Advertisement

“ಹಿಂದ’ಒಗ್ಗಟ್ಟಿನ ಹಿಂದುತ್ವದ ಕಾರ್ಡ್‌

07:40 AM Sep 05, 2017 | |

ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ಅನಂತಕುಮಾರ್‌ ಹೆಗಡೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲಾಗಿದೆ.
ಹಾಗೆ ನೋಡಿದರೆ ಸಚಿವ ಸ್ಥಾನಕ್ಕೆ ಅನಂತಕುಮಾರ್‌ ಹೆಗಡೆ ಅವರಿಗಿಂತ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮತ್ತು ದೆಹಲಿ ಮಟ್ಟದಲ್ಲಿ ಹೆಚ್ಚು ಪ್ರಭಾವಿಯಾಗಿರುವ ಪ್ರಹ್ಲಾದ ಜೋಶಿ ಅವರು ಹೆಚ್ಚು ಸೂಕ್ತ ಎಂದು ಹೇಳಬಹುದಾದರೂ ಹೆಗಡೆಯವರನ್ನೇ ಆಯ್ಕೆ ಮಾಡಿರುವುದರ ಹಿಂದೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳನ್ನೊಳಗೊಂಡ ಹಿಂದೂ ಮತಗಳ ಕ್ರೋಢೀಕರಣ ಮಾಡುವ ಉದ್ದೇಶ ಕಾಣಿಸುತ್ತಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡುತ್ತಾರೆ ಎನ್ನುವಾಗ ರಾಜ್ಯದಿಂದ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಬಗ್ಗೆ ಜಾತಿವಾರು ಲೆಕ್ಕಾಚಾರ ಆರಂಭವಾಗಿತ್ತು. ವೀರಶೈವ- ಲಿಂಗಾಯತ ವಿವಾದ ತಾರಕಕ್ಕೇರಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಮುಂಚೂಣಿಯಲ್ಲಿ ನಿಂತು ಸಮು ದಾಯವನ್ನು ವಿಭಜಿಸಲು ಮುಂದಾಗಿದ್ದರಿಂದ ಅದಕ್ಕೆ ಪ್ರತ್ಯುತ್ತರ ವಾಗಿ ವೀರಶೈವ ಲಿಂಗಾಯತ ಸಮುದಾಯದವರೊಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಸಹಜ ವಾಗಿಯೇ ಮೂಡಿತ್ತು. ಉಳಿದಂತೆ ಬಹುಸಂಖ್ಯಾತ ಒಕ್ಕಲಿಗ ಸಮುದಾಯ ಅಥವಾ ಹಿಂದುಳಿದ ವರ್ಗದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಈ ಸಮುದಾಯವನ್ನು ಓಲೈಕೆ ಮಾಡಲು ಅವಕಾಶ ಕಲ್ಪಿಸಬಹುದು ಎಂಬ ಯೋಚನೆಯೂ ಮೂಡಿತ್ತು. 

ಆದರೆ, ಆಗಿದ್ದೇ ಬೇರೆ. ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಈ ಯಾವುದೇ ಸಮುದಾಯಗಳನ್ನು ಪರಿಗಣಿಸದೆ ಅನಂತಕುಮಾರ್‌ ಹೆಗಡೆ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಜತೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರಿಗೆ ರಾಜ್ಯ ಸಚಿವ ಸ್ಥಾನದಿಂದ ಸಂಪುಟ ದರ್ಜೆಗೆ ಬಡ್ತಿ ನೀಡಿ, ರಕ್ಷಣಾ ಖಾತೆಯಂತ ಮಹತ್ವದ ಜವಾಬ್ದಾರಿ ವಹಿಸಿ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದರು.

