ಧರ್ಮಶಾಲಾ: ಹೊಟೇಲ್ ಮ್ಯಾನೇಜರ್ನನ್ನು ಹತ್ಯೆಗೈದ ಆರೋಪ ಮೇಲೆ ಇಬ್ಬರು ಪೊಲೀಸರನ್ನು ಬಂಧಿಸಿರುವ ಘಟನೆ ಹಿಮಾಚಲ ಪ್ರದೇಶದ ಡಾಲ್ಹೌಸಿ ಬಳಿ ನಡೆದಿದೆ.
ಡಾಲ್ಹೌಸಿ ಬಳಿಯ ಬನಿಖೇತ್ನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಮಂಗಳವಾರ (ಡಿ.31 ರಂದು) ತಡರಾತ್ರಿ ಮೂವರು ಪೊಲೀಸರು ಮದ್ಯ ಮತ್ತು ಆಹಾರಕ್ಕಾಗಿ ಒತ್ತಾಯಿಸಿ ರೆಸಾರ್ಟ್ಗೆ ಬಂದಿದ್ದರು. ಈ ವೇಳೆ ತಡವಾಗಿದೆ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಈಗ ಏನನ್ನು ನೀಡಲು ಆಗುವುದಿಲ್ಲವೆಂದು ರಿಸೆಪ್ಷನಿಸ್ಟ್ ಸಚಿನ್ ಪೊಲೀಸರಿಗೆ ಹೇಳಿದ್ದಾರೆ. ಇದನ್ನು ಕೇಳಿ ಕೋಪಗೊಂಡ ಪೊಲೀಸರು ಸಚಿನ್ ಅವರನ್ನು ಥಳಿಸಲು ಶುರು ಮಾಡಿದ್ದಾರೆ.
ಇದನ್ನೂ ಓದಿ: BBK11: ನೀವೆಷ್ಟು ಕಳಪೆ ಕೊಟ್ರು ನನ್ನ ಮಗಳು ನಮಗೆ ಉತ್ತಮನೇ- ಚೈತ್ರಾ ತಾಯಿ ಭಾವುಕ ನುಡಿ
ಈ ಜಗಳದ ನಡುವೆ ರೆಸಾರ್ಟ್ನ ಜನರಲ್ ಮ್ಯಾನೇಜರ್ ರಾಜಿಂದರ್ ಮಧ್ಯಸ್ಥಿಕೆ ವಹಿಸಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಲಾಗಿದೆ. ರಾಜಿಂದರ್ ಅವರು ಪೆಟ್ಟು ತಿಂದ ಪರಿಣಾಮ ಕೆಳಗೆ ಬಿದ್ದು ಕೆಲ ಸಮಯದ ಬಳಿಕ ಮೃತಪಟ್ಟಿದ್ದಾರೆ ವರದಿ ತಿಳಿಸಿದೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬೀದಿಗಿಳಿದು ಚಂಬಾ ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರು ಅನೂಪ್ ಮತ್ತು ಅಮಿತ್ ಎಂಬ ಇಬ್ಬರು ಕಾನ್ಸ್ಟೆಬಲ್ಗಳನ್ನು ಬಂಧಿಸಿ ಅವರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಆರೋಪಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಚಂಬಾದ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.