Advertisement
ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸಲು ಮುಂದಾಗಿರುವ ಮುಖ್ಯ ಮಂತ್ರಿ ಸುಖ್ವಿಂದರ್ ಸಿಂಗ್ ಸುಖು, “ಸಚಿವ ಸಂಪುಟದ ಸಹೋದ್ಯೋಗಿಗಳು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಸಂಪುಟ ದರ್ಜೆಯ ಸದಸ್ಯರು 2 ತಿಂಗಳ ಕಾಲ ಸಂಬಳ ಹಾಗೂ ಭತ್ತೆಗಳನ್ನು ಪಡೆಯದಿರಲು ನಿರ್ಧರಿಸಿದ್ದಾರೆ’ ಎಂದು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಈ ಸ್ಥಿತಿಗೆ ಹಿಂದೆ ಆಡಳಿತ ನಡೆಸಿದ ಬಿಜೆಪಿ ಕಾರಣ. 15ನೇ ಹಣಕಾಸು ಆಯೋಗದಪ್ರಕಾರ 10 ಸಾವಿರ ಕೋ.ರೂ. ಅನುದಾನ ಕೊರತೆ ಎದುರಾಗಿದೆ. ಅಂದಿನಿಂದ ಇಂದಿನವರೆಗೆ ಈ ಅನುದಾನ ಕುಸಿಯುತ್ತಲೇ ಇದೆ. ಬಿಜೆಪಿ ಜಾರಿಗೊಳಿಸಿದ ಉಚಿತ ನೀರು ಮತ್ತು ವಿದ್ಯುತ್ ಯೋಜನೆಗಳಿಂದಾಗಿ ಬೊಕ್ಕಸಕ್ಕೆ 1,080 ಕೋಟಿ ರೂ. ಹೊರೆಯಾಗುತ್ತಿದೆ ಎಂದು ಸಿಎಂ ಸುಖು ಆರೋಪಿಸಿದ್ದಾರೆ.
Related Articles
Advertisement
ಬಿಜೆಪಿ ಆರೋಪ ಏನು?ಸಿಎಂ ಸುಖು ವಿರುದ್ಧ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ, ಬಿಜೆಪಿಯ ಜೈರಾಮ್ ಠಾಕೂರ್, ಸಂವಿಧಾನಕ್ಕೆ ವಿರುದ್ಧವಾಗಿ ಮುಖ್ಯ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಬಹಳಷ್ಟು ಜನರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಇದರಿಂದ ವೆಚ್ಚ ಹೆಚ್ಚಾಗಿದೆ. ತಮ್ಮ ತಪ್ಪು ಬಿಟ್ಟು ಶಾಸಕರಿಗೆ ಸಂಬಳ ಕೈಬಿಡುವಂತೆ ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ. ಗ್ಯಾರಂಟಿಗಳಿಂದ ಕರ್ನಾಟಕದಲ್ಲೂ
ಆರ್ಥಿಕ ಬಿಕ್ಕಟ್ಟು ಗ್ಯಾರಂಟಿ: ಬಿಜೆಪಿ
ಹಿಮಾಚಲ ಆರ್ಥಿಕ ಪರಿಸ್ಥಿತಿಯ ಬಗ್ಗೆ ಟೀಕಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಸರಕಾರದ ಬಳಿ ಸಂಬಳ ನೀಡಲು ಹಣವಿಲ್ಲ. ಹಿಮಾಚಲದ ಇಂದಿನ ಪರಿಸ್ಥಿತಿಗೆ ರಾಹುಲ್ ಗಾಂಧಿಯ ಉಚಿತ ಕೊಡುಗೆಗಳ ಗ್ಯಾರಂಟಿ ಯೋಜನೆಗಳೇ ಕಾರಣ. ಕರ್ನಾಟಕ ದಲ್ಲೂ ಆರ್ಥಿಕ ಬಿಕ್ಕಟ್ಟು ನಿರ್ಮಾಣ ವಾಗುತ್ತಿದೆ ಎಂದು ಹೇಳಿದ್ದಾರೆ.