಾರ್ಪೋರೇಶನ್ ಜತೆ ದೀರ್ಘಾವಧಿಗಾಗಿ ಬಾಕ್ಸೈಟ್ ಅದಿರು ಸರಬರಾಜು ಮಾಡುವ ನಿಟ್ಟಿನಲ್ಲಿ ತಿಳಿವಳಿಕೆ ಪತ್ರದ (ಎಂಒಯು) ಮೂಲಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ ಗುರುವಾರ (ಅಕ್ಟೋಬರ್ 05) ತಿಳಿಸಿದೆ.
ಇದನ್ನೂ ಓದಿ:Bollywood: 9 ವರ್ಷದ ಸಲ್ಲು – ಅರಿಜಿತ್ ಮುನಿಸಿಗೆ ಕೊನೆ? ಟೈಗರ್ ಮನೆಗೆ ಭೇಟಿ ಕೊಟ್ಟ ಗಾಯಕ
ಅಲ್ಯುಮಿನಿಯಮ್ ಉತ್ಪಾದನೆಗೆ ಬಳಕೆಯಾಗುವ ಬಾಕ್ಸೈಟ್ ಅದಿರನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ಒಡಿಶಾ ಮೈನಿಂಗ್ ಕಾರ್ಪೋರೇಶನ್ ಜತೆ ಎಂಒಯುಗೆ ಜಂಟಿಯಾಗಿ ಸಹಿ ಹಾಕಲಾಗಿದೆ. ಹಿಂಡಾಲ್ಕೋದ ಅಲ್ಯುಮಿನಿಯ ರಿಫೈನರಿಗೆ 2 ಮಿಲಿಯನ್ ಟನ್ ಗಳಷ್ಟು ಬಾಕ್ಸೈಟ್ ಅದಿರನ್ನು ಒಡಿಶಾ ಮೈನಿಂಗ್ ಸರಬರಾಜು ಮಾಡಬೇಕಾಗಿದೆ.
ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ ಒಡಿಶಾದ ರಾಯಗಢ್ ಜಿಲ್ಲೆಯಲ್ಲಿ ಅಲ್ಯುಮಿನಿಯ ರಿಫೈನರಿಯನ್ನು ಹೊಂದಿದೆ. ಇದು ಸುಮಾರು ಎರಡು ಹಂತದ 8,000 ಸಾವಿರ ಕೋಟಿ ರೂಪಾಯಿ ಮೊತ್ತದ ಹೂಡಿಕೆಯಾಗಿದೆ ಎಂದು ಕಂಪನಿ ವಿವರಿಸಿದೆ.
ಮೊದಲ ಹಂತದ ಒಂದು ಮಿಲಿಯನ್ ಟನ್ ಗಳಷ್ಟು ಬಾಕ್ಸೈಟ್ ಅದಿರು 2027ನೇ ಇಸವಿಯೊಳಗೆ ಪೂರೈಕೆಯಾಗಲಿದ್ದು, ಇದು 5,500 ಕೋಟಿ ರೂಪಾಯಿ ಹೂಡಿಕೆಯಾಗಿದೆ ಎಂದು ಹಿಂಡಾಲ್ಕೋ ಇಂಡಸ್ಟ್ರೀಸ್ ಹೇಳಿದೆ.
ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ ಇಟಲಿ ಮೂಲದ ಮೆಟ್ರಾ SpA ಜತೆ ಟೆಕ್ನಾಲಜಿ ಪಾರ್ಟ್ ನರ್ ಶಿಪ್ ಗಾಗಿ ಒಪ್ಪಂದ ಮಾಡಿಕೊಂಡಿದೆ. ಏತನ್ಮಧ್ಯೆ ಹಿಂಡಾಲ್ಕೋ ಇಂಡಸ್ಟ್ರೀಸ್ ನ ಷೇರು ಮೌಲ್ಯ ಶೇ.0.19ಅಂಕಗಳಷ್ಟು ಇಳಿಕೆ ಕಂಡಿದೆ.