ತಮ್ಮ ಪ್ರತಿ ನಿರ್ಧಾರದ ಹಿಂದೆಯೂ ಒಂದಲ್ಲಾ ಒಂದು ರಣತಂತ್ರಗಳನ್ನು ರೂಪಿಸುತ್ತಾ ಬರುತ್ತಿರುವ ನರೇಂದ್ರ ಮೋದಿ- ಅಮಿತ್‌ ಶಾ ಜೋಡಿಯ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಂಪುಟ ಪುನಾರಚನೆಯಲ್ಲೂ ರಣತಂತ್ರವೊಂದಿ ರುವುದು ಗೋಚರವಾಗುತ್ತದೆ. ಮೇಲ್ವರ್ಗದ ಸಣ್ಣ ಪುಟ್ಟ ಜಾತಿ ಗಳನ್ನು ಬಿಜೆಪಿಯತ್ತ ಕ್ರೋಢೀಕರಿಸುವುದರೊಂದಿಗೆ ಲಿಂಗಾ ಧಾರಿತ ರಾಜಕಾರಣದಲ್ಲಿ ಮಹಿಳೆಯನ್ನು ಸೆಳೆಯುವುದು ಈ ನಿರ್ಧಾರದ ಹಿಂದೆ ಇರುವುದು ಸ್ಪಷ್ಟವಾಗುತ್ತದೆ.

ಸಂಪುಟ ಪುನಾರಚನೆ ರಾಜ್ಯ ಬಿಜೆಪಿ ಪಾಲಿಗೆ ಅಚ್ಚರಿ ತಂದಿದೆ. ಅಷ್ಟೇ ಅಲ್ಲ,  ಇದೇ ವೇಳೆ ರಾಜ್ಯ ಬಿಜೆಪಿ ಮುಖಂಡರ ನಿರೀಕ್ಷೆ ಗಳು ಈಡೇರದ ಕಾರಣ ಒಳಗೊಳಗೇ ಅಸಮಾಧಾನ ಹೊಗೆ ಯಾಡುತ್ತಿದೆಯಾದರೂ ಯಾರೂ ಬಹಿರಂಗವಾಗಿ ಅದನ್ನು ಹೇಳಿಕೊಳ್ಳುತ್ತಿಲ್ಲ. ಏಕೆಂದರೆ, ಶಾ-ಮೋದಿ ಜೋಡಿ ಯಾರನ್ನೂ ಲೆಕ್ಕಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಅಷ್ಟೇ ಅಲ್ಲ, ಅವರ ಪ್ರತಿ ತೀರ್ಮಾನದ ಹಿಂದೆ ಹಲವು ಉದ್ದೇಶವಿರುವುದೂ ಜಗಜ್ಜಾಹೀರು. ಹೀಗಿರುವಾಗ ಅಸಮಾಧಾನ ತೋರಿಸಿಕೊಂಡರೆ ಅದು ಮುಂದೆ ತಮ್ಮ ಬೆಳವಣಿಗೆಗೆ ಧಕ್ಕೆಯುಂಟುಮಾಡ ಬಹುದು ಎಂಬ ಕಾರಣಕ್ಕೆ ಎಲ್ಲರೂ ಸುಮ್ಮನಿದ್ದಾರೆ. ಇದಕ್ಕೆ ಮತ್ತೂಂದು ಕಾರಣ ಈ ಜೋಡಿಯ ಕಾರ್ಯತಂತ್ರದ ಹಿಂದೆ ಇರುವ ಉದ್ದೇಶಗಳು.

Advertisement

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಜಾತಿ ರಾಜಕಾರಣಕ್ಕೆ ಅದರಿಂದಲೇ ಉತ್ತರ ಕೊಡುವ ಹೊಸ ಸಂಪ್ರ ದಾಯವೊಂದನ್ನು ಬಿಜೆಪಿ ಉತ್ತರಪ್ರದೇಶದ ಚುನಾವಣೆಯಲ್ಲಿ ಹುಟ್ಟುಹಾಕಿ ಅದರಲ್ಲಿ ಯಶಸ್ವಿಯೂ ಆಗಿತ್ತು. ಅಲ್ಲಿನ ಹಿಂದುಳಿದ ವರ್ಗದ ಪ್ರಮುಖ ಎರಡು ಜಾತಿಗಳು ಬಿಜೆಪಿ ವಿರುದ್ಧ ನಿಂತಾಗ ಅದೇ ವರ್ಗದ ಇತರೆ ಹಿಂದುಳಿದ ಜಾತಿಗಳನ್ನು ತನ್ನತ್ತ ಸೆಳೆದುಕೊಂಡಿತ್ತು. ಇದರ ಪರಿಣಾಮ ಬಿಜೆಪಿ ವಿರುದ್ಧ ನಿಂತಿದ್ದ ಹಿಂದುಳಿದ  ವರ್ಗವಿಭಜನೆಯಾಗಿ ಒಂದು ಭಾಗ ಬಿಜೆಪಿಯತ್ತ ವಾಲಿತ್ತು. ಇದರ ಪರಿಣಾಮ ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಗೆದ್ದು ಅಧಿಕಾರ ಹಿಡಿಯಿತು.

