Advertisement

Monthly Stipend… ಬಾಲ್ಯ ವಿವಾಹ ತಡೆಗೆ ಅಸ್ಸಾಂನ ಸರ್ಕಾರದಿಂದ ನೂತನ ಕ್ರಮ

07:43 PM Jun 12, 2024 | Team Udayavani |

ಗುವಹಾಟಿ: ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಅಸ್ಸಾಂ ಸರ್ಕಾರ ನೂತನ ಕ್ರಮಕ್ಕೆ ಮುಂದಾಗಿದ್ದು ಇದರಿಂದ ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೂ ನೆರವಾಗಲು ಸರಕಾರ ಮುಂದಾಗಿದೆ.

Advertisement

ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಸರಕಾರ ಅಸ್ಸಾಂ ನಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯದ ವಿದ್ಯಾರ್ಥಿನಿಯರಿಗೆ ಮಾಸಿಕ ವೇತನ ನೀಡುವುದಾಗಿ ಘೋಷಿಸಿದೆ.

ಈ ಕುರಿತು ಮಾಹಿತಿ ನೀಡಿದ ಸಿಎಂ ಶರ್ಮಾ, ಮುಂದಿನ 5 ವರ್ಷಗಳಲ್ಲಿ “ನಿಜುತ್‌ ಮೊಯಿನಾ’ ಯೋಜನೆಗಾಗಿ 1,500 ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆ ಅನ್ವಯ 5 ವರ್ಷಗಳಲ್ಲಿ 10 ಲಕ್ಷ ವಿದ್ಯಾರ್ಥಿನಿಯರಿಗೆ ಮಾಸಿಕ ವೇತನ ನೀಡಲಿದ್ದೇವೆ. 11ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲಾಗುವುದು. 11, 12ನೇ ತರಗತಿಯವರಿಗೆ ತಿಂಗಳಿಗೆ 1,000ರೂ., ಪದವಿಗೆ 1,250 ರೂ. ಹಾಗೂ ಸ್ನಾತಕೋತ್ತರದವರಿಗೆ 2,500 ರೂ. ದೊರೆಯಲಿದೆ. ಈಗಾಗಲೇ ವಿವಾಹವಾಗಿರುವ, ಶಾಸಕ, ಸಂಸದರ ಮಕ್ಕಳು, ಖಾಸಗಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಕ್ಷಾ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಬೇಲೂರು ಮೂಲದ ಆರೋಪಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next