Advertisement

ಹಿಮಾಚಲ ಪ್ರದೇಶ ಚುನಾವಣೆ: ಮತದಾನ ಪ್ರಗತಿಯಲ್ಲಿ

11:27 AM Nov 09, 2017 | Team Udayavani |

ಶಿಮ್ಲಾ : 2017ರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.ಎಲ್ಲ 68 ಸ್ಥಾನಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸೆಣಸಾಡುತ್ತಿವೆ. 

Advertisement

ಸ್ಪರ್ಧೆಯಲ್ಲಿರುವ ಪ್ರಮುಖರೆಂದರೆ ವೀರಭದ್ರ ಸಿಂಗ್‌, ಅವರ ಸಂಪುಟ 10 ಮಂದಿ ಸಚಿವರು, 8 ಮುಖ್ಯ ಸಂಸದೀಯ ಕಾರ್ಯದರ್ಶಿಗಳು, ಉಪ ಸ್ಪೀಕರ್‌ ಜಗತ್‌ಸಿಂಗ್‌ ನೇಗಿ, ಮಾಜಿ ಮುಖ್ಯಮಂತ್ರಿ ಪ್ರೇಮ್‌ ಕುಮಾರ್‌ ಧುಮಲ್‌ ಮತ್ತು ಸರಿಸುಮಾರು ಒಂದು ಡಜನ್‌ ಮಾಜಿ ಸಚಿವರು.

62 ಶಾಸಕರ ಸಹಿತ ಒಟ್ಟಾರೆಯಾಗಿ 337 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ. ಇವರ ಹಣೆಬರಹ ಡಿಸೆಂಬರ್‌ 18ರಂದು ನಡೆಯುವ ಮತ ಎಣಿಕೆಯ ದಿನ ಬಹಿರಂಗವಾಗಲಿದೆ.

ಬೆಳಗ್ಗೆ 10 ಗಂಟೆಯ ಹೊತ್ತಿಗೆ ಶೇ.13.72 ಮತದಾನ ನಡೆದಿರುವ ವರದಿಗಳು ಬಂದಿವೆ. ಡೂನ್‌ ಕ್ಷೇತ್ರದಲ್ಲಿ ಒಟ್ಟು 9 ವೋಟಿಂಗ್‌ ಮಶೀನ್‌ಗಳು ಕೆಟ್ಟು ಹೋಗಿರುವುದಾಗಿ ವರದಿಯಾಗಿದೆ. ಹಲವು ಮತದಾರರು ವೋಟಿಂಗ್‌ ಮಶೀನ್‌ಗಳಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಮತ ಚಲಾಯಿಸದೇ ಮನೆಗೆ ಮರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next