ನವದೆಹಲಿ: “ಮುಸ್ಲಿಮರು ತಮ್ಮ ಧರ್ಮದ ಮದರಸಾಗಳಿಂದ ಮುಲ್ಲಾಗಳು ಸೃಷ್ಟಿಯಾಗಿ ಹೊರಬರಲೆಂದು ಆಶಿಸುತ್ತಾರೆ. ಆದರೆ, ನಾನು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆದು ಅಲ್ಲಿ ಮುಸ್ಲಿಂ ಯುವಕರಿಗೆ ವೈದ್ಯಶಿಕ್ಷಣ ನೀಡಿ ಮುಲ್ಲಾ ಆಗಬೇಕಿದ್ದವರನ್ನು ವೈದ್ಯರನ್ನಾಗಿಸುತ್ತೇನೆ.
ಇಂಥ ಸುವರ್ಣವಕಾಶವನ್ನು ಬಳಸಿಕೊಳ್ಳುವ ಆಯ್ಕೆ ಅಸ್ಸಾಂನ ಮುಸ್ಲಿಮರ ಮುಂದಿದೆ. ಆಯ್ಕೆ ಅವರಿಗೆ ಬಿಟ್ಟಿದ್ದು” – ಇದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ದೂರದೃಷ್ಟಿತ್ವದ ಮಾತು.
ನವದೆಹಲಿಯಲ್ಲಿ ಗುರುವಾರ ನಡೆದ ಖಾಸಗಿ ಸುದ್ದಿವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮುಸ್ಲಿಮರು ಆಧುನಿಕ ಕಾಲಕ್ಕೆ ತಕ್ಕಂತೆ ಉನ್ನತ ದರ್ಜೆಯಲ್ಲಿ ಬದುಕುವ ಅವಕಾಶಗಳನ್ನು ಕಂಡುಕೊಳ್ಳಬೇಕು.
ಇದನ್ನೂ ಓದಿ:ವಕ್ಫ್ ಆಸ್ತಿ ಸಮೀಕ್ಷೆಗೆ ಆದೇಶ: ಶಶಿಕಲಾ ಜೊಲ್ಲೆ
ಎಲ್ಲರೂ ಮುಸ್ಲಿಮರ ಬಾಹುಳ್ಯವಿರುವ ಪ್ರದೇಶಗಳಿಗೆ ಎಲ್ಲರೂ ಹೋಗಬೇಕು. ಅಲ್ಲಿರುವ ಮದರಸಾಗಳನ್ನು ಮುಚ್ಚುವಂತೆ ಆಗ್ರಹಿಸಬೇಕು” ಎಂದು ಆಗ್ರಹಿಸಿದ್ದಾರೆ.