ಈ ನೀತಿ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ಹೇಳಲು ಸಾಧ್ಯವಾಗದಿದ್ದರೂ ಕರ್ನಾಟಕದ ಮಟ್ಟಿಗೆ ಅಂತಹ ಪ್ರಯತ್ನವೊಂದಕ್ಕೆ ಪಕ್ಷ ಕೈಹಾಕಿದೆ ಎಂಬುದಕ್ಕೆ ಉದಾಹರಣೆ ಕೇಂದ್ರ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ. ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇಂತಹ ಸಂದರ್ಭದಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವೀರಶೈವ-ಲಿಂಗಾಯತ ಮತಗಳು ವಿಭಜನೆಯಾಗುತ್ತದೆ ಎಂದಾ ದರೆ ಅದನ್ನು ತಡೆಯುವುದು ಕಷ್ಟ. ಅದರ ಬದಲು ಮೇಲ್ವರ್ಗದ ಇತರೆ ಮತಗಳನ್ನು ಕ್ರೋಢೀಕರಿಸುವುದೇ ಸೂಕ್ತ ಎಂಬ ಕಾರಣ ದಿಂದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅನಂತಕುಮಾರ್‌ ಹೆಗಡೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಇಲ್ಲಿ ವೀರಶೈವ-ಲಿಂಗಾಯತ ವಿವಾದದಲ್ಲಿ ಪಕ್ಷದಿಂದ ದೂರ ಸರಿಯುತ್ತಿರುವ ಸಮುದಾಯದವರಿಗೆ ಒಂದು ಎಚ್ಚರಿಕೆ ಸಂದೇಶವೂ ಕಾಣಿಸುತ್ತಿದೆ. ಮೇಲ್ವರ್ಗದ ಇತರೆ ಸಮುದಾಯ ಗಳ ನೆರವಿನೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆ ಸಮುದಾಯಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಇದರ ಪರಿ ಣಾಮ ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರಾಧಾನ್ಯತೆ ಕಡಿಮೆಯಾಗಬಹುದು. ಅದರ ಬದಲು ಈ ಸಮುದಾಯದ ವರೂ ಪಕ್ಷವನ್ನು ಬೆಂಬಲಿಸಿದರೆ ಮುಂದೆ ಅನುಕೂಲ ಸಿಗಬಹುದು ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಲಾಗಿದೆ.

ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುವ ದೃಷ್ಟಿಯಿಂದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್‌ ಅಡ್ಡಿಪ ಡಿಸಿದ್ದನ್ನೇ ರಾಜಕೀಯ ಲಾಭವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಓಲೈಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ದಲಿತರ ಕೇರಿಗಳಿಗೆ ಭೇಟಿ, ದಲಿತರ ಮನೆಗಳಲ್ಲಿ ಊಟ ಮಾಡಿದ್ದಲ್ಲದೆ, ಆ ಸಮುದಾಯದವರನ್ನು ತಮ್ಮ ಮನೆಗೆ ಕರೆಸಿ ಊಟ ಹಾಕಿದ್ದಾರೆ. ಇದರ ಪರಿಣಾಮ ದಲಿತ ಸಮುದಾಯದ ಗುರುಗಳಾದ ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಬಿಜೆಪಿ ಪರ ವಾಲಿದ್ದಾರೆ. ಹೀಗಾಗಿ ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ಅನಂತಕುಮಾರ್‌ ಹೆಗಡೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲಾಗಿದೆ.

