Advertisement

ಪರೀಕ್ಷೆಯಲ್ಲಿ ಹಿಮ್ಸ್‌ ಪ್ರಥಮ

02:44 PM May 17, 2021 | Team Udayavani |

ಹಾಸನ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌)ಯ ಪ್ರಯೋಗಾಲಯವು ಸಾಮರ್ಥ್ಯ ಮೀರಿಪರೀಕ್ಷೆಗಳನ್ನು ನಡೆಸಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.ಪ್ರತಿನಿತ್ಯ 2000 ಮಾದರಿಗಳ ಪರೀಕ್ಷೆ ನೀಡಿ ವರದಿನೀಡುವ ಸಾಮರ್ಥ್ಯ ಹೊಂದಿರುವ ಪ್ರಯೋಗಾಲವು ಕೊರೊನಾ ಸಮಸ್ಯೆ ಉಲ್ಬಣವಾದ ಸಂದರ್ಭದಲ್ಲೆಲ್ಲಾಗರಿಷ್ಠ ಪರೀಕ್ಷೆಗಳನ್ನು ನಡೆಸಿ ಮೊದಲ ಸ್ಥಾನ ಪಡೆದಿದೆ.

Advertisement

2016 ರಲ್ಲಿ ಕೇಂದ್ರ ಸರ್ಕಾರದ ಸಹಾಯ ಧನದಿಂದವಿಆರ್‌ಡಿಎಲ್‌ (ಬೈರಲ್‌ ರೀಸರ್ಚ್‌ ಡಯೋಗ್ನಾಸ್ಟಿಕ್‌ಲ್ಯಾಬೋರೇಟರಿ) ಪ್ರಾರಂಭವಾಗಿದೆ. ಕೊರೊನಾಮೊದಲ ಅಲೆ ಪ್ರಾರಂಭಕ್ಕೆ ಪೂರ್ವದಲ್ಲಿ ರಾಜ್ಯದಲ್ಲಿದ್ದಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮೂರು ಕೇಂದ್ರಗಳಪೈಕಿ ಹಾಗೂ ಇಡೀ ದೇಶದಲ್ಲಿದ್ದ ಐವತಕ್ಕೂ ಕಡಿಮೆಸಂಖ್ಯೆಯಲ್ಲಿದ್ದ ಲ್ಯಾಬ್‌ ಗಳ ಪೈಕಿ ಹಿಮ್ಸ್‌ ಲ್ಯಾಬ್‌ ಕೂಡಒಂದಾಗಿತ್ತು.ಕೇವಲ ಹಾಸನ ಮಾತ್ರವಲ್ಲದೆ ತುಮಕೂರು,ಉಡುಪಿ,ದಕ್ಷಿಣ ಕನ °ಡವೂ ಸೇರಿದಂತೆ ಸುತ್ತಲಿನ 7 -8 ಜಿಲೆ Éಗಳ ಲಕ್ಷಾಂತರ ಕೊರೊನಾ ಶಂಕಿತರ ಪರೀಕ್ಷೆನಡೆಸುವ ಮೂಲಕ ಕೊರೊನಾ ನಿರ್ವಹಣೆಯಲ್ಲಿಮಹತ್ವದ ಪಾತ್ರ ವಹಿಸುತ್ತಾ ಬಂದಿದೆ.

ಈಗರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳ 50 ಪ್ರಯೋಗಾಲಗಳುಕಾರ್ಯ ನಿರ್ವಹಿಸುತ್ತಿವೆ.ಪ್ರಾರಂಭದಲ್ಲಿ ದಿನಕ್ಕೆ ಕೇವಲ 300 ಪರೀಕ್ಷೆನಡೆಸಲಷ್ಟೇ ಶಕ್ತವಾಗಿದ್ದ ಹಿಮ್ಸ್‌ ಲ್ಯಾಬ್‌ ಈಗದಿನವೊಂದಕ್ಕೆ ಗರಿಷ್ಠ 2000 ದಿಂದ 2400 ಪರೀಕ್ಷೆಗಳನ್ನುಮಾಡಲು ನಿಗದಿಯಾಗಿದ್ದರೂ ಸಾಮರ್ಥ್ಯR ಮೀರಿಪ್ರತಿದಿನ 3500 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುವಮೂಲಕ ಇಡೀ ರಾಜ್ಯದಲ್ಲಿಯೇ ಮಂಚೂಣಿಯಲ್ಲಿರುವ ಪರೀಕ್ಷಾ ಕೇಂದ್ರವೆನಿಸಿಕೊಂಡಿದೆ.

ಇತ್ತೀಚೆಗೆಕೆಲವೊಮ್ಮೆ ವರದಿಗಳು ವಿಳಂಬವಾಗುತ್ತಿರುವ ಬಗ್ಗೆಆಕ್ಷೇಪಗಳು ಕೇಳಿ ಬಂದರೂ ಈಗ ಎಲ್ಲ ಮಾದರಿಯಲೋಪಗಳನ್ನು ಸರಿಪಡಿಸಿಕೊಂಡು ಜನರ ಕಷ್ಟಗಳಿಗೆಸ್ಪಂದಿಸುತ್ತಿದೆ ಎಂದು ಹಿಮ್ಸ್‌ ನಿರ್ದೇಶಕಬಿ.ಸಿ.ರವಿಕುಮಾರ್‌, ವೈದ್ಯಕೀಯ ಅಧೀಕ್ಷಕಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next