Advertisement

ಹಿಮಾಚಲ ಪ್ರದೇಶ : ಕಂದರಕ್ಕೆ ಕಾರು ಉರುಳಿ ಬಿದ್ದು 8 ಸಾವು

05:56 PM Mar 03, 2018 | Team Udayavani |

ಅಮೃತ್‌ಸರ : ಚಂಡೀಗಢ – ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸ್ವರಘಾಟ್‌ನಿಂದ ಎಂಟು ಕಿ.ಮೀ. ದೂರದಲ್ಲಿ ಆಳದ ಕಂದರಕ್ಕೆ ಕಾರು ಬಿದ್ದು ಎಂಟು ಯಾತ್ರಿಕರು ಮೃತಪಟ್ಟು  ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಶುಕ್ರವಾರ ನಡೆದಿದೆ.

Advertisement

ಕಾಂಗ್ರೆಸ್‌ ಶಾಸಕ ರಾಜ್‌ ಕುಮಾರ್‌ ವರ್ಕಾ ಅವರು ಪಂಜಾಬ್‌ ಸರಕಾರದ ವತಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಕೊಡಿಸಲಾಗುವುದು ಎಂದು ಹೇಳಿದ್ದಾರೆ. 

ಅಮೃತ್‌ಸರ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ವರ್ಕಾ ಅವರು ಮೃತರ ಕುಟುಂಬ ಸದಸ್ಯರನ್ನು ನಗರದಲ್ಲಿ ಭೇಟಿಯಾದರು. 

ಕಾರಿನಲ್ಲಿದ್ದವರು ಅಮೃತಸರದಿಂದ ಮಣಿಕರಣಕ್ಕೆ ಮರಳುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿತು. ಮೃತರನ್ನು ಗುರೀಂದರ್‌ ಸಿಂಗ್‌, ಜಸ್‌ಬೀರ್‌ ಸಿಂಗ್‌ (ಸಹೋದರರು), ಮನ್‌ದೀಪ ಸಿಂಗ್‌, ಸೋನು (ಸಹೋದರರು), ದವೀಂದರ್‌ ಸಿಂಗ್‌, ಕವಲ್‌ಜಿತ್‌ ಸಿಂಗ್‌, ಲವಪ್ರೀತ್‌ ಸಿಂಗ್‌ ಮತ್ತು ಬಲ್ಜಿತ್‌ ಸಿಂಗ್‌ – ಇವರೆಲ್ಲರೂ ರಾಜಸಂಸಿ ಗ್ರಾಮದವರೆಂದು ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next