ಹಾಗೆ ನೋಡಿದರೆ ಸಚಿವ ಸ್ಥಾನಕ್ಕೆ ಅನಂತಕುಮಾರ್‌ ಹೆಗಡೆ ಅವರಿಗಿಂತ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮತ್ತು ದೆಹಲಿ ಮಟ್ಟದಲ್ಲಿ ಹೆಚ್ಚು ಪ್ರಭಾವಿಯಾಗಿರುವ ಪ್ರಹ್ಲಾದ ಜೋಶಿ ಅವರು ಹೆಚ್ಚು ಸೂಕ್ತ ಎಂದು ಹೇಳಬಹುದಾದರೂ ಹೆಗಡೆಯವರನ್ನೇ ಆಯ್ಕೆ ಮಾಡಿರುವುದರ ಹಿಂದೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳನ್ನೊಳಗೊಂಡ ಹಿಂದೂ ಮತಗಳ ಕ್ರೋಢೀಕರಣ ಮಾಡುವ ಉದ್ದೇಶ ಕಾಣಿಸುತ್ತಿದೆ. ಅನಂತಕುಮಾರ್‌ ಹೆಗಡೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾದರೂ ಕಟ್ಟರ್‌ ಹಿಂದೂವಾದಿ. ಅದರಲ್ಲೂ ಕರಾವಳಿ ಭಾಗದಲ್ಲಿ ಮೀನುಗಾರರ ಸಮುದಾಯಕ್ಕೆ ಅತ್ಯಂತ ಆಪ್ತರಾಗಿ ರುವ ಅವರು ಇತರೆ ಜಾತಿಗಳನ್ನೂ ತಮ್ಮೊಂದಿಗೆ ಕರೆದೊಯ್ಯು ವಷ್ಟರ ಮಟ್ಟಿಗೆ ಹಿಂದುತ್ವ ಪ್ರತಿಪಾದನೆ ಮಾಡುತ್ತಾರೆ. ಜತೆಗೆ  ಸಂಘ ಪರಿವಾರದ ಬಹುತೇಕ ಪ್ರಮುಖರು ಇವರ ಜತೆಗಿರು ವುದು ಈ ಕೆಲಸಕ್ಕೆ ಹೆಚ್ಚಿನ ಬಲ ತಂದುಕೊಡಲಿದೆ ಎಂಬ ನಿರೀಕ್ಷೆಯೊಂದಿಗೆ ಹೆಗಡೆ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಕೇರಳವನ್ನೊಳಗೊಂಡ ಕರಾವಳಿ ಭಾಗದಲ್ಲಿ ಬಿಜೆಪಿಯ ಬಲವರ್ಧನೆಗೂ ಅನುಕೂಲ ವಾಗುತ್ತದೆ. ಇದರಿಂದ ತಕ್ಷಣಕ್ಕೆ ಫ‌ಲಿತಾಂಶ ಸಿಗದೇ ಇದ್ದರೂ 2019ರ ಲೋಕಸಭೆ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿನ ಲಾಭವಾಗಬಹುದು ಎಂಬ ಉದ್ದೇಶವೂ ಕಾಣಿಸುತ್ತಿದೆ.

 ಕರಾವಳಿ ಭಾಗದಲ್ಲಿ ಪ್ರತಿಪಾದನೆಯಾಗುತ್ತಿರುವ ಹಿಂದುತ್ವವೇ ಬಿಜೆಪಿಯ ವೋಟ್‌ಬ್ಯಾಂಕ್‌. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿ ಕೆಲವು ಸಮಸ್ಯೆಗಳು ಉದ್ಭವವಾಗಿತ್ತು. ಅಧಿಕಾರ ನಡೆಸುವವರು ಅಲ್ಪಸಂಖ್ಯಾತರನ್ನು ಓಲೈಸಲು ಮುಂದಾದ ಕಾರಣಕ್ಕೆ ಹಿಂದೂಗಳು ಬೇಸರಗೊಂಡಿದ್ದರು. ಈ ಕಾರಣಕ್ಕಾಗಿಯೇ ಕರಾವಳಿಯ ಮೂರು ಜಿಲ್ಲೆಗಳ 19 ಕ್ಷೇತ್ರಗಳ ಪೈಕಿ 2008ರಲ್ಲಿ 10 ಸೀಟುಗಳನ್ನು ಗೆದ್ದಿದ್ದ ಬಿಜೆಪಿ 2013ರ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳಿಗೆ ಇಳಿಯಿತು. ಇದೀಗ ಕಟ್ಟರ್‌ ಹಿಂದುತ್ವವಾದಿಯಾಗಿರುವ ಅನಂತಕುಮಾರ್‌ ಹೆಗಡೆ ಕೇಂದ್ರದಲ್ಲಿ ಸಚಿವರಾಗಿರುವುದರಿಂದ ಮತ್ತೆ ಕರಾವಳಿಯಲ್ಲಿ ಹಿಂದೂ ಮತಬ್ಯಾಂಕ್‌ ಬಿಜೆಪಿಯತ್ತ ಬರುವ ಸಾಧ್ಯತೆ ಇದ್ದು, ಇದು ಮುಂಬರುವ ವಿಧಾನಸಭೆ ಚುನಾವಣೆಗೂ ಅನುಕೂಲ ವಾಗಬಹುದು ಎಂಬ ನಿರೀಕ್ಷೆ ಬಿಜೆಪಿ ವರಿಷ್ಠರದ್ದು.

ಇನ್ನು ನಿರ್ಮಲಾ ಸೀತಾರಾಮನ್‌ ವಿಚಾರದಲ್ಲಿ ಕೇಂದ್ರ ಸರ್ಕಾರ ಲಿಂಗಾಧಾರಿತ ರಾಜಕಾರಣವನ್ನೂ ಪರಿಗಣನೆಗೆ ತೆಗೆದು ಕೊಂಡಿದೆ. ಮೂಲತಃ ತಮಿಳುನಾಡಿನವರಾದರೂ ಈ ಬಾರಿ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದು ಕರ್ನಾಟಕದಿಂದ. ಹೀಗಾಗಿ ಅವರನ್ನು ಕರ್ನಾಟಕ ಕೋಟಾದಿಂದಲೇ ಪರಿಗಣಿಸಬೇಕಾಗುತ್ತದೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ರಕ್ಷಣಾ ಖಾತೆಯನ್ನೂ ನಿರ್ವಹಿಸಿದ್ದರಾದರೂ ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಖಾತೆ ಯನ್ನು ನಿರ್ವಹಿಸಿದ ಹೆಗ್ಗಳಿಕೆಯನ್ನು ನಿರ್ಮಲಾ ಸೀತಾರಾಮನ್‌ ಅವರಿಗೆ ಕಲ್ಪಿಸಿದ ಕೇಂದ್ರ ಸರ್ಕಾರ ದೇಶ ರಕ್ಷಣೆಯ ಜವಾಬ್ದಾರಿ ವಹಿಸಿದೆ. ಇನ್ನೊಂದೆಡೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸುಷ್ಮಾ ಸ್ವರಾಜ್‌ ಇದ್ದಾರೆ. ಈ ಮೂಲಕ ಮಹಿಳೆಯರಿಗೆ ಪ್ರಾಧಾ ನ್ಯತೆ ನೀಡಲಾಗುತ್ತಿದೆ ಎಂಬ ಸಂದೇಶ ಸಾರುವ ಮೂಲಕ ಮಹಿಳೆಯರು ಬಿಜೆಪಿಯನ್ನು ಹೆಚ್ಚು ಗಮನಿಸುವಂತೆ ಮಾಡಿದೆ. ಯಾವತ್ತೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ, ಸಾಮಾಜಿಕ ಜಾಲತಾಣಗಳ ಮೂಲಕ ಅವರನ್ನು ವಿರೋಧಿ 

ಸುವ ಸಾಕಷ್ಟು ಮಹಿಳೆಯರು ನಿರ್ಮಲಾ ಸೀತಾರಾಮನ್‌ ವಿಚಾರದಲ್ಲಿ ಪ್ರಧಾನಿ ಕೈಗೊಂಡ ನಿರ್ಧಾರವನ್ನು ಶ್ಲಾ ಸುತ್ತಿದ್ದಾರೆ. ಅದರಲ್ಲೂ ಮಹಿಳಾವಾದಿಗಳಂತೂ ಇದು ಸಮಸ್ತ ಮಹಿಳೆ ಯರಿಗೆ ಸಂದ ಗೌರವ ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಸಹಜವಾಗಿಯೇ ಇದು ಮಹಿಳೆಯರು ಬಿಜೆಪಿಯತ್ತ ವಾಲುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.

